Top

'ನಾನು ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದೆ'

ನಾನು ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದೆ
X

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಭೇಟಿ ನೀಡಿದ್ದು, ಸ್ತನ, ಗರ್ಭಕೋಶ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಧೂಮಪಾನ ಚಟದ ಬಗ್ಗೆ ತುಂಬಿದ ಸಭೆಯಲ್ಲಿ ಮಾತನಾಡಿದ್ದು, ನಾನು ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದೆ ಎಂದು ಹೇಳಿದ್ದಾರೆ.

ಅಲ್ಲದೇ ಸಿಗರೇಟ್‌ನಿಂದ ಕ್ಯಾನ್ಸರ್‌ ಬರುತ್ತದೆ ಎಂದು ಹೇಳುತ್ತಾರೆ. ಸಿಗರೇಟ್ ಪ್ಯಾಕ್ ಮೇಲೆ smoking is injuries to health ಅಂತ ಬರೆದಿರುತ್ತೆ. ಆದ್ರೆ ಪ್ಯಾಕ್ ನೋಡಿದ ಕೂಡಲೇ ಸಿಗರೇಟ್ ಸೇದುತ್ತೇವೆ. ನಾನು ಕೂಡ ಸಿಗರೇಟ್ ಸೇದುತ್ತಿದ್ದೆ. 1987 ಆಗಸ್ಟ್ 17 ಸಿಗರೇಟ್ ಬಿಟ್ಟೆ. ಅವತ್ತಿನಿಂದ ವಾಸನೆ ಕಂಡರೂ ಆಗಲ್ಲ. ನಾನು ವಿಲ್ಸ್ ಸಿಗರೇಟ್ ಸೇದುತ್ತಿದ್ದೆ ಎಂದು ಹೇಳಿದ್ದಾರೆ.

ಅಲ್ಲದೇ ವಿದೇಶದಿಂದ ನನ್ನ ಸ್ನೇಹಿತರು ಒಂದು ಬಾಕ್ಸ್ ವೆರೈಟಿ ಸಿಗರೇಟ್ ತಂದು ಕೊಟ್ಟಿದ್ರು. ಅಷ್ಟನ್ನೂ ಸೇದಿಬಿಟ್ಟೆ, ಮರು ಕ್ಷಣವೇ ಬೇಜಾರಾಯ್ತು. ಇಷ್ಟೊಂದು ಸಿಗರೇಟ್ ಸೇದುಬಿಟ್ಟೆ ಅಂಥ ಬೇಜಾರಾಯ್ತು. ಅಂದೇ ಸಿಗರೇಟ್ ಬಿಟ್ಟೆ. ಕೆಟ್ಟ ಚಟಗಳನ್ನು ಆದಷ್ಟು ಬೇಗ ಬಿಟ್ಟರೆ ಒಳ್ಳೆಯದು ಎಂದು ಹೇಳಿ ಸಿದ್ದರಾಮಯ್ಯ ಯುವ ಸಮೂಹಕ್ಕೆ ಸಲಹೆ ನೀಡಿದ್ದಾರೆ.

ಕ್ಯಾನ್ಸರ್ ಒಂದು ಮಾರಕ ರೋಗ, ಕೊನೆ ಹಂತ ತಲುಪಿದಾಗ ರೋಗಿಯನ್ನು ಗುಣಪಡಿಸಲು ಸಾಧ್ಯವಿಲ್ಲ. ಈ ರೀತಿಯ ತಪಾಸಣಾ ಶಿಬಿರದಿಂದ ರೋಗಗಳನ್ನು ಪತ್ತೆಹಚ್ಚಲು ಸಾಧ್ಯ ರೋಗ ಕೊನೆ ಹಂತ ತಲುಪಿದ್ರೆ ಯಾವ ದೇಶಕ್ಕೆ ಹೋದ್ರೂ ವಾಸಿಯಾಗಲ್ಲ. ವಿದೇಶಕ್ಕೆ ಹೋದ್ರೆ ಎಲ್ಲ ರೋಗಗಳೂ ವಾಸಿಯಾಗಲ್ಲ. ಒಂದಷ್ಟು ಜನರಿಗೆ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಹೇಳಿದರು.

Next Story

RELATED STORIES