Top

ಐಸಿಸಿ ರ‍್ಯಾಂಕಿಂಗ್​: ಅಗ್ರ 5ರಲ್ಲಿ ರೋಹಿತ್​, ಧವನ್

ಐಸಿಸಿ ರ‍್ಯಾಂಕಿಂಗ್​: ಅಗ್ರ 5ರಲ್ಲಿ ರೋಹಿತ್​, ಧವನ್
X

ಏಷ್ಯಾಕಪ್​ನಲ್ಲಿ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ಅಗ್ರ 5ರೊಳಗೆ ಪ್ರವೇಶಿಸಿದ್ದಾರೆ.

ರೋಹಿತ್ ಶರ್ಮ ಇದೀಗ ಏಕದಿನ ರ‍್ಯಾಂಕಿಂಗ್​ನಲ್ಲಿ ಎರಡು ಸ್ಥಾನ ಜಿಗಿದು ನಾಯಕ ವಿರಾಟ್ ಕೊಹ್ಲಿ ನಂತರದ ಸ್ಥಾನ ಪಡೆದಿದ್ದಾರೆ. ಶಿಖರ್ ಧವನ್ ಕೂಡ 4 ಸ್ಥಾನ ಬಡ್ತಿ ಪಡೆದು 5ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.

ರೋಹಿತ್ ಶರ್ಮ ಏಷ್ಯಾಕಪ್​ನಲ್ಲಿ ಒಂದು ಶತಕ ಹಾಗೂ 2 ಅರ್ಧಶತಕ ಸೇರಿದಂತೆ 317 ರನ್ ಸಿಡಿಸಿದ್ದರು. ಶಿಖರ್ ಧವನ್ 2 ಶತಕ ಒಳಗೊಂಡಂತೆ 342 ರನ್ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಭಾರತದ ಮಧ್ಯಮ ವೇಗಿ ಜಸ್​ಪ್ರೀತ್ ಬುಮ್ರಾ ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಏಷ್ಯಾಕಪ್ ನಲ್ಲಿ ಸ್ಲಾಗ್ ಓವರ್ ನಲ್ಲಿ ಶಿಸ್ತಿನ ದಾಳಿ ಸಂಘಟಿಸಿದ್ದ ಜಸ್​ಪ್ರೀತ್ ಬುಮ್ರಾ 9 ಓವರ್ ಗಳಲ್ಲಿ ಒಂದೂ ಬೌಂಡರಿ ಬಿಟ್ಟುಕೊಟ್ಟಿರಲಿಲ್ಲ.

ಆಲ್​ರೌಂಡರ್ ವಿಭಾಗದಲ್ಲಿ ಬಾಂಗ್ಲಾದೇಶದ ರಶೀದ್ ಖಾನ್ ನಂ.1 ಸ್ಥಾನ ಅಲಂಕರಿಸಿದ್ದಾರೆ.

Next Story

RELATED STORIES