'ಹಿಂದೂ ಸಂಘಟನೆ ಮುಗಿಸಲು ಕಾಂಗ್ರೆಸ್ ಹುನ್ನಾರ ನಡೆಸಿದೆ'

X
TV5 Kannada30 Sep 2018 6:51 AM GMT
ಬೆಳಗಾವಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದು, ವ್ಯವಸ್ಥಿತವಾಗಿ ಕಾಂಗ್ರೆಸ್ ಸರ್ಕಾರವೂ ಹಿಂದೂ ಕಾರ್ಯಕರ್ತರನ್ನ, ಹಿಂದೂ ಸಂಘಟನೆಯನ್ನ ಮುಗಿಸಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಶುರಾಮ್ ವಾಗ್ಮೋರೆ ಹೇಳಿಕೆ ನೀಡಿದ್ದು, ಎಸ್ಐಟಿ ಪೊಲೀಸರು ಗೌರಿ ಹತ್ಯೆ ಮಾಡಿದ್ದು ನೀವೇ ಎಂದು ಒಪ್ಪಿಕೊಳ್ಳಿ ನಿಮಗೆ 25 ಲಕ್ಷ ಹಣ ಕೊಡುತ್ತೇವೆಂದು, ವಾಗ್ಮೋರೆ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಎಸ್ಐಟಿ ಪೊಲೀಸರ ವಿರುದ್ಧ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
Next Story