Top

'ಲಕ್ಷ್ಮೀ ಹೆಬ್ಬಾಳ್ಕರ್ ಸುಳ್ಳು- ಅಹಂಕಾರದ ಕಾಂಬಿನೇಷನ್'

ಲಕ್ಷ್ಮೀ ಹೆಬ್ಬಾಳ್ಕರ್ ಸುಳ್ಳು- ಅಹಂಕಾರದ ಕಾಂಬಿನೇಷನ್
X

ಬೆಳಗಾವಿ: ಬೆಳಗಾವಿಯಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ ತನ್ನ ರಾಜಕೀಯ ಎದುರಾಳಿ ಲಕ್ಷ್ಮೀ ಹೆಬ್ಬಾಳ್ಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ ಬಿಜೆಪಿ 30 ಕೋಟಿ ಆಫರ್ ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಲಕ್ಷ್ಮೀ ಹೆಬ್ಬಾಳಕರ್ ಸುಳ್ಳು ಮತ್ತು ಅಹಂಕಾರದ ಕಾಂಬಿನೇಷನ್ ಎಂದು ಹೇಳಿದ್ದಾರೆ.

ಅಲ್ಲದೇ, ಲಕ್ಷ್ಮೀ ಹೆಬ್ಬಾಳಕರ್ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿಲ್ಲ. ಡಿ.ಕೆ.ಶಿವಕುಮಾರಗೆ ನಿಷ್ಠರಾಗಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ಹೆಬ್ಬಾಳಕರ್ ಗೆ ಬೆಳೆಸಿ, ಬೆಂಬಲವಾಗಿ ನಿಂತ್ರು. ಡಿ.ಕೆ.ಶಿವಕುಮಾರ ಮಾತುಕೇಳಿ ರಮೇಶ್ ಜಾರಕಿಹೊಳಿ ವಿರುದ್ದವೇ ತಿರುಗಿಬಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳಕರ್ ಅವರನ್ನ ಬಿಜೆಪಿಗೆ ಸೇರಿಸಿಕೊಳ್ಳುವಷ್ಟು ಹೀನಾಯ ಸ್ಥಿತಿಗೆ ಬಿಜೆಪಿ ತಲುಪಿಲ್ಲ. ಹೆಬ್ಬಾಳಕರ್ ಹತ್ತಿರ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಡಿ.ಕೆ.ಶಿವಕುಮಾರ ಮಾತು ಕೇಳಿ ಈ ರೀತಿಯ ಆರೋಪ ಹೆಬ್ಬಾಳಕರ್ ಮಾಡುತ್ತಿದ್ದಾರೆ.

ಇಷ್ಟೊಂದು ಸುಳ್ಳು ಹೇಳಬಾರದು. ಜನ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡ್ತಾರೆ. ಮಾಜಿ ವಿಧಾನ ಪರಿಷತ್ ಸದಸ್ಯ ವೀರಕುಮಾರ್ ಪಾಟೀಲ್ ಅವರನ್ನು ಸೋಲಿಸಲು ಸ್ವಂತ ಹಣ ಖರ್ಚು ಮಾಡಿದ ಶಾಸಕಿ ಇವ್ರು ಎಂದು ಬಿಜೆಪಿಯ ಮಾಜಿ ಶಾಸಕ ಸಂಜಯ ಪಾಟೀಲ ಆರೋಪಿಸಿದ್ದಾರೆ.

Next Story

RELATED STORIES