Top

ಹೆಬ್ಬಾಳ್ಕರ್‌ಗೆ ತಿರುಗೇಟು ಕೊಟ್ಟ ಯಡಿಯೂರಪ್ಪ

ಹೆಬ್ಬಾಳ್ಕರ್‌ಗೆ ತಿರುಗೇಟು ಕೊಟ್ಟ ಯಡಿಯೂರಪ್ಪ
X

ಶಿವಮೊಗ್ಗ: ಬಿಜೆಪಿಯಿಂದ ನನಗೂ ಹಣ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಲಾಗಿತ್ತು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಹಗುರವಾದ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಗೌರವದಿಂದ ಒಂದು ಮಾತನ್ನು ಹೇಳುತ್ತೇನೆ. ಯಾರು ಕೇಳಿದರೂ, ಯಾರು ಕೋಡ್ತಿವಿ ಅಂದ್ರೂ ಬಹಿರಂಗ ಪಡಿಸಿ ಎಂದು ಹೇಳಿದ್ದಾರೆ.

ಅಲ್ಲದೇ, ಇಷ್ಟು ದಿನ ಯಾಕೆ ಸುಮ್ಮನಿದ್ರಿ ಎಂದು ಹೆಬ್ಬಾಳ್ಕರ್‌ಗೆ ಪ್ರಶ್ನಿಸಿರುವ ಬಿಎಸ್‌ವೈ, ಸತ್ಯ ರಾಜ್ಯದ ಜನರಿಗೆ ತಿಳಿಯಲಿ, ಶೀಘ್ರವೇ ಬಹಿರಂಗಪಡಿಸಿ, ವಿನಾಕಾರಣ ಗೊಂದಲ ಉಂಟು ಮಾಡುವ ಪ್ರಯತ್ನ ಬೇಡ. ಆರೋಪ ಮಾಡುವುದೇ ಕಾಂಗ್ರೆಸ್ ನಾಯಕರ ಉದ್ದೇಶವಾಗಿದ್ದರೇ ನನ್ನ ಅಭ್ಯಂತರವಿಲ್ಲ ಎಂದಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಿದ್ದಾರೆ. ನನ್ನನ್ನೂ ಸೇರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರುಗಳಿಗೆ ಹಣ ಆಮಿಷ ಒಡ್ಡಿದ್ದಾರೆ. ನನಗೂ ಮೂವತ್ತು ಕೋಟಿ ಹಣದ ಆಮಿಷ ಮತ್ತು ಸಚಿವ ಸ್ಥಾನ ನೀಡ್ತಿನಿ ಅಂತಾ ಆಮಿಷ ಒಡ್ಡಿದ್ದಾರೆ ಎಂದಿದ್ದರು.

Next Story

RELATED STORIES