Top

ಟೆಕ್ಕಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, ಪತ್ನಿಗೆ ಉದ್ಯೋಗ: ಕೋರ್ಟ್ ಆದೇಶ

ಟೆಕ್ಕಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, ಪತ್ನಿಗೆ ಉದ್ಯೋಗ: ಕೋರ್ಟ್ ಆದೇಶ
X

ಟೆಕ್ಕಿಯನ್ನು ಕ್ರಿಮಿನಲ್ ಎಂದು ಭಾವಿಸಿ ಪೊಲೀಸ್ ಕಾನ್ಸ್​ಟೇಬಲ್ ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲಿ ಟೆಕ್ಕಿ ಪತ್ನಿಗೆ 25 ಲಕ್ಷ ರೂ. ಪರಿಹಾರ ಹಾಗೂ ಸರಕಾರಿ ಉದ್ಯೋಗ ನೀಡುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ.

ಎರಡು ದಿನಗಳ ಹಿಂದೆಯಷ್ಟೇ ನಿಲ್ಲಿಸಲು ಸೂಚಿಸದೇ ಇದ್ದರೂ ಕಾರು ನಿಲ್ಲಿಸದೇ ಹೋಗುತ್ತಿದ್ದ ಆ್ಯಪಲ್ ಸಂಸ್ಥೆ ಉದ್ಯೋಗಿ ವಿವೇಕ್ ತಿವಾರಿಗೆ ಪೊಲೀಸ್ ಕಾನ್ಸ್​ಟೇಬಲ್ ಗುಂಡಿಕ್ಕಿ ಹತ್ಯೆಗೈದಿದ್ದರು. ಈ ಘಟನೆಗೆ ಉತ್ತರ ಪ್ರದೇಶದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಪತಿ ಹತ್ಯೆ ಹಿನ್ನೆಲೆಯಲ್ಲಿ 1 ಕೋಟಿ ರೂ. ಪರಿಹಾರ ಹಾಗೂ ಸರಕಾರಿ ಉದ್ಯೋಗ ನೀಡುವಂತೆ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲದೇ ಸೂಕ್ತ ತನಿಖೆಗೆ ಆದೇಶಿಸಿದ್ದರು.

ವಿಚಾರಣೆಯನ್ನು ತೀವ್ರಗತಿಯಲ್ಲಿ ಪೂರೈಸಿದ ಲಕ್ನೊ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಕುಶಾಲ್ ರಾಜ್ ಶರ್ಮ, ಪರಿಹಾರ ಹಾಗೂ ಸರಕಾರಿ ಉದ್ಯೋಗ ನೀಡುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದರು. ಅಲ್ಲದೇ ಈ ಸಂಬಂಧ 30 ದಿನದೊಳಗಾಗಿ ತನಿಖೆ ಪೂರೈಸುವಂತೆ ಸೂಚಿಸಿದರು.

Next Story

RELATED STORIES