Top

ಕೊನೆಯ ಎಸೆತದಲ್ಲಿ ಜಯ: ಭಾರತ ಮತ್ತೆ `ಏಷ್ಯಾ' ಚಾಂಪಿಯನ್

ಕೊನೆಯ ಎಸೆತದಲ್ಲಿ ಜಯ: ಭಾರತ ಮತ್ತೆ `ಏಷ್ಯಾ ಚಾಂಪಿಯನ್
X

ಕೊನೆಯ ಎಸೆತದವರೆಗೂ ಸಾಗಿದ ಜಿದ್ದಾಜಿದ್ದಿನ ಪಂದ್ಯದಲ್ಲಿ 3 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿದ ಭಾರತ ತಂಡ ಏಷ್ಯಾಕಪ್ ಚಾಂಪಿಯನ್ ಪಟ್ಟ ಉಳಿಸಿಕೊಂಡಿತು. ತೀವ್ರ ಹೋರಾಟ ನಡೆಸಿದ ಬಾಂಗ್ಲಾದೇಶ ಎರಡನೇ ಬಾರಿ ಫೈನಲ್​ ನಲ್ಲಿ ಎಡವಿತು.

ದುಬೈನಲ್ಲಿ ಶುಕ್ರವಾರ ತಡರಾತ್ರಿ ನಡೆದ ಫೈನಲ್​ನಲ್ಲಿ ಬಾಂಗ್ಲಾದೇಶ ತಂಡವನ್ನು 48.3 ಓವರ್ ಗಳಲ್ಲಿ 222 ರನ್​ಗೆ ಆಲೌಟ್ ಮಾಡಿದ ಭಾರತ ಸ್ಪರ್ಧಾತ್ಮಕ ಮೊತ್ತವನ್ನು 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಇದರೊಂದಿಗೆ ಭಾರತ 7ನೇ ಹಾಗೂ ಸತತ 2ನೇ ಬಾರಿ ಏಷ್ಯಾಕಪ್ ಗೆದ್ದ ಸಾಧನೆ ಮಾಡಿತು.

ಭಾರತ ಭರ್ಜರಿ ಫಾರ್ಮ್​ನಲ್ಲಿರುವ ಶಿಖರ್ ಧವನ್ (15) ನಂತರ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ರೋಹಿತ್ 48 ರನ್ ಬಾರಿಸಿ ತಂಡದ ಪರ ವೈಯಕ್ತಿಕ ಗರಿಷ್ಠ ಸಾಧನೆ ಮಾಡಿದರೆ, ಧೋನಿ 36 ರನ್ ಬಾರಿಸಿ ನಿರ್ಗಮಿಸಿದರು. ದಿನೇಶ್ ಕಾರ್ತಿಕ್ (37) ಮತ್ತು ಧೋನಿ 4ನೇ ವಿಕೆಟ್​ಗೆ 54 ರನ್ ಜೊತೆಯಾಟ ನಿಭಾಯಿಸಿದರು.

ಆದರೆ ಕೊನೆಯಲ್ಲಿ ಬಾಲಂಗೋಚಿಗಳು ದಿಟ್ಟ ಪ್ರದರ್ಶನ ನೀಡಿ ತಂಡಕ್ಕೆ ಕೊನೆಯ ಎಸೆತದಲ್ಲಿ ಗೆಲುವು ತಂದುಕೊಟ್ಟರು. ರವೀಂದ್ರ ಜಡೇಜಾ (ಅಜೇಯ 23) ಹಾಗೂ ಭುವನೇಶ್ವರ್ ಕುಮಾರ್ (21) ಹಾಗೂ ಕುಲದೀಪ್ ಯಾದವ್ (5) ಒತ್ತಡದ ನಡುವೆಯೂ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಬಾಂಗ್ಲಾ ಪರ ಆರಂಭಿಕ ಲಿಟೊನ್ ದಾಸ್ ಶತಕ ಬಾರಿಸಿ ಏಕಾಂಗಿಯಾಗಿ ತಂಡವನ್ನು ಮುನ್ನಡೆಸಿದರು. ದಾಸ್ 117 ಎಸೆತಗಳಲ್ಲಿ 12 ಬೌಂಡರಿ ಹಾಗು 2 ಸಿಕ್ಸರ್ ಸೇರಿದ 112 ರನ್ ಬಾರಿಸಿದರು.

  • ಸಂಕ್ಷಿಪ್ತ ಸ್ಕೋರ್
  • ಬಾಂಗ್ಲಾದೇಶ 48.3 ಓವರ್ 222 (ದಾಸ್ 112, ಮೆಹದಿ 32, ಸೌಮ್ಯ ಸರ್ಕಾರ್ 33, ಕುಲದೀಪ್ 45/3, ಕೇದಾರ್ 41/2).
  • ಭಾರತ 50 ಓವರ್ 7 ವಿಕೆಟ್ 223 (ರೋಹಿತ್ 48, ಕಾರ್ತಿಕ್ 37, ಧೋನಿ 36, ಕೇದಾರ್ ಅಜೇಯ 23, ಜಡೇಜಾ 23, ಭುವನೇಶ್ವರ್ 21, ಮುಸ್ತಫಿಜುರ್ 38/2, ರುಬೆಲ್ 26/2).
  • ಪಂದ್ಯಶ್ರೇಷ್ಠ: ಲಿಟೊನ್ ದಾಸ್
  • ಸರಣಿ ಶ್ರೇಷ್ಠ: ಶಿಖರ್ ಧವನ್

Next Story

RELATED STORIES