Top

ದುನಿಯಾ ವಿಜಿಗೆ ಜಾಮೀನು: ಸೋಮವಾರ ತೀರ್ಪು

ದುನಿಯಾ ವಿಜಿಗೆ ಜಾಮೀನು: ಸೋಮವಾರ ತೀರ್ಪು
X

ಜಿಮ್ ಟ್ರೈನರ್ ಮಾರುತಿಗೌಡ ಮೇಲಿನ ಹಲ್ಲೆ ಹಾಗೂ ಕಿಡ್ನಾಪ್ ಪ್ರಕರಣದಲ್ಲಿ ನಟ ದುನಿಯಾ ವಿಜಿ ಹಾಗೂ ಸಹಚರರು ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿದೆ. ಇದರೊಂದಿಗೆ ದುನಿಯಾ ವಿಜಿಗೆ ಇನ್ನೆರಡು ದಿನ ಜೈಲಿನಲ್ಲೇ ಕಳೆಯಬೇಕಾಗಿದೆ.

7ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ, ವಾದ-ಪ್ರತಿವಾದಗಳನ್ನು ಆಲಿಸಿದ್ದು, ತೀರ್ಪನ್ನು ಅಕ್ಟೋಬರ್ 1ಕ್ಕೆ ಕಾಯ್ದಿರಿಸಿದರು.

ಸೆಕ್ಷನ್ 326 ಪ್ರಕಾರ ಗಂಭೀರವಾಗಿ ಹಲ್ಲೆಯಾಗಿಲ್ಲ. ವಿಕ್ರಮ್ ಆಸ್ಪತ್ರೆಯಲ್ಲಿ ಮಾರುತಿಗೌಡ ನೀಡಿದ ಹೇಳಿಕೆಯನ್ನು ಸಲ್ಲಿಸಿದ್ದಾರೆ. ಮೊದಲು ಮಾರುತಿ ನೀಡಿದ ಹೇಳಿಕೆಯನ್ನು ಪೊಲೀಸರು ಸಲ್ಲಿಸಿಲ್ಲ. ಮಾರುತಿ ಕೈಯಿಂದ ಹಲ್ಲೆ ಮಾಡಿದ್ದು ಮಾರಕಾಸ್ತ್ರ ಬಳಸಿಲ್ಲ. ಹೀಗಾಗಿ ಜಾಮೀನು ನೀಡುವಂತೆ ವಿಜಿ ಪರ ವಕೀಲರು ವಾದ ಮಂಡಿಸಿದರು.

ಜಾಮೀನು ನೀಡಿಕೆಗೆ ಆಕ್ಷೇಪ ಸಲ್ಲಿಸಿದ ಸರಕಾರಿ ವಕೀಲರು, ದುನಿಯಾ ವಿಜಿ ಈ ಹಿಂದೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದವು. ದುನಿಯಾ ವಿಜಿ ಸಾಕಷ್ಟು ಪ್ರಭಾವಿ ಆಗಿದ್ದಾರೆ. ಹೀಗಾಗಿ ಜಾಮೀನು ನೀಡದಂತೆ ನೀಡದಂತೆ ಮನವಿ ಮಾಡಿದರು.

ವಿಜಿ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ. ಗಾಯಾಳು ಮಾರುತಿಗೌಡ ಆಸ್ಪತ್ರೆಯಿಂದ ಡಿಸ್​ಚಾರ್ಚ್ ಆಗಿದ್ದಾರೆ ಎಂದು ವಿಜಿ ಪರ ವಕೀಲರು ಹೇಳಿದರು. ಈ ಮೂಲಕ ಪ್ರಕರಣ ರಾಜಿ ಸಂಧಾನದಲ್ಲಿ ಇತ್ಯರ್ಥವಾಗುವ ಸುಳಿವು ದೊರೆತಿದೆ.

Next Story

RELATED STORIES