Top

ಪಾಲಿಕೆ ಮೈತ್ರಿಗೆ ಕಂಟಕ ತರಲು ಹೊರಟವರ ವಿರುದ್ಧ ಕ್ರಮ!

ಬೆಂಗಳೂರು : ಪಾಲಿಕೆ ಮೈತ್ರಿ ಆಡಳಿತಕ್ಕೆ ಡ್ಯಾಮೇಜ್ ಮಾಡಲು ಹೊರಟ ಸ್ವಪಕ್ಷೀಯರ ವಿರುದ್ಧ ಕ್ರಮ ಕೈಗೊಳ್ಳಲು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಮುಂದಾಗಿದೆ. ವಿಪ್ ಉಲ್ಲಂಘಿಸೋ ಮೂಲಕ, ಜೆಡಿಎಸ್‌ನ ಇಬ್ಬರು ಸದಸ್ಯರು ಬಿಜೆಪಿಗೆ ಬೆಂಬಲಿಸಲು ಮುಂದಾಗಿದ್ರು.. ಅಲ್ಲದೆ ಕಾಂಗ್ರೆಸ್ ಸದಸ್ಯರು ಗೈರಾಗೋ ಮೂಲಕ ಬೆಂಬಲ ವ್ಯಕ್ತಪಡಿಸಿದ್ದು. ಸ್ಪಪಕ್ಷೀಯರ ವಿರುದ್ಧ ಹೈಕಮಾಂಡ್ ಕ್ರಮ ಜರುಗಿಸಲು ಮುಂದಾಗಿದೆ.

ಹೌದು.. ಕಳೆದ ಮೂರು ವರ್ಷಗಳಿಂದ ಸರ್ಕಸ್ ಮಾಡಿ ಪಾಲಿಕೆಯ ಚುಕ್ಕಾಣಿ ಹಿಡಿದಿರೋ ಪಾಲಿಕೆಯ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಆಡಳಿತಕ್ಕೆ, ಸ್ಪಪಕ್ಷೀಯರೇ ಮುಳ್ಳಾಗ ಹೊರಟಿದ್ದಾರೆ. ಮೇಯರ್-ಉಪಮೇಯರ್ ಚುನಾವಣೆಗೆ ಬಿಜೆಪಿ ಬೆಂಬಲಿಸೋ ಮೂಲಕ, ಬಹಿರಂಗವಾಗಿ ಅಸಮದಾನ ಹೊರ ಹಾಕಿದ್ದು. ಇದೀಗ ಅವರ ವಿರುದ್ಧ ಚಾಟಿ ಬೀಸಲು ಮೈತ್ರಿ ಪಕ್ಷಗಳು ಮುಂದಾಗಿವೆ.

ಈ ಬಾರಿ ಮೈತ್ರಿ ಆಡಳಿತದ ವಿರುದ್ಧ ತಿರುಗಿ ಬಿದ್ದಿರೋ ಸ್ಪಪಕ್ಷಿಯರು ಹಾಗೂ ಪಕ್ಷೇತರರನ್ನ ಹಿಡಿದಿಡಲು ಸಾಧ್ಯವಾಗದೆ.. ದೊಡ್ಡ ಹೈಡ್ರಾಮವೇ ನಡೆದು ಹೋಯಿತು.. ಮೇಯರ್-ಉಪಮೇಯರ್ ಯಾರಾಗ್ತಾರೆ ಅನ್ನುವಂತ ಕೂತೂಹಲ ಎಲ್ಲರನ್ನೂ ಕೆರಳಿಸುವಂತೆ ಮಾಡಿತ್ತು.

ಒಂದೆಡೆ ಜೆಡಿಎಸ್‌ನ ನಾಲ್ಕು ಸದಸ್ಯರು ಬಿಜೆಪಿಗೆ ಬೆಂಬಲಿಸಲು ಮುಂದಾಗಿ, ದೇವದಾಸ್ ಹಾಗೂ ಮಂಜುಳಾ ನಾರಾಯಣ ಸ್ವಾಮಿ ಬಿಜೆಪಿ ಸದ್ಯಸರ ಜೊತೆ ಆಗಿಸಿದ್ರು.. ಇಮ್ರಾನ್ ಅವರನ್ನ ಜಮೀರ್ ಸಮಾಧಾನ ಪಡಿಸಿದ್ರೆ, ನಜೀಮಾ ಖಾನ್ ಗೈರಾಗೋ ಮೂಲಕ ಆತಂಕ ಸೃಷ್ಠಿಸಿದ್ರು.. ಹೀಗಾಗಿ ಇವರ ವಿರುದ್ಧ ಹೈಕಮಾಂಡಿಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳಲಿದ್ದಾರೆ ಅಂತ ಪಾಲಿಕೆಯ ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾ ನಾರಾಯಣ್ ತಿಳಿಸಿದ್ದಾರೆ.

ಇನ್ನು, ಕಾಂಗ್ರೆಸ್ ಪಕ್ಷದಲ್ಲೂ ಕೂಡ ಹೆಚ್ಚು ಕಡಿಮೆ ಇದೇ ರೀತಿ ಆಗಿದ್ದು, ನಂಬಿದ್ದ ಇಬ್ಬರು ಪಕ್ಷೇತರರು ಬಿಜೆಪಿಗೆ ಬೆಂಬಲಿಸಿ ಆಗಮಿಸಿದ್ರು.. ಸದಸ್ಯೆ ಆಶಾ ಸುರೇಶ್ ಗೈರಾಗಿದ್ರೆ, ಲಲಿತಾ ತಿಮ್ಮನಂಜಯ್ಯ ತಡವಾಗಿ ಆಗಮಿಸಿದ್ರು.. ಇನ್ನು ಶಾಸಕ ರೋಶನ್ ಬೇಗ್ ಅನಾರೋಗ್ಯದ ನೆಪವೊಡ್ಡಿ ಬರಲೇ ಇಲ್ಲ.. ಹೀಗಾಗಿ ಮೈತ್ರಿ ಪಕ್ಷದ ಸಂಖ್ಯಾ ಬಲ ಕುಸಿತವಾಗಿದ್ದು, ಕ್ಷಣಕಾಲ ಅಲ್ಲೋಲ ಕಲ್ಲೋಲ ಸೃಷ್ಠಿಸಿತ್ತು.. ಹೀಗಾಗಿ ಪಕ್ಷಗಳಿಗೆ ಸಂಕಷ್ಟ ಉಂಟುಮಾಡಿದವರಿಗೆ ನೋಟೀಸ್ ನೀಡಲಾಗಿದೆ ಎಂದು ಪಾಲಿಕ ಆಡಳಿತ ಪಕ್ಷದ ನಾಯಕ ಶಿವರಾಜ್‌ ತಿಳಿಸಿದ್ದಾರೆ.

ಬಿಜೆಪಿ ಮಾಡಿದ್ದ ಆಪರೇಷನ್ ಕಮಲಕ್ಕೆ ಒಬ್ಬ ಸದಸ್ಯರ ಬೆಂಬಲ ಮಾತ್ರ ಕಡಿಮೆ ಇತ್ತು.. ಪಕ್ಷೇತರರ ಪೈಕಿ ಒಬ್ಬರು ಬೆಂಬಲಿಸಿದ್ರೆ, ಇಲ್ಲ ಕೈ ಎತ್ತುವ ವೇಳೆ ಕೈ ಕೋಟ್ಟಿದ್ರೆ ಮೈತ್ರಿ ಆಡಳಿತಕ್ಕೆ ದೊಡ್ಡ ಕಂಟಕವೇ ಎದುರಾಗ್ತಿತ್ತು.. ಹೀಗಾಗಿ ಮುಂದೆ ಈ ರೀತಿ ಆಗದಿರಲಿ ಅಂತ, ಈಗಲೇ ಎಚ್ಚರಿಸೋ ಕ್ರಮಕ್ಕೆ ಮೈತ್ರಿ ಪಕ್ಷಗಳು ಮುಂದಾಗ್ತಿವೆ.

ವರದಿ : ಮಂಜುನಾಥ್ ಎಸ್​, ಟಿವಿ5 ಬೆಂಗಳೂರು

Next Story

RELATED STORIES