23 ವರ್ಷದ ಹಿಂದಿನ ಸೇತುವೆ, ಕೆಲವೇ ಸೆಕೆಂಡ್‌ನಲ್ಲಿ ಧ್ವಂಸ : ಯಾಕೆ ಗೊತ್ತೇ?

ಪೂರ್ವ ಚೀನಾ : ಈ ಸೇತುವ ಕಟ್ಟಲು ಅದೆಷ್ಟು ವರ್ಷ ತೆಗೆದುಕೊಂಡಿತ್ತೋ ಗೊತ್ತಿಲ್ಲ. ಅದೆಷ್ಟು ಜನರ ಪರಿಶ್ರಮ ಅಡಗಿತ್ತೋ ಗೊತ್ತಿಲ್ಲ.

ಆದರೇ 5 ಸಾವಿರ ಕಂಬಳ ಮೂಲಕ ನಿರ್ಮಿತವಾಗಿದ್ದ ಸೇತುವೆಯನ್ನು ಕೆಡವಿದ್ದು ಮಾತ್ರ ಕೆಲವೇ ಕೆಲವು ಸೆಕೆಂಡ್‌ಗಳಲ್ಲಿ. ಕಣ್ ಮುಚ್ಚಿ ಕಣ್ ತೆರೆಯುವುದರೊಳಗೆ, ಸೇತುವೆಯೇ ಮಾಯ.

 

ಹೌದು ಇಂತಹ ಘಟನ, ಪೂರ್ವ ಚೀನಾ ದೇಶದಲ್ಲಿ ನಡೆದಿದೆ. ಸುಮಾರು 23 ವರ್ಷಗಳಾಗಿದ್ದ ಸೇತುವೆ, ಜನರ ಓಡಾಟಕ್ಕೆ ಯೋಗ್ಯವಿಲ್ಲ ಎನ್ನುವ ಕಾರಣಕ್ಕೆ, ಚೀನಾದ ಇಂಜಿನೀಯರ್‌ಗಳು ಸಿಡಿಮದ್ದು ಇಟ್ಟು ಧ್ವಂಸ ಮಾಡಿದ್ದಾರೆ.

ಆ ಸೇತುವೆಯೇ.. ಮಲ್ಟಿಲೇನ್‌ ರಸ್ತೆ ಒಳಗೊಂಡಿದ್ದ, ಜಿಯಾನ್‌ ಗಂಜಿಯಂಗ್‌ ಸೇತುವೆ. ಈ ಸೇತುವೆಯನ್ನು ನಿರ್ಮಾಣ ಮಾಡಿ 23 ವರ್ಷಗಳು ಕಳೆದಿತ್ತು.

ಹೀಗಾಗಿ ಸೇತುವೆಯು ಅಪಾಯದಲ್ಲಿದೆ ಎಂದು ನಿರ್ಧರಿಸಿದ ಪೂರ್ವ ಚೀನಾ, ಸೇತುವೆಗೆ 61 ಕಡೆಯಲ್ಲಿ ಸಿಡಿಮದ್ದು ಇಟ್ಟಿತ್ತು.

ಸಿಡಿಮದ್ದು ಒಮ್ಮೆಲೇ ಅಧಿಕಾರಿಗಳಿಂದ ಸೂಚನೆ ಬಂದ ತಕ್ಷಣವೇ, 5 ಸಾವಿರದ 173 ಮೀಟರ್ ದೂರದಿಂದ ಬಟ್ ಒತ್ತುವ ಮೂಲಕ ಒಟ್ಟು 61 ಪೀಸುಗಳಾಗಿ ಧ್ವಂಸ ಮಾಡಲಾಯಿತು.

ಸೇತುವೆ ಧ್ವಂಸದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದ ಪೂರ್ವ ಚೀನಾ ಅಧಿಕಾರಿಗಳು, ಹತ್ತಿರದ ನಿವಾಸಿಗಳನ್ನು ಬೇರೆಡೆಗೆ ತೆರಳುವಂತೆ ಸೂಚಿಸಿದ್ದರು.

ಸೇತುವೆಯ ಧ್ವಂಸದ ನಂತ್ರ ಎದ್ದ ದೂಳಿನಿಂದಲೂ ತೊಂದರೆಯಾಗದಂತೆ ಕ್ರಮ ವಹಿಸಲಾಗಿತ್ತು. ಈ ಎಲ್ಲಾ ಸುರಕ್ಷತಾ ಕ್ರಮ ವಹಿಸಿದ ನಂತ್ರ, ಕೆಲವೇ ಸೆಕೆಂಡುಗಳಲ್ಲಿ ಸೇತುವೆಯನ್ನು ಟಿಎನ್‌ಟಿ ಬಳಸಿ ಧ್ವಂಸಗೊಳಿಸಲಾಯಿತು.

ಅಂದಹಾಗೇ ಈ ಸೇತುವೆಯ ಮೇಲಿನಿಂದ ಸಾಗಿ 4.8 ಮಿಲಿಯನ್‌ ಜನರು ತಮ್ಮ ಜೀವನ ನಡೆಸುತ್ತಿದ್ದರು.

ಇಂತಹ ಸೇತುವ ಯಾವಾಗ ಪ್ರಾಣಾಪಾಯ ತಂದೊಡ್ಡುತ್ತದೋ ಎಂದು ಈ ಕ್ರಮವನ್ನು ಪೂರ್ವ ಚೀನಾ ಅನುಸರಿಸಿದೆ.

ಈ ಸೇತುವೆಯ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯ ಬುರುವ ಜನವರಿ 2019ರಿಂದ ಆರಂಭಗೊಳಿಸಲಿದೆ. ಹೀಗೆ ಆರಂಭವಾದ ಸೇತುವ ನಿರ್ಮಾಣಕಾರ್ಯ 2021ರ ವೇಳೆಗೆ ಮುಗಿಯು ಆಶಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂದಹಾಗೇ ಜಿಯಾನ್‌ ಗಂಜಿಯಂಗ್‌ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು 23 ಸೆಪ್ಟಂಬರ್ 1993ರಲ್ಲಿ. ಈ ಕಾಮಗಾರಿ ಮುಗಿದು, ಜನರ ಸಂಚಾರಕ್ಕೆ ಮುಕ್ತಗೊಳಿಸಿದ್ದು, ಡಿಸೆಂಬರ್ 16, 1995ರಂದು ಆಗಿದೆ.

ಇಂತಹ ಸೇತುವೆಗಳು ನಮ್ಮ ದೇಶದಲ್ಲಿ ಅದೆಷ್ಟು ಇವೆಯೋ ಗೊತ್ತಿಲ್ಲ. ಆದರೇ ಹಳೆಯ ಸೇತುವೆ ಎಂದು ನಾಶ ಮಾಡುವ ಬದಲು, ಅಹಿತಕರ ಘಟನೆ ನಡೆದ ನಂತ್ರವೇ ಎಚ್ಚೆತ್ತುಕೊಳ್ಳುವುದು ಅಲ್ವಾ.?

Recommended For You

Leave a Reply

Your email address will not be published. Required fields are marked *