ವಿಮಾನದಿಂದ ನದಿಗೆ ಬಿದ್ದರು, ದೋಣಿಯಲ್ಲಿ ದಡ ಸೇರಿದರು!

X
TV5 Kannada28 Sep 2018 4:15 PM GMT
ಹಾಂಕಾಂಗ್ : ವಿಮಾನವೊಂದು ರನ್ ವೇ ಯಿಂದ ಸರೋವರಕ್ಕೆ ಬಿದ್ದು ಪ್ರಯಾಣಿಕರೂ ಪ್ರಾಣ ರಕ್ಷಣೆಗಾಗಿ ಈಜಿರುವ ಘಟನೆ ಮಜುರೊದಲ್ಲಿ ನಡೆದಿದೆ.
ನಿಯುಗಿನಿ ಬೋಯಿಂಗ್ ವಿಮಾನ ಮೈಕ್ರೋನೇಶಿಯಾದ ವೆನೋ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿತ್ತು. ಆದರೆ ಈ ಸಂದರ್ಭದಲ್ಲಿ ಉಂಟಾದ ಪ್ರಮಾದದಿಂದಾಗಿ ಚುಕ್ ಸರೋವರದಲ್ಲಿ ಬಿದ್ದಿದೆ.
ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಪ್ರಯಾಣಿಕರ ನೆರವಿಗೆ ಧಾವಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಏರ್ ನಿಯುಗಿನಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ.
ಈ ವಿಮಾನ ಈ ಹಿಂದಿನ ವರ್ಷವೂ ಸಹ ಮತ್ತೊಂದು ವಿಮಾನಕ್ಕೆ ಎದುರಾಗಿ ಅಪಘಾತಕ್ಕೀಡಾಗಿತ್ತು ಎಂದು ತಿಳಿದುಬಂದಿದೆ.
ಲ್ಯಾಂಡಿಂಗ್ ವೇಳೆ ಹದಗೆಟ್ಟಿದ್ದ ವಾತಾವರಣ ಹಾಗೂ ಮಳೆಯಿಂದಾಗಿ ಈ ಅವಗಢ ಸಂಭವಿಸಿದೆ ಎಂದು ತಿಳಿದುಬಂದಿದೆ.
- 47 passengers Air Niugini aircraft breaking news Chuuk International Airport Chuuk lagoon kannada news kannada news today karnataka news today latest karnataka news Micronesia Micronesian journalist plane missed the runway remote island of Weno topnews tv5 kannada tv5 kannada live tv5 live tv5kannada news ಚುಕ್ ಸರೋವರ ನಿಯುಗಿನಿ ಬೋಯಿಂಗ್ ವಿಮಾನ ಮೈಕ್ರೋನೇಶಿಯಾ ವೆನೋ ವಿಮಾನ ನಿಲ್ದಾಣ
Next Story