Top

ನನಗೂ ಬಿಜೆಪಿಯಿಂದ ಆಫರ್ ಬಂದಿತ್ತು- ಹೆಬ್ಬಾಳ್ಕರ್

ನನಗೂ ಬಿಜೆಪಿಯಿಂದ ಆಫರ್ ಬಂದಿತ್ತು- ಹೆಬ್ಬಾಳ್ಕರ್
X

ಬೆಳಗಾವಿ: ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದು, ನನಗೂ ಬಿಜೆಪಿಯಿಂದ ಆಫರ್ ಬಂದಿತ್ತು ಎಂದಿದ್ದಾರೆ.

ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಿದ್ದಾರೆ. ನನ್ನನ್ನೂ ಸೇರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರುಗಳಿಗೆ ಹಣ ಆಮಿಷ ಒಡ್ಡಿದ್ದಾರೆ. ನನಗೂ ಮೂವತ್ತು ಕೋಟಿ ಹಣದ ಆಮಿಷ ಮತ್ತು ಸಚಿವ ಸ್ಥಾನ ನೀಡ್ತಿನಿ ಅಂತಾ ಆಮಿಷ ಒಡ್ಡಿದ್ದರು ಎಂದಿದ್ದಾರೆ .

ಆದರೆ ನಾನು ಬಿಜೆಪಿಗೆ ಹೋಗಲಿಲ್ಲ. ನನಗೆ ಬಂದ ಮೆಸೇಜ್‌ಗಳನ್ನು ಪೋನ್ ಕಾಲ್‌ಗಳನ್ನು ಪಕ್ಷದ ಮುಖಂಡರಿಗೆ ತೋರಿಸಿದ್ದೇನೆ. ನಮ್ಮ ಶಾಸಕರು ಗಟ್ಟಿಯಾಗಿದ್ದಾರೆ. ಎಲ್ಲಿಯೂ ಹೋಗಲ್ಲ. ಸರ್ಕಾರ ಸುಭದ್ರವಾಗಿರುತ್ತೆ ಎಂದು ಹೇಳಿದ್ದಾರೆ.

ಇನ್ನು ತಾವು ಅತಿ ಹೆಚ್ಚು ಮತಗಳಿಂದ ಆಯ್ಕೆಯಾದ ವಿಚಾರದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿದ್ದು, ಹೆಬ್ಬಾಳ್ಕರ್ ಯಾವುದೋ ಒಂದು ಗಾಳಿಯಲ್ಲಿ ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗಿ ಬಂದಿದ್ದಾರೆ ಎಂದು ಯಾರೋ ಮಾತನಾಡುತ್ತಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಗೆ ಒಂದು ಲಕ್ಷ ಮತಗಳನ್ನು ನೀಡೋಣ. ಅವಾಗ ಗೊತ್ತಾಗುತ್ತೆ ನಾನು ಗಾಳಿನೋ, ಗಟ್ಟಿನೊ ಅಂತ ಎಂದು ಸತೀಶ್ ಜಾರಕಿಹೊಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

https://youtu.be/OqQLZn3P3ZM

Next Story

RELATED STORIES