Top

ಬೆಂಗಳೂರಿನಲ್ಲಿ ದೋಸ್ತಿ.. ಹಾಸನದಲ್ಲಿ ಕುಸ್ತಿ..!

ಬೆಂಗಳೂರಿನಲ್ಲಿ ದೋಸ್ತಿ.. ಹಾಸನದಲ್ಲಿ ಕುಸ್ತಿ..!
X

ಹಾಸನ: ರಾಜ್ಯದಲ್ಲೆನೋ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಇದೆ. ಆದ್ರೆ ಹಾಸನದಲ್ಲಿ ಮಾತ್ರ ಜೆಡಿಎಸ್ ಕಾಂಗ್ರೆಸ್ ಜಟಾಪಟಿ ಮುಂದುವರೆದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಂದು ಹಾಸನದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಭಾವಾನಿ ರೇವಣ್ಣ ಹಾಗೂ ಮಾಜಿ ಸಚಿವ ಎ.ಮಂಜು ಪುತ್ರ ಮಂತರ್ ಗೌಡ ನಡುವೇ ಜಟಾಪಟಿಯೇ ನಡೆದು ಹೋಯ್ತು.

ರೊಚ್ಚಿಗೆದ್ದ ಸಚಿವ ಹೆಚ್ ಡಿ ರೇವಣ್ಣ ಪತ್ನಿ ಹಾಗೂ ಹಾಸನ ಜಿಲ್ಲಾಪಂಚಾಯತ್ ಸದಸ್ಯೆ ಭಾವಾನಿ ರೇವಣ್ಣ, ಕುಮಾರಸ್ವಾಮಿನ ಸಿಎಂ ಮಾಡಿ ಅಂತ ಕುಮಾರಸ್ವಾಮಿ ಅಥವಾ ದೇವೇಗೌಡರು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ ಅಂತ ಬಿಟ್ಟ ಭಾವನಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಭಾವಾನಿ ರೇವಣ್ಣ ಹೀಗೆ ಜಾಟಾಪಟಿಗೆ ಬಿದ್ದಿದ್ದು ಮಾಜಿ ಸಚಿವ ಎ.ಮಂಜು ಪುತ್ರ ಹಾಗೂ ಹಾಸನ ಜಿಲ್ಲಾ ಪಂಚಾಯತ್ ಸದಸ್ಯ ಮಂತರ್ ಗೌಡರ ಜೊತೆ.

ಅಷ್ಟಕ್ಕೂ ಈ ಜಾಟಾಪಟಿಗೆ ಕಾರಣವಾಗಿದ್ದು ಹಾಸನ ಜಿಲ್ಲಾ ಪಂಚಾಯತ್‌ನ ಸ್ಥಾಯಿಸಮೀತಿ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನ ಆಯ್ಕೆ ವಿಚಾರ. 35 ಸ್ಥಾಯಿ ಸಮೀತಿ ಸದಸ್ಯ ಸ್ಥಾನ ಹೊಂದಿರೋ ಹಾಸನ ಜಿಲ್ಲಾ ಪಂಚಾಯತ್ ನಲ್ಲಿ ಜೆಡಿಎಸ್ ಕಾಂಗ್ರೆಸ್‌ಗೆ ಹತ್ತು ಸ್ಥಾನ ಬಿಟ್ಟು ಕೊಟ್ಟಿದೆ. ಆದ್ರೆ ಎರಡು ಸದಸ್ಯ ಸ್ಥಾನದ ಹಣಕಾಸು ಮತ್ತು ಕೃಷಿ ಸಮಿತಿಯಲ್ಲಿ ರವಿ ಹಾಗೂ ರೇವಣ್ಣ ಮಾತ್ರ ಸಮೀತಿಯನ್ನೆ ನೀಡಬೇಕೆಂದು ಪಟ್ಟು ಹಿಡಿದರು. ಈ ವೇಳೆ ನೀವು ಕೇಳಿದ್ದನ್ನ ಕೊಡಲು ನಮಗೆ ಸಾಧ್ಯವಿಲ್ಲವೆಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಏರು ಧ್ವನಿಯಲ್ಲಿ ಮಾತ್ನಾಡಿದ್ರು. ಜೊತೆಗೆ ನೀವು ಗೆದ್ದಿರೋದೆ ಕಡಿಮೆ ಸ್ಥಾನ ನಾವು ಕೊಟ್ಟಿದ್ದನ್ನ ತಗೋಳಿ ಅಂತ ಹೇಳಿದ್ರು.

ಶಾಸಕ ಶಿವಲಿಂಗೇಗೌಡ ಮಾತಿನಿಂದ ಸಿಟ್ಟಿಗೆದ್ದ ಮಂತರ್ ಗೌಡ ನೀವು ಜೆಡಿಎಸ್ ನವರು 35 ಸ್ಥಾನ ಗೆದ್ದಿದ್ದರೂ ನಾವು ನಿಮಗೆ ಸಿಎಮ್ ಸ್ಥಾನವನ್ನೇ ಬಿಟ್ಟುಕೊಟ್ಟಿದ್ದೇವೆ ಅಂತ ಶಾಸಕ ಶಿವಲಿಂಗೇಗೌಡ ವಿರುದ್ದ ತಿರುಗಿಬಿದ್ರು.

ಯಾವಾಗ ಮಂತರ್ ಗೌಡ ನಾವು ನಿಮಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದೇವೆ ಅಂತ ಕಿಚಾಯಿಸಿದ್ರೊ ಅಲ್ಲಿ ತನಕ ಸುಮ್ಮನಿದ್ದ ಭವಾನಿ ರೇವಣ್ಣ ಸಿಟ್ಟಿಗೆದ್ರು . ಕೂಡಲೇ ಎದ್ದು ನಿಂತು ಕುಮಾರಸ್ವಾಮಿ ಸಿಎಂ ಮಾಡಿ ಅಂತ ದೇವೇಗೌಡರು , ಕುಮಾರಸ್ವಾಮಿ ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ವಿಧಾನಸಭೆ ರಾಜಕೀಯ ಇಲ್ಲಿ ಮಾತಾಡುವ ಅಗತ್ಯ ಇಲ್ಲ ಅಂತ ರೊಚ್ಚಿಗೆದ್ರು. ಇದ್ರಿಂದ ಕೆಲಕಾಲ ಹೊಯ್ಸಳ ಸಭಾಂಗಣ ರಣರಂಗದಂತೆ ಭಾಸವಾಯ್ತು.

ನಂತರ ಸಭೀಕರೆಲ್ಲಾ ಇಬ್ಬರನ್ನ ಸಮಾಧಾನಿಸಿದರು. ಇಷ್ಟೆಲ್ಲಾ ಆದ್ರು ನಮಗೆ ಸರಿಯಾದ ಸ್ಥಾನ ಮಾನ ನೀಡಿಲ್ಲವೆಂದು ಹಾಸನ ಜಿಲ್ಲಾಪಂಚಾಯತ್ ಅಧ್ಯೆಕ್ಷೆ ಶ್ವೇತಾ ದೇವರಾಜ್ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ರಾಜ್ಯದಲ್ಲಿ ದೋಸ್ತಿ ಸರ್ಕಾರ ಇದ್ರು ಹಾಸನದಲ್ಲಿ ಮಾತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಕುಸ್ತಿ ಮುಂದುವರೆದಿದೆ ಅನ್ನೋದು ಇಂದು ಹಾಸನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಗ್ಗಜ್ಜಾಹೀರಾಯಿತು.

ಪ್ರಕಾಶ್ ಬೆಳವಾಡಿ tv5 ಹಾಸನ

Next Story

RELATED STORIES