Top

ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಟ್ರೇಲರ್ ರಿಲೀಸ್

ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಟ್ರೇಲರ್ ರಿಲೀಸ್
X

ಬಾಲಿವುಡ್ ನಿರ್ದೇಶಕ ಯಶ್ ರಾಜ್ ಹುಟ್ಟುಹಬ್ಬದ ವಿಶೇಷವಾಗಿ ಬಾಲಿವುಡ್‌ನ ಬಹುನಿರೀಕ್ಷಿತ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಆಫಿಶಿಯಲ್ ಟ್ರೇಲರ್ ರಿಲೀಸ್ ಆಗಿದೆ. ಯೂಟ್ಯೂಬ್‌ನಲ್ಲಿ ಈ ಟ್ರೇಲರ್ ಭಾರೀ ಸಂಚಲನ ಸೃಷ್ಟಿಸಿದ್ದು, 5ಲಕ್ಷಕ್ಕೂ ಹೆಚ್ಚು ಜನ ಟ್ರೇಲರ್ ವೀಕ್ಷಿಸಿದ್ದಾರೆ. ಅಲ್ಲದೇ ಫೇಸ್‌ಬುಕ್‌ನಲ್ಲೂ ಕೂಡ 2 ಲಕ್ಷಕ್ಕೂ ಹೆಚ್ಚು ಜನ ಥಗ್ಸ್ ಆಫ್ ಹಿಂದೂಸ್ತಾನ್ ಟ್ರೇಲರ್ ವೀಕ್ಷಿಸಿದ್ದಾರೆ.

ಮೊದಲ ಬಾರಿ ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್‌ ಖಾನ್ ಮತ್ತು ಬಿಗ್‌ಬಿ ಅಮಿತಾಬ್ ಬಚ್ಚನ್ ಒಟ್ಟಿಗೆ ಅಭಿನಯಿಸಿರುವ ಚಿತ್ರ ಇದಾಗಿದ್ದು, ಭಾರೀ ಕುತೂಹಲ ಹುಟ್ಟಿಸಿದೆ.ಇನ್ನು ದಂಗಲ್ ಖ್ಯಾತಿಯ ಫಾತೀಮಾ ಸನಾ ಶೇಖ್ ಕೂಡ ಈ ಚಿತ್ರದಲ್ಲಿ ನಟಿಸಿದ್ದು, ಕತ್ರೀನಾ ಕೈಫ್‌ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ.

ಅಮೀರ್ ಖಾನ್ ಫಿರಂಗಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಬ್ರಿಟಿಷರ ಪರ ಕಾರ್ಯನಿರ್ವಹಿಸುತ್ತಾರೆ. ಬ್ರಿಟಿಷರ ದುರಾಡಳಿತ ಸಹಿಸದ ಖುದಾಭಕ್ಷ ಆಜಾದ್ ಎಂಬ ಪಾತ್ರಕ್ಕೆ ಅಮಿತಾಬಚ್ಚನ್ ಜೀವತುಂಬಿದ್ದಾರೆ. ಇನ್ನು ನರ್ತಕಿಯ ಪಾತ್ರದಲ್ಲಿ ಸುರೈಯ್ಯಾ ಆಗಿ ಕತ್ರೀನಾ ಕೈಫ್ ಮಿಂಚಿದ್ದರೆ, ಜಾಫೀರಾ ಎಂಬ ದೇಶಪ್ರೇಮಿಯಾಗಿ ಫಾತೀಮಾ ನಟಿಸಿದ್ದಾರೆ.

1975ರಲ್ಲಿ ನಡೆದ ಘಟನೆಯ ಆಧಾರಿತ ಸಿನಿಮಾ ಇದಾಗಿದ್ದು, ಈಸ್ಟ್ ಇಂಡಿಯಾ ಕಂಪನಿ ನಡೆಸಲು ಬಂದ ಬ್ರಿಟಿಷರು, ವ್ಯಾಪಾರ ಮಾಡುವುದನ್ನು ಬಿಟ್ಟು, ಯಾವ ರೀತಿ ಭಾರತೀಯರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ, ಆ ದಬ್ಬಾಳಿಕೆಯನ್ನು ಸಹಿಸದ ಆಜಾದ್ ಯಾವ ರೀತಿ ಬ್ರಿಟಿಷರನ್ನು ಬಗ್ಗುಬಡಿಯುತ್ತಾನೆ ಎಂಬುದನ್ನ ಈ ಚಿತ್ರದಲ್ಲಿ ತೋರಿಸಲಾಗಿದೆ.

ಈಸ್ಟ್ ಇಂಡಿಯಾ ಕಂಪನಿಯ ಪಡೆಗಳ ಕಮಾಂಡರ್‌ ಆಗಿ ಜಾನ್ ಕ್ಲೈವ್ ನಟಿಸಿದ್ದು, ಅಮೀರ್‌ ಖಾನ್‌ "ಗಾಂವ್ ಗೋಪಾಲ್‌ಪುರ್, ಜಿಲ್ಲಾ ಖಾನ್ಪುರ್" ಎಂಬ ಡೈಲಾಗ್ ಮೂಲಕ ತಮ್ಮನ್ನು ತಾವು ಪರಿಚಯಿಸಿದ್ದು, ಎಲ್ಲರ ಗಮನ ಸೆಳೆದಿದೆ.

ಇದೇ ನ.8ಕ್ಕೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಥಗ್ಸ್ ಆಫ್ ಹಿಂದೂಸ್ತಾನ್ ರಿಲೀಸ್ ಆಗಲಿದ್ದು, ಚಿತ್ರವನ್ನು ಯಶ್‌ರಾಜ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗಿದ್ದು, ವಿಜಯ್ ಕೃಷ್ಣ ಆಚಾರ್ಯ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರ ನಿರ್ದೇಶಿಸಿದ್ದಾರೆ.

Next Story

RELATED STORIES