ನಿಧಿಗಾಗಿ ಭಯಾನಕ ಪ್ಲಾನ್ : ಭಯಹುಟ್ಟಿಸಿದ ಆರೋಪಿಗಳು ಅಂದರ್!

ಆಂಧ್ರಪ್ರದೇಶ : ರಾಜ್ಯದ ವೆಂಕಟಾಪುರ ಎಂಬ ಹಳ್ಳಿಯಲ್ಲಿ ನಿಧಿಯನ್ನು ತೆಗೆಯಲು ಪ್ರಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಧಿ ತೆಗೆಯಲು ತಂದಿದ್ದ, ವಾಹನ, ಜಿಲೆಟಿನ್ ಕಟ್ಟಿ, ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಚಿತ್ತೂರು ಜಿಲ್ಲೆಯ ನೇರಬಟ್ಟಿ ಪಂಚಾಯ್ತಿಯ ಒಟಲಬಾವಪಲ್ಲಿ ಹತ್ತಿರದಲ್ಲಿರುವ ವೆಂಕಟಾಪುರಂ ಎಂಬಲ್ಲಿ, ನಿಧಿ ಇದೆ ಎಂದು ಆಗಿಯಲು ಆರು ಜನರು ಬಂದಿದ್ದರು.
ಹೀಗೆ ಅಗೆಯಲು ಬಂದವರು ಮಾಡುತ್ತಿದ್ದ ಭಯಾನಕ ನಿಂಬೆಹಣ್ಣಿನ ಪ್ರಯೋಗವನ್ನು, ನಿತ್ಯಕರ್ಮಕ್ಕಾಗಿ ಬಂದಿದ್ದ ಊರಿನ ಗ್ರಾಮಸ್ಥರೊಬ್ಬರು ನೋಡಿದ್ದಾರೆ.
https://www.youtube.com/watch?v=XwxL6BkpjYw&list=PLmylWU4EY3N828RDbD7psqiD08PoX74eJ&index=25
ಭಯ ಹುಟ್ಟಿಸುವಂತಿದ್ದ ನಿಂಬೇಹಣ್ಣಿನ ಪವಾಡ ಕಂಡು ಭಗಗೊಂಡ ಗ್ರಾಮಸ್ಥ, ಸತ್ತನೋ ಬದುಕಿದನೋ ಎಂದು ಊರಿನತ್ತ ಓಟ ಕಿತ್ತಿದ್ದಾನೆ.
ನಿಧಿ ಅಗೆಯಲು ಬಂದವರು ಮಾಡುತ್ತಿದ್ದ ಬಗ್ಗೆ, ಊರಿನ ಗ್ರಾಮಸ್ತರಲ್ಲಿ ತಿಳಿಸಿದ ಪರಿಣಾಮ, ಊರಿಗೆ ಊರೇ ಘಟನಾ ಸ್ಥಳದತ್ತ ತೆರಳಿದ್ದಾರೆ.
ನಿಧಿ ಹೊರತೆಗೆಯಲು ಬಂದಿದ್ದವರು ಮಾಡುತ್ತಿದ್ದ ನಿಂಬೇ ಹಣ್ಣಿ ಪವಾಡಕಂಡು ಬೆರಗಾಗಿ, ಆರುಜನರಲ್ಲಿ ಇಬ್ಬರನ್ನು ಹಿಡಿದು ಕಟ್ಟಿಹಾಕಿದ್ದಾರೆ. ಆನಂತ್ರ, ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಈ ಘಟನೆ ಸಂಬಂಧ ಗ್ರಾಮಸ್ಥರ ಮಾಹಿತಿ ಮೇರೆಗೆ ಆಗಮಿಸಿದ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು, ಅವರಿಂದ ಎಸ್ಯುವಿ 300 ವಾಹನ, ಜಿಲೇಟಿನ್ ಮದ್ದು ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ನಿಧಿ ಅಗೆಯಲು ಬಂದಿದ್ದವರನ್ನು, ತಿರುಪತಿ ಸಮೀಪದ ಭೈರಾಗಿ ಪಟ್ಟಣದ ಹತ್ತಿರದ ಪಟ್ಟಾಭಿಪದ್ಮಾವತಿ ಪುರದ ಹತ್ತಿರದ, ಓಂ ಪ್ರಕಾಶ್ ಎಂಬುದಾಗಿ, ಮತ್ತೊಬ್ಬನನ್ನು ಹೆಸರು ತಿಳಿದು ಬಂದಿಲ್ಲ.
ಒಟ್ಟು ನಿಧೆ ಅಗೆಯಲು ಆರು ಜನರು ವೆಂಕಟಾಪುರಂ ಹಳ್ಳಿಗೆ ಬಂದಿದ್ದರು ಎಂದು ವಶವಡಿಸಿಕೊಂಡಿರುವ ಆರೋಪಿಗಳಿಂದ ತಿಳಿದು ಬಂದಿದ್ದಾಗೆ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಇನ್ನೂ ತನಿಖೆ ನಡೆಸುತ್ತಿರುವ ಪೊಲೀಲರು, ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುವಲ್ಲಿ ತೊಡಗಿದ್ದಾರೆ.