Top

ದರ್ಶನ್ ಇನ್ನೊಂದು ವರ್ಷ ಜಿಮ್ ಮಾಡುವಂತಿಲ್ಲ..!

ದರ್ಶನ್ ಇನ್ನೊಂದು ವರ್ಷ ಜಿಮ್ ಮಾಡುವಂತಿಲ್ಲ..!
X

ಮೈಸೂರು: ನಟ ದರ್ಶನ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದು, ನಾಲ್ಕನೇ ದಿನವಾದ ಇಂದೂ ಚಿಕಿತ್ಸೆ ಮುಂದುವರೆದಿದೆ. ಇಂದು ದರ್ಶನ್ ಡಿಸ್ಚಾರ್ಜ್ ಆಗುವ ಸಂಭವ ಕಡಿಮೆ ಇದೆ.

ನಿನ್ನೆ ಸಂಜೆ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು, ಗಾಯಗಳ ಊತ ಕಡಿಮೆಯಾಗುತ್ತಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿತ್ತು. ಆದ್ರೆ ಡಿಸ್ಚಾರ್ಜ್ ಬಗ್ಗೆ ದರ್ಶನ್ ಸಂಬಂಧಿಕರು ಮಾಹಿತಿ ನೀಡಿದ್ದು, ದರ್ಶನ್ ಶುಕ್ರವಾರ ಅಥವಾ ಶನಿವಾರ ಡಿಸ್ಚಾರ್ಜ್ ಆಗಲಿದ್ದಾರೆ.

ಆದ್ರೆ, ವೈದ್ಯರು ಮತ್ತೊಂದು ಸಲಹೆ ನೀಡಿದ್ದು, ದರ್ಶನ್ ಇನ್ನು ಒಂದು ವರ್ಷ ಜಿಮ್‌ ಮಾಡುವಂತಿಲ್ಲ ಎಂದಿದ್ದಾರೆ. ದರ್ಶನ್ ದೇಹಕ್ಕೆ ಕನಿಷ್ಠ ಒಂದು ತಿಂಗಳ ರೆಸ್ಟ್ ಬೇಕಾಗಿದ್ದು, ಒಂದು ತಿಂಗಳು ಕಡ್ಡಾಯವಾಗಿ ತೋಳಿನಪಟ್ಟಿ ಹಾಕಲೇಬೇಕೆನ್ನಲಾಗಿದೆ.

ಮೂಳೆ ಮುರಿದಿದ್ದರಿಂದ ದರ್ಶನ್ ಬಲಗೈಗೆ ಪ್ಲೇಟ್ ಅಳವಡಿಸಲಾಗಿದ್ದು, ಈ ಪ್ಲೇಟ್ ತೆಗೆಯಲು ಎರಡು ವರ್ಷ ಬೇಕು. ಹಾಗಾಗಿ ದರ್ಶನ್ ಬಲಗೈಗೆ ಹೆಚ್ಚಿನ ಕೆಲಸ ನೀಡುವಂತಿಲ್ಲ. ಅಲ್ಲಿಯವರೆಗೂ ಭಾರ ಎತ್ತುವಂತಿಲ್ಲ. ಆದ್ದರಿಂದ ದರ್ಶನ್‌ಗೆ ಜಿಮ್ ಮಾಡುವಂತಿಲ್ಲ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Next Story

RELATED STORIES