Top

ಕಾಂಗ್ರೆಸ್-ಜೆಡಿಎಸ್ ಶಾಸಕರು ನಿರ್ವಿರ್ಯರು : ಮಾಜಿ ಬಿಜೆಪಿ ಸಂಸದ ವಾಗ್ದಾಳಿ

ಕಾಂಗ್ರೆಸ್-ಜೆಡಿಎಸ್ ಶಾಸಕರು ನಿರ್ವಿರ್ಯರು : ಮಾಜಿ ಬಿಜೆಪಿ ಸಂಸದ ವಾಗ್ದಾಳಿ
X

ತುಮಕೂರು : ಜಿಲ್ಲೆಯಲ್ಲಿರು ಮೂವರು ಮಂತ್ರಿಗಳು ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಶಾಸಕರು ನಿರ್ವೀರ್ಯರಾಗಿದ್ದಾರೆ ಎಂದು ಮಾಜಿ ಬಿಜೆಪಿ ಸಂಸದ ಜಿ ಎಸ್ ಬಸವರಾಜು ವಾಗ್ದಾಳಿ ನಡೆಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಬಿಜೆಪಿಯ ಮಾಜಿ ಸಂಸದ ಜಿ ಎಸ್ ಬಸವರಾಜು, ಡಿ ಕೆ ಶಿವಕುಮಾರ್ ಬ್ರದರ್ಸ್‌ ದಬ್ಬಾಳಿಕೆ ಜಿಲ್ಲೆಯಲ್ಲಿ ಹೆಚ್ಚಾಗಿದೆ.

ಜಿಲ್ಲೆಗೆ ಬರುವ ಹೇಮಾವತಿ ನೀರನ್ನು ಮಾಗಡಿ-ಕನಕಪುರಕ್ಕೆ ಕೊಂಡೊಯ್ಯಲು ಒಳಗೊಳಗೆ ಪ್ಲಾನ್‌ ನಡೆಸಿದ್ದಾರೆ. ಲಿಂಕಿಂಗ್ ಕೆನಾಲ್ ಮೂಲಕ ನೀರು ಸಾಗಿಸಲು ಪ್ಲಾನ್ ಮಾಡಿದ್ದಾರೆ.

ಇಷ್ಟಾದರೂ ಜಿಲ್ಲೆಯ ಕಾಂಗ್ರೆಸ್ ಜೆಡಿಎಸ್ ಶಾಸಕರು, ಮುಖಂಡರು ಚಕಾರ ಎತ್ತುತಿಲ್ಲ. ಡಿ.ಕೆ.ಶಿವಕುಮಾರ್ ವಿರುದ್ದ ಮಾತನಾಡುತ್ತಿಲ್ಲ. ಡಿ.ಕೆ.ಶಿವಕುಮಾರ್ ಗೂಂಡಾ ಪ್ರವರ್ತಿ ಹೆಚ್ಚಾಗಿದೆ. ಅವರನ್ನು ತುಮಕೂರು ನಗರದ ಒಳಗೆ ಸೇರಿಸಲ್ಲ ಎಂದರು.

ಇನ್ನೂ ತುಮಕೂರು ನಾಶ ಮಾಡಲು ಇವರು ಮುಂದಾಗಿದ್ದಾರೆ. ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಸೇರಿದಂತೆ ಎಲ್ಲರೂ ನಿರ್ವಿಯರು ಎಂದು ಮಾಜಿ ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

Next Story

RELATED STORIES