Top

ಟೆಂಪಲ್ ರನ್ ಮುಂದುವರಿಸಿದ ಸಿಎಂ ಕುಮಾರಸ್ವಾಮಿ

ಟೆಂಪಲ್ ರನ್ ಮುಂದುವರಿಸಿದ ಸಿಎಂ ಕುಮಾರಸ್ವಾಮಿ
X

ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಟೆಂಪಲ್ ರನ್ ಮುಂದುವರೆಸಿದ್ದಾರೆ. ಕುಟುಂಬ ಸಮೇತರಾಗಿ ದೇವರ ದರ್ಶನ ಪಡೆಯಲು ಸಿಎಂ ಕುಮಾರಸ್ವಾಮಿ ತಮಿಳುನಾಡಿಗೆ ತೆರಳಿದ್ದಾರೆ.

ಕುಮಾರಸ್ವಾಮಿ ತಮಿಳುನಾಡಿನ ತಿರುಚಂದೂರು ಮುರುಗ ದೇವರ ದೇವಾಲಯಕ್ಕೆ ಭೇಟಿ ನೀಡಿದ್ದು, ಹೆಚ್‌ಡಿಕೆಗೆ ಪುತ್ರ ನಿಖಿಲ್ ಕುಮಾರ್ ಸಾಥ್ ನೀಡಿದ್ದಾರೆ.

ಮುರುಗ ದೇವಸ್ಥಾನವಲ್ಲದೇ, ಸುಬ್ರಹ್ಮಣ್ಯ ದೇವಸ್ಥಾನ ಸೇರಿ ಇನ್ನು ಹಲವು ದೇವಾಲಯಗಳಿಗೆ ಕುಮಾರಸ್ವಾಮಿ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮೊನ್ನೆ ತಾನೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕುಟುಂಬಸ್ಥರೊಂದಿಗೆ ಶೃಂಗೇರಿಗೆ ತೆರಳಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದರು.

Next Story

RELATED STORIES