Top

ದಿಗಂತ್ ಫಾರ್ಚೂನರ್ ಎಂಟ್ರಿಗೆ ಡೆಡ್​ಲೈನ್ ಫಿಕ್ಸ್

ದಿಗಂತ್ ಫಾರ್ಚೂನರ್ ಎಂಟ್ರಿಗೆ ಡೆಡ್​ಲೈನ್ ಫಿಕ್ಸ್
X

ಟೀಸರ್​ಗಳಿಂದ ಹೊಸ ಭರವಸೆ ಮೂಡಿಸಿದ್ದ ದಿಗಂತ್- ಸೋನು ಗೌಡ ಫಾರ್ಚೂನರ್ ಸಿನಿಮಾ, ಇದೀಗ ಹಾಡುಗಳಿಂದ ಸ್ಯಾಂಡಲ್​ವುಡ್ ಸಿನಿಪ್ರಿಯರ ಕಣ್ಮನ ತಣಿಸುತ್ತಿದೆ. ಸದ್ಯ ರಿಲೀಸ್ ಡೇಟ್ ಅನೌನ್ಸ್ ಮಾಡೋದರ ಮೂಲಕ ಶ್ರೇಯಾ ಘೋಷಾಲ್ ಕಂಠದ ಬ್ಯೂಟಿಫುಲ್ ಮೆಲೋಡಿ ಹಾಡೊಂದು ರಿವೀಲ್ ಆಗಿದೆ.

ಕೈಯ ಚಿವುಟಿ ಒಮ್ಮೆ ನೋಡಲೇನು ಹಾಡು ಯೂಟ್ಯೂಬ್‌ನಲ್ಲಿ ಸಖತ್ ಲೈಕ್ಸ್​ ಗಿಟ್ಟಿಸಿಕೊಳ್ತಿದೆ. ಈ ಸಾಂಗ್ ಬೆಸ್ಟ್ ಮೆಲೋಡಿ ಸಾಂಗ್ ಆಗೋದ್ರಲ್ಲಿ ಯಾವ್ದೇ ಡೌಟ್ ಇಲ್ಲ. ಇನ್ನು ಶ್ರೇಯಾ ಘೋಷಾಲ್ ಹಾಡಿಗೆ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಜೀವ ತುಂಬಿದ್ದಾರೆ. ಅಷ್ಟೇ ಅಲ್ಲ ಹೇಮಂತ್ ಸಾಹಿತ್ಯದ ಪದಪುಂಜಕ್ಕೆ ಅವ್ರು ಕೂಡ ಫಿದಾ ಆಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಕ್ಯಾಚ್ಚಿ ಟ್ಯೂನ್​ ಹಾಡಿಗೆ ಪ್ಲಸ್ ಆಗಿದೆ.

ದೂದ್ ಪೇಡಾ ದಿಗಂತ್ ಅಭಿನಯದ ಈ ಚಿತ್ರದಲ್ಲಿ ಸೋನು ಗೌಡ, ಸ್ವಾತಿ ಶರ್ಮಾ ಇಬ್ಬರೂ ನಾಯಕಿಯರು. ಈಗಾಗಲೇ ಓ ದೇವ ಹಾಗೂ ಸುಗ್ಗಿ ಮಾಡೋಣ ಬಾ ಅನ್ನೋ ಎರಡು ಹಾಡುಗಳು ರಿಲೀಸ್ ಆಗಿದ್ದು, ಅವು ಕೂಡ ಎಂಥವ್ರು ಗುನುಗುವಂತಾಗಿವೆ. ಇದೀಗ ರಿಲೀಸ್ ಆಗಿರೋ ಮೂರನೇ ಹಾಡು ಹಿಟ್ ಲಿಸ್ಟ್ ಸೇರಿಕೊಂಡಿದೆ.

ಮಂಜುನಾಥ್ ಜೆ ಅನಿವಾರ್ಯ ಆಕ್ಷನ್ ಕಟ್ ಹೇಳಿರೋ ಫಾರ್ಚೂನರ್ ಚಿತ್ರದ ಮೇಕಿಂಗ್ ಕೂಡ ಅಷ್ಟೇ ಪ್ರಾಮಿಸಿಂಗ್ ಆಗಿದ್ದು, ಮೇಕಿಂಗ್ ಝಲಕ್ ನೋಡ್ತಿದ್ರೆ, ಹೊಸಬರ ಚಿತ್ರ ಅಂತ ಅನ್ಸೋದೇ ಇಲ್ಲ. ದಿಗ್ಗಿ ಕೂಡ ಸಖತ್ ಸ್ಟೈಲಿಷ್ ಆಗಿ ಕಾಣಸಿಕೊಂಡಿದ್ದು, ಸೆಟ್​​ನಲ್ಲಿ ಸಿಕ್ಕಾಪಟ್ಟೆ ಬೆವರು ಹರಿಸಿದ್ದಾರೆ. ಸದ್ಯ ಚಿತ್ರದ ಮೇಕಿಂಗ್, ಸಿನಿಮಾ ಮೇಲಿನ ನಿರೀಕ್ಷೆ ಇಮ್ಮಡಿಗೊಳಿಸಿದೆ.

ದಿಗಂತ್ ಇಲ್ಲಿ ಎಂಎಲ್​ಎ ಮಗನಾಗಿ ಕಾಣಿಸಿಕೊಂಡಿದ್ದು, ರಾಯಲ್ ಲೈಫ್​ ಲೀಡ್ ಮಾಡೋ ಹ್ಯಾಪಿ ಗೋ ಜಾಲಿ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಕಾರಣಾಂತರಗಳಿಂದ ಮನೆಯಿಂದ ಹೊರಬರೋ ದಿಗ್ಗಿ, ಕೊನೆಗೇ ಆತನ ಅದೃಷ್ಟದಿಂದ ಏನೆಲ್ಲಾ ಆಗುತ್ತೆ ಅನ್ನೋದು ಚಿತ್ರದ ತಿರುಳು.

ಸದ್ಯ ಸೆನ್ಸಾರ್ ಅಂಗಳದಲ್ಲಿರುವ ಫಾರ್ಚೂನರ್, ಅಕ್ಟೋಬರ್ ಮೊದಲ ವಾರದಲ್ಲಿ ತೆರೆಗೆ ಬರೋ ಯೋಜನೆಯಲ್ಲಿದೆ. ಅದೇನೇ ಇರಲಿ.. ಮದ್ವೆ ಆಗೋಕ್ಕೆ ತುದಿಗಾಲಲ್ಲಿ ನಿಂತಿರೋ ದಿಗಂತ್, ಇದೇ ಸಂದರ್ಭದಲ್ಲಿ ಈ ಸಿನಿಮಾನ ರಿಲೀಸ್ ಮಾಡ್ತಿರೋದು ವಿಶೇಷ. ಸದ್ಯ ಟೀಸರ್ ಮತ್ತು ಸಾಂಗ್ಸ್​ನಲ್ಲಿರೋ ಕ್ರೇಜ್ ಸಿನಿಮಾದಲ್ಲೂ ಉಳಿಸಿಕೊಳ್ತಾರಾ ಅನ್ನೋದು ರಿಲೀಸ್ ನಂತ್ರ ಗೊತ್ತಾಗಲಿದೆ.

ಭಾರತಿ ಜಾವಳ್ಳಿ, ಎಂಟಟೈನ್ಮೆಂಟ್ ಬ್ಯುರೋ ಟಿವಿ5

Next Story

RELATED STORIES