Top

ದರ್ಶನ್ ಕಾರು ಅಪಘಾತ ಪ್ರಕರಣ: ಕಾರಿನಲ್ಲಿದ್ದರು 6 ಜನ..!?

ದರ್ಶನ್ ಕಾರು ಅಪಘಾತ ಪ್ರಕರಣ: ಕಾರಿನಲ್ಲಿದ್ದರು 6 ಜನ..!?
X

ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದ್ದು, ಕಾರ್‌ನಲ್ಲಿ ಇದ್ದಿದ್ದು ನಾಲ್ವರಲ್ಲ ಬದಲಾಗಿ 6 ಜನರೆಂದು ತಿಳಿದು ಬಂದಿದೆ.

ಎಂಎಲ್‌ಸಿ ವರದಿ ಪ್ರಕಾರ ಕಾರಿನಲ್ಲಿ 6 ಜನರಿದ್ದು, ದರ್ಶನ್, ದೇವರಾಜ್, ರಾಯ್ ಆಂಥೋಣಿ, ಪ್ರಜ್ವಲ್ ದೇವರಾಜ್ ಜೊತೆ ವಿನಯ್ ಶಂಕರ್ ಮತ್ತು ಪ್ರಕಾಶ್ ಎಂಬುವರಿದ್ದರು.

ಆದರೆ ದರ್ಶನ್ ಮತ್ತು ತಂಡ, ವಿನಯ್ ಶಂಕರ್ ಮತ್ತು ಪ್ರಕಾಶ್ ಹೆಸರನ್ನ ಗೌಪ್ಯವಾಗಿ ಇಟ್ಟಿದ್ದರು. ವಿನಯ್ ಮತ್ತು ಪ್ರಕಾಶ್‌ಗೂ ಗಾಯವಾಗಿದ್ದು, ಇಬ್ಬರಿಗೂ ಮೈಸೂರು ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇವರಿಬ್ಬರ ಹೆಸರನ್ನ ಮಾತ್ರ ವಿಚಾರಣೆ ವೇಳೆ ಹೇಳಿರಲಿಲ್ಲ.

ಅಲ್ಲದೇ ಎಫ್‌ಐಆರ್‌ನಲ್ಲೂ ಕಾರಿನಲ್ಲಿದ್ದದ್ದು 4 ಜನ ಎಂದು ನಮೂದಿಸಲಾಗಿದೆ. ಆದರೆ ಅಪಘಾತ ನಡೆದ ನಂತರ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿರುವುದು 6 ಜನರಾದರೂ, ಎಂಎಲ್‌ಸಿ ವರದಿಯಲ್ಲಿ ವಿನಯ್ ಮತ್ತು ಪ್ರಕಾಶ್‌ಗೆ ಯಾವುದೇ ಗಾಯವಾಗಿಲ್ಲ ಎಂದು ನಮೂದಿಸಲಾಗಿದೆ.

ಅಪಘಾತವಾದಾಗ ಕಾರ್ ಕಾಣೆಯಾಗಿತ್ತು. ನಂತರ ವಿವಿಪುರಂ ಪೊಲೀಸರು ಕಾರನ್ನ ಪತ್ತೆಹಚ್ಚಿದ್ದರು. ತದನಂತರ ಇದೀಗ ಕಾರ್‌ನಲ್ಲಿದ್ದಿದ್ದು ನಾಲ್ವರಲ್ಲ 6 ಜನ ಎನ್ನಲಾಗಿದೆ. ಅಲ್ಲದೇ ದರ್ಶನ್, ವಿನಯ್ ಮತ್ತು ಪ್ರಕಾಶ್ ಹೆಸರನ್ನ ಗೌಪ್ಯವಾಗಿ ಇಟ್ಟಿದ್ದೇಕೆ ಎಂಬ ಪ್ರಶ್ನೆ ಉದ್ಭವವಾಗಿದೆ.

Next Story

RELATED STORIES