Top

ಎಸ್ಸಿ/ಎಸ್ಟಿ ಬಡ್ತಿ ಮೀಸಲಾತಿ ರಾಜ್ಯಗಳ ವಿವೇಚನೆಗೆ: ಸುಪ್ರೀಂಕೋರ್ಟ್​

ಎಸ್ಸಿ/ಎಸ್ಟಿ ಮೀಸಲಾತಿ ಕುರಿತು 2006ರಲ್ಲಿ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್​ನ ಪಂಚಸದಸ್ಯ ಪೀಠ, ಈ ಕುರಿತ ಮೇಲ್ಮನವಿಯ ಅರ್ಜಿಯನ್ನು 7 ಸದಸ್ಯರ ಪೀಠಕ್ಕೆ ವರ್ಗಾಯಿಸಲು ನಿರಾಕರಿಸಿತು.

ಎಸ್ಸಿ/ಎಸ್ಟಿ ಬಡ್ತಿಯಲ್ಲಿನ ಮೀಸಲಾತಿ ಕುರಿತು ವಿವಿಧ ಅರ್ಜಿಗಳ ಕುರಿತು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಪಂಚ ಸದಸ್ಯರ ಪೀಠ, ಬಡ್ತಿ ಮೀಸಲಾತಿ ವಿಚಾರ ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದೆ.

ಎಂ. ನಾಗರಾಜ್ ಪ್ರಕರಣದಲ್ಲಿ 2006ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಅಲ್ಲದೇ ಈ ತೀರ್ಪನ್ನು ಪುನರ್ ಪರಿಶೀಲಿಸುವುದಾಗಲಿ ಅಥವಾ ಮೇಲಿನ ನ್ಯಾಯಾಲಯಕ್ಕೆ ವರ್ಗಾಯಿಸುವುದಾಗಲಿ ಅಗತ್ಯುವಿಲ್ಲ ಎಂದು ಹೇಳಿತು.

ಸರಕಾರಿ ಹುದ್ದೆಗಳಲ್ಲಿನ ಬಡ್ತಿ ಮೀಸಲಾತಿ ಪರಿಷ್ಕರಣೆ ಮಾಡಬೇಕಾದರೆ ದೇಶದಲ್ಲಿನ ಒಟ್ಟಾರೆ ಎಸ್ಸಿ/ಎಸ್ಟಿಗಳ ಜನಸಂಖ್ಯೆ ಸೇರಿದಂತೆ ಎಲ್ಲಾ ಅಂಕಿ-ಅಂಶಗಳನ್ನು ಕಲೆ ಹಾಕಬೇಕಾಗಿದೆ. ಇದು ದೀಘ್ರ ಪ್ರಕ್ರಿಯೆ ಆಗಲಿದೆ ಎಂದು ಸುಪ್ರೀಂಕೋರ್ಟ್​ ಗಮನಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ಅಂಕಿ-ಅಂಶಗಳ ಸಂಗ್ರಹ ಅಗತ್ಯವಿಲ್ಲ ಎಂದು ಸುಪ್ರೀಂಕೊರ್ಟ್ ಸ್ಪಷ್ಟಪಡಿಸಿತು.

Next Story

RELATED STORIES