Top

ಆಮದು ಸುಂಕ ಹೆಚ್ಚಳ ಹಿನ್ನಲೆ : ಚಿನ್ನಾಭರಣ ಸೇರಿ, 19 ಸರಕುಗಳ ದರ ಏರಿಕೆ!

ಆಮದು ಸುಂಕ ಹೆಚ್ಚಳ ಹಿನ್ನಲೆ : ಚಿನ್ನಾಭರಣ ಸೇರಿ, 19 ಸರಕುಗಳ ದರ ಏರಿಕೆ!
X

ನೀವು ಚಿನ್ನಾಭರಣ, ಏಸಿ, ರೆಫ್ರಿಜರೇಟರ್‌, ವಾಷಿಂಗ್‌ ಮಷಿನ್‌ ಖರೀದಿಸಲು ಯೋಚಿಸಿದ್ರಾ.? ಹಾಗಾದ್ರೆ ನಾಳೆಯಿಂದ ನಿಮಗೆ ಹೆಚ್ಚಿನ ಹೊರೆ ಬೀಳೋದು ಗ್ಯಾರಂಟಿ.

ಯಾಕ್‌ ಗೊತ್ತಾ. ಏಸಿ, ರೆಫ್ರಿಜರೇಟರ್‌, ವಾಷಿಂಗ್‌ ಮಷಿನ್‌ ವಿಮಾನ ಇಂಧನ ಸೇರಿದಂತೆ 19 ಸರಕುಗಳ ಆಮದು ಸುಂಕ ಹೆಚ್ಚಿಸಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬರಲಿದೆ.

ಅಗತ್ಯವಲ್ಲದ ಸರಕುಗಳ ಆಮದು ಪ್ರಮಾಣ ತಗ್ಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಆಮದು ಸುಂಕ ಹೆಚ್ಚಿಸಿದ ಸರಕುಗಳ ಪಟ್ಟಿಯಲ್ಲಿ ಸ್ಪೀಕರ್‌, ರೇಡಿಯಲ್‌ ಕಾರ್‌ ಟೈರ್‌, ಚಿನ್ನಾಭರಣ, ಅಡುಗೆ ಮನೆ ಪರಿಕರ, ಕೆಲ ಪ್ಲಾಸ್ಟಿಕ್‌ ಸರಕು ಮತ್ತು ಸೂಟ್‌ಕೇಸ್‌ಗಳು ಸೇರಿವೆ.

ಕೆಲ ಸರಕುಗಳ ಆಮದು ಪ್ರಮಾಣಕ್ಕೆ ಕಡಿವಾಣ ವಿಧಿಸಲು ಕೇಂದ್ರ ಸರ್ಕಾರವು ಮೂಲ ಕಸ್ಟಮ್ಸ್‌ ಡ್ಯೂಟಿಯಲ್ಲಿ ಹೆಚ್ಚಳ ಮಾಡಿದೆ. ಇದರಿಂದ ಚಾಲ್ತಿ ಖಾತೆ ಕೊರತೆಯು ಕಡಿಮೆಯಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕೆಲ ಏಸಿ, ರೆಫ್ರಿಜರೇಟರ್‌ ಮತ್ತು 10 ಕೆ.ಜಿಗಿಂತ ಕಡಿಮೆ ತೂಕದ ವಾಷಿಂಗ್‌ ಮಷಿನ್‌ಗಳ ಮೇಲಿನ ಆಮದು ಸುಂಕ ದುಪ್ಪಟ್ಟುಗೊಳಿಸಿ ಶೇ. 20ರಷ್ಟು ಹೆಚ್ಚಿಸಲಾಗಿದೆ.

Next Story

RELATED STORIES