Top

ಡಿಸೆಂಬರ್​ನಲ್ಲಿ ಸೈನಾ-ಕಶ್ಯಪ್ ವಿವಾಹ

ಡಿಸೆಂಬರ್​ನಲ್ಲಿ ಸೈನಾ-ಕಶ್ಯಪ್ ವಿವಾಹ
X

ದಶಕದಿಂದ ಪರಸ್ಪರ ಪ್ರೀತಿಸುತ್ತಿದ್ದ ಬ್ಯಾಡ್ಮಿಂಟನ್ ಸ್ಟಾರ್ ಗಳಾದ ಸೈನಾ ನೆಹವಾಲ್ ಮತ್ತು ಪಿ. ಕಶ್ಯಪ್ ಡಿಸೆಂಬರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.

ಒಂದೇ ಕಡೆ ಅಭ್ಯಾಸ ನಡೆಸುತ್ತಿದ್ದ ಸೈನಾ ನೆಹವಾಲ್ ಮತ್ತು ಕಶ್ಯಪ್ ಕಳೆದ 10 ವರ್ಷಕ್ಕೂ ಹೆಚ್ಚು ಕಾಲ ಒಡನಾಟ ಹೊಂದಿದ್ದರು. ಇಬ್ಬರು ದಾಂಪತ್ಯಕ್ಕೆ ಕಾಲಿಡುವ ಬಗ್ಗೆ ಹಿಂದಿನಿಂದಲೂ ವದಂತಿ ಇತ್ತಾದರೂ ನಾವಿಬ್ಬರು ಫ್ಯಾಮಿಲಿ ಫ್ರೆಂಡ್ಸ್ ಎಂದು ತಳ್ಳಿ ಹಾಕಿದ್ದರು.

ಇದೀಗ ಡಿಸೆಂಬರ್ 16ರಂದು ಇಬ್ಬರು ದಾಂಪತ್ಯಕ್ಕೆ ಕಾಲಿಡಲಿದ್ದು, ವಿವಾಹ ಸಮಾರಂಭ ಅತ್ಯಂತ ಖಾಸಗಿಯಾಗಿ ನಡೆಯಲಿದ್ದು, ಕೇವಲ 100 ಮಂದಿಗೆ ಮಾತ್ರ ಆಮಂತ್ರಣ ನೀಡಲಾಗುತ್ತಿದೆ. ಡಿಸೆಂಬರ್ 21ರಂದು ಅರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ.

Next Story

RELATED STORIES