Top

ಜಾಮೀನು ನಿರಾಕರಣೆ: ದುನಿಯಾ ವಿಜಿಗೆ ಮತ್ತೆ ಜೈಲೇ ಗತಿ

ಜಾಮೀನು ನಿರಾಕರಣೆ: ದುನಿಯಾ ವಿಜಿಗೆ ಮತ್ತೆ ಜೈಲೇ ಗತಿ
X

ಸ್ನೇಹಿತನ ಮೇಲೆ ಸಹಚರರೊಂದಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಪರಪ್ಪನ ಅಗ್ರಹಾರದಲ್ಲಿರುವ ನಟ ದುನಿಯಾ ವಿಜಿ ಹಾಗೂ ಸಹಚರರಿಗೆ ಜಾಮೀನು ನೀಡಲು 8ನೇ ಎಸಿಎಂಎಂ ನ್ಯಾಯಾಲಯ ನಿರಾಕರಿಸಿದೆ.

ದುನಿಯಾ ವಿಜಯ್, ಪ್ರಸಾದ್, ಮಣಿ, ಪ್ರಸಾದ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

https://www.youtube.com/watch?v=vz4aVyPbdSc&index=16&list=PLmylWU4EY3N8_bVBgVmrtV-rniqtbgkr2

ನ್ಯಾಯಾಧೀಶ ಮಹೇಶ್ ಬಾಬು ದುನಿಯಾ ವಿಜಿ ಪರ ವಕೀಲರು ಮಂಡಿಸಿದ್ದ ವಾದವನ್ನು ತಿರಸ್ಕರಿಸಿದ್ದು, ಜಾಮೀನು ನಿರಾಕರಿಸಿದ್ದಾರೆ.

ದುನಿಯಾ ವಿಜಿ ಹಾಗೂ ಸಹಚರರು ಇದೀಗ ಮೇಲಿನ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿ ಅಲ್ಲಿ ಅಂಗೀಕಾರ ಆದರೆ ಮಾತ್ರ ಹೊರಗೆ ಬರಬಹುದಾಗಿದೆ. ಅಲ್ಲಿಯವರೆಗೂ ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇರಬೇಕಾಗುತ್ತದೆ.

Next Story

RELATED STORIES