Top

ಮಹಾರಾಜ ಯದುವೀರ್ ಈಗ ಪ್ರವಾಸಿತಾಣದ ರಾಯಭಾರಿ

ಮಹಾರಾಜ ಯದುವೀರ್ ಈಗ ಪ್ರವಾಸಿತಾಣದ ರಾಯಭಾರಿ
X

ಕೆಲ ದಿನಗಳ ಹಿಂದೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮೈಸೂರು ಅರಮನೆಗೆ ಭೇಟಿ ನೀಡಿ, ಮಹಾರಾಜ ಯದುವೀರ್ ಅವರನ್ನು ಭೇಟಿಯಾಗಿ, ಮಂಡ್ಯ, ಮೈಸೂರು, ಕೊಡಗು, ಹಾಸನ ಭಾಗದ ಪ್ರವಾಸಿ ತಾಣಗಳಿಗೆ ರಾಯಭಾರಿಯಾಗುವಂತೆ ಮನವಿ ಮಾಡಿದ್ದರು.

ಪ್ರವಾಸೋದ್ಯಮ ಇಲಾಖೆ ಸರ್ಕಾರದ ಮನವಿಗೆ ಯದುವೀರ್ ಸ್ಪಂದನೆ ನೀಡಿದ್ದು, ಯದುವಂಶದ ಲಕೋಟೆಯಲ್ಲಿ ರಾಯಭಾರಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಯದುವೀರ್ ಹಳೆ ಮೈಸೂರು ಭಾಗದ ಬ್ರಾಂಡ್ ಅಂಬಾಸಿಡರ್ ಆಗಿದ್ದು, ದಕ್ಷಿಣ ಭಾರತದ ಮಾದರಿಯಲ್ಲಿ ಹಳೆ ಮೈಸೂರಿನ ಅಭಿವೃದ್ಧಿಗೆ ಚಿಂತನೆ ನಡೆಸಿದ್ದಾರೆ.

ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಭಾಗದ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದ್ದು, ಸಚಿವ ಸಾ.ರಾ.ಮಹೇಶ್ ಈ ಬಗ್ಗೆ ಅರಮನೆಗೆ ಹೋಗಿ ಸುದ್ದಿ ಪ್ರಸ್ತಾಪಿಸಿದ್ದರು. ಯದುವೀರ್ ರಾಯಭಾರಿಯಾದ ಬಗ್ಗೆ ಮಾಧ್ಯಮಕ್ಕೆ ಸಚಿವರು ಮಾಹಿತಿ ನೀಡಿದ್ದಾರೆ.

Next Story

RELATED STORIES