Top

‘ಆದಿಲಕ್ಷ್ಮೀ ಪುರಾಣ’ದ ಅಸಲಿ ಲಕ್ಷ್ಮೀ 'ರಾಧಿಕಾ ಪಂಡಿತ್'

‘ಆದಿಲಕ್ಷ್ಮೀ ಪುರಾಣ’ದ ಅಸಲಿ ಲಕ್ಷ್ಮೀ ರಾಧಿಕಾ ಪಂಡಿತ್
X

ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾಪಂಡಿತ್​ ರ ಸಿನಿಮಾ ಪ್ರೀತಿಯನ್ನ ಇಡೀ ಚಿತ್ರರಂಗ ಮತ್ತು ಅಭಿಮಾನಿಗಳು ಹಾಡಿ ಹೊಗಳ್ತಿದ್ದಾರೆ. ರಾಧಿಕೆ ತಮ್ಮ ಇನ್ಸ್​ಟಾಗ್ರಾಂ ಅಕೌಂಟ್​ನಲ್ಲಿ ಶೇರ್​ ಮಾಡಿರೋ ಒಂದು ಫೋಟೋ ಸಖತ್ ವೈರಲ್ ಆಗಿದೆ. ಹಾಗಾದ್ರೆ ಯಾವುದು ಆ ಪೋಟೋ..? ಫೋಟೋದಲ್ಲಿ ಎದ್ದು ಕಾಣ್ತಿರೋ ಸಿನಿಮಾ ಪ್ರೀತಿಯಾದ್ರು ಎಂತದ್ದು..? ಈ ಸ್ಟೋರಿ ಓದಿ..

ರಾಧಿಕಾ ಪಂಡಿತ್​ಗೆ ಮೊದಲಿನಿಂದಲೂ ಸಿನಿಮಾ ಅಂದ್ರೆ ಪ್ರೀತಿ, ಶ್ರದ್ಧೇಯಿಂದ್ಲೇ ಕೆಲಸ ಮಾಡ್ತಾರೆ..ಕಾರಣ ಏನೇ ಇದ್ರೂ ಸಿನಿಮಾದಿಂದ ಬ್ರೇಕ್​ ತೊಗೊಳ್ಳೋ ಯೋಚನೆ ಮಾಡೋಲ್ಲ ರಾಧಿಕ. ಈ ಮಾತನ್ನ ಯಾಕೆ ಹೇಳ್ತಾ ಇದ್ದೀವಿ ಅಂದ್ರೆ ರಾಧಿಕಾ ಪಂಡಿತ್​ ಮದುವೆ ಆದ ನಂತ್ರವೂ ಯಾವುದೇ ಗ್ಯಾಪ್​ ತೊಗೊಳ್ದೆ ನಿರೂಪ್​ ಭಂಡಾರಿ ಜೋಡಿಯಾಗಿ ಚಿತ್ರವೊಂದ್ರಲ್ಲಿ ಅಭಿನಯಿಸಿದ್ರು. ಅದೇ ಆದಿಲಕ್ಷ್ಮಿ ಪುರಾಣ.

https://www.instagram.com/p/Bn8eE43gUxb/?hl=en&taken-by=iamradhikapandit

ಇದೀಗ ಆದಿಲಕ್ಷ್ಮಿಪುರಾಣ ಸಿನಿಮಾ ಕಂಪ್ಲೀಟ್ ಆಗಿದ್ದು, ಡಬ್ಬಿಂಗ್​ ಹಂತಕ್ಕೆ ಬಂದಿದೆ.. ಆದ್ರೆ ಈ ಸಮಯದಲ್ಲಿ ತುಂಬು ಗರ್ಭಿಣಿಯಾಗಿರೋ ರಾಧಿಕಾ ಪಂಡಿತ್​ ತಮ್ಮ ಪಾತ್ರಕ್ಕೆ ಡಬ್ಬಿಂಗ್​ ಮಾಡ್ತಾರ ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಆದ್ರೆ ಈ ಸಮಯದಲ್ಲೂ ಸಿನಿಮಾ ಪ್ರೀತಿ ಮೆರೆದ ರಾಧಿಕಾ ಸ್ವತ: ತಾವೇ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ.

https://www.instagram.com/p/Bn0_gZ_gibO/?hl=en&taken-by=iamradhikapandit

ರಾಧಿಕಾ ಪಂಡಿತ್​ ಡಬ್ಬಿಂಗ್​ ಮಾಡ್ತಾ ಇರೋ ಫೋಟೋವೊಂದನ್ನ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್​ ಮಾಡಿದ್ದು, ‘ನನ್ನ ಮೊದಲ ಸಿನಿಮಾದಿಂದ ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡುತ್ತ ಬಂದಿದ್ದೇನೆ. ಆದರೆ, ಈ ಬಾರಿಯ ಡಬ್ಬಿಂಗ್ ಪ್ರಕ್ರಿಯೆ ಕೊಂಚ ಭಿನ್ನ.. ಏನು ಎಂಬುದನ್ನು ನೀವೇ ಊಹೆ ಮಾಡಿ’ ಎಂದು ಖುಷಿಯಿಂದ ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು, ರಾಧಿಕಾ ಸಿನಿಮಾ ಪ್ರೀತಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://www.instagram.com/p/BoGBUr0gtrO/?hl=en&taken-by=iamradhikapandit

ಒಟ್ನಲ್ಲಿ ರಾಧಿಕಾ ಪಂಡಿತ್​ ನಿಜಕ್ಕೂ ಕನ್ನಡದ ಅಪ್ರತಿಮ ಕಲಾವಿದೆ.. ಸಿನಿಮಾ ಅಂತ ಬಂದಾಗ ಯಾವುದೇ ರೀತಿ ಕಾಂಪ್ರೋಮೈಸ್​ ಆಗದೇ ಪಾತ್ರಕ್ಕೆ ನ್ಯಾಯ ಸಲ್ಲಿಸ್ತಾರೆ.. ಅಂದ್ಹಾಗೇ ಮುಂದಿನ ದಿನಗಳಲ್ಲೂ ರಾಧಿಕಾ ಲಾಂಗ್​ ಗ್ಯಾಪ್​ ತೊಗೊಳ್ದೆ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನ ಮಾಡ್ತಾ, ಸ್ಯಾಂಡಲ್​ವುಡ್​ನಲ್ಲಿ ಆ್ಯಕ್ಟಿವ್​ ಆಗಿರ್ಬೇಕು ಅನ್ನೋದೇ ಅಭಿಮಾನಿಗಳ ಆಶಯ.

ವರದಿ : ಅರ್ಚನಾಶರ್ಮಾ, ಎಂಟರ್​​ಟೈನ್ಮೆಂಟ್​ ಬ್ಯುರೋ, ಟಿವಿ5

Next Story

RELATED STORIES