Top

ರಿಯಲ್ ಸ್ಟಾರ್ ಬೆತ್ತಲಾದ್ರೆ ಸಿನಿಮಾ ಹಿಟ್ ಆಗುತ್ತಾ..?

ರಿಯಲ್ ಸ್ಟಾರ್ ಬೆತ್ತಲಾದ್ರೆ ಸಿನಿಮಾ ಹಿಟ್ ಆಗುತ್ತಾ..?
X

ಐ ಲವ್ ಯು... ಉಪೇಂದ್ರ ಮತ್ತೆ ಬಾ ಚಿತ್ರದ ನಂತ್ರ ಉಪ್ಪಿ ಅಭಿನಯದ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ. ಟೈಟಲ್​ನಿಂದಲೇ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದ್ದ ಐ ಲವ್ ಯು, ಇದೀಗ ಫಸ್ಟ್ ಲುಕ್ ಟೀಸರ್​ನಿಂದ ಗಾಂಧಿನಗರದಲ್ಲಿ ಸಂಚಲನ ಮೂಡಿಸಿದೆ.

ಈ ಹಿಂದೆ ಉಪ್ಪಿ-2 ಸಿನಿಮಾಗಾಗಿ ಒಮ್ಮೆ ಬೆತ್ತಲಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಮತ್ತೊಮ್ಮೆ ಬೆತ್ತಲಾಗಿದ್ದಾರೆ. ಬ್ರಹ್ಮ ನಂತ್ರ ಆರ್​ ಚಂದ್ರು- ಉಪ್ಪಿ ಕಾಂಬಿನೇಷನ್​ನಲ್ಲಿ ಬರ್ತಿರೋ ಐ ಲವ್ ಯು ಚಿತ್ರಕ್ಕಾಗಿ ಉಪ್ಪಿ ಮತ್ತೆ ಬೆತ್ತಲಾಗಿದ್ದಾರೆ.

ಬರೀ ರೋಸ್ ಹಿಡಿದು ಐ ಲವ್ ಯು ಹೇಳ್ತಾರೆ ಅಂದುಕೊಂಡಿದ್ದ ಸಿನಿಪ್ರಿಯರಿಗೆ ಉಪೇಂದ್ರ ಇಲ್ಲಿ ಕೂಡ ವೆರೈಟಿಯಾಗಿ ರೋಸ್ ಹಿಡಿಯೋ ಮೂಲಕ ಗಮನ ಸೆಳೆದರು. ಅಂದಹಾಗೆ ಉಪ್ಪಿ ಬೆತ್ತಲಾದ್ರೆ ಸಿನಿಮಾ ಸೂಪರ್ ಹಿಟ್ ಆಗುತ್ತಾ ಅನ್ನೋದು ಇಲ್ಲಿ ಪ್ರಶ್ನೆಯಾಗಿ ಕಾಡ್ತಿದೆ.

ಯಾಕಂದ್ರೆ ಉಪ್ಪಿ ಟೀಸರ್ ಲಾಂಚ್ ಮಾಡಿದಾಗ ಟೀಸರ್ ನೋಡಿ ಎಲ್ಲ ಬೆರಗಾಗಿದ್ರು. ಅದ್ರಂತೆ ಸಿನಿಮಾ ಕೂಡ ಸೂಪರ್ ಹಿಟ್ ಆಯ್ತು. ಕೋಟ್ಯಾಂತರ ರೂಪಾಯಿ ಬಾಕ್ಸಾಫೀಸ್ ಕಲೆಕ್ಷನ್​ನಿಂದ ಉಪ್ಪಿ ಜೇಬು ಕೂಡ ಉಕ್ಕಿ ಹರಿಯಿತು.

ಪ್ರೀತಿ ಪ್ರೇಮದ ಹೆಸರಲ್ಲಿ ಇಂದಿನ ಯೂತ್ಸ್ ಅಡ್ಡದಾರಿ ಹಿಡಿಯೋದೇ ಹೆಚ್ಚು. ಅದನ್ನೇ ಇಲ್ಲಿ ಉಪ್ಪಿ ಪ್ರೀತಿ-ಪ್ರೇಮ ಬರೀ ಪುಸ್ತಕದ ಬದನೆಕಾಯಿ ಅನ್ನೋದನ್ನ ಚಂದ್ರು ಸ್ಟೈಲ್​ನಲ್ಲಿ ಹೇಳೋಕ್ಕೆ ಹೊರಟಿದ್ದಾರೆ.

ಇಷ್ಟವನ್ನ ಇಷ್ಟ ಅಂತ ಹೇಳಿದಾಗ ಯಾರೂ ಮೂಸಲ್ಲ. ಅದೇ ಲವ್ವೇ ಲೈಫು, ನೀನೇ ನನ್ನ ವೈಫು ಅಂತ ಪ್ರೀತಿಯ ಬಂಧನದಲ್ಲಿ ಸಿಲುಕಿಸಿದ್ರೆ ಯಾವ ಆಟ ಬೇಕಾದ್ರೂ ಆಡಬಹುದು ಅನ್ನೋದು ಐ ಲವ್ ಯು ಲಾಜಿಕ್.

ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರೋದನ್ನೇ ನೇರಾನೇರ ದೊಡ್ಡ ಪರದೆ ಮೇಲೆ ತೋರಿಸೋಕೆ ಹೊರಟಿರೋ ಚಂದ್ರು ಮತ್ತು ಉಪ್ಪಿ, ಈ ಹಿಂದಿನ ಸಿನಿಮಾಗಿಂತ ಬೇರೆಯದ್ದೇ ರೇಂಜ್​ನಲ್ಲಿ ಮಾಡ್ತಿದ್ದಾರೆ.

ಶೂಟಿಂಗ್ ಕೂಡ ಮುಕ್ತಾಯದ ಹಂತದಲ್ಲಿದ್ದು, ಉಪ್ಪಿ ಕರಿಯರ್​ಗೆ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಆಗೋ ಸೂಚನೆ ಕೊಟ್ಟಿದೆ.

ರಿಯಲ್ ಸ್ಟಾರ್ ಉಪ್ಪಿಯ ಈ ಹಿಂದಿನ ಎ ಮತ್ತು ಉಪೆಂದ್ರ ಸಿನಿಮಾಗಳಲ್ಲಿನ ಪ್ರೀತಿ ಪ್ರೇಮಕ್ಕಿಂತ ಐ ಲವ್ ಯು ಚಿತ್ರದ ಪ್ರೇಮದಾಟ ಡಿಫರೆಂಟ್ ಆಗಿರಲಿದೆ. ಇಲ್ಲಿ ಉಪ್ಪಿಯನ್ನ ಗ್ಲಾಮರಸ್ ಆಗಿ ತೋರಿಸಿದ್ದು, ಚಂದ್ರು ಹಾರ್ಟ್​ ಹಾಗೂ ಉಪ್ಪಿ ಬ್ರೈನ್ ಕೂಡಿ ಆಗಿರೋ ಸಿನಿಮಾ ಇದು.

ಸಿನಿಮಾ ನೋಡಿದ ನಂತ್ರ ಎಂಥವ್ರೂ ಸಹ ತಮ್ಮ ಪ್ರೇಯಸಿಯನ್ನ ನೆನಪಿಸಿಕೊಳ್ಳೋದಲ್ಲದೆ, ಅವ್ರಿಗೆ ಐ ಲವ್ ಯು ಅಂತ ಹೇಳೇ ಹೇಳ್ತಾರೆ ಅನ್ನೋದು ಟೀಂ ಐ ಲವ್ ಯು ಮಾತು.

ಅಂದಹಾಗೆ ಸದ್ಯ ಫೈನಲ್ ಸ್ಟೇಜ್​ನಲ್ಲಿರೋ ಉಪ್ಪಿ ಹೊಸ ಪ್ರೇಮ ಪುರಾಣ ವರ್ಷಾಂತ್ಯಕ್ಕೆ ಅಂದ್ರೆ ಡಿಸೆಂಬರ್​ನಲ್ಲಿ ಸಿನಿಪ್ರಿಯರೆದುರು ಬರೋದು ಪಕ್ಕಾ ಆಗಿದೆ.

ಕ್ರಿಸ್​ಮಸ್ ಹಾಲಿಡೇಸ್​ನಲ್ಲಿ ಯೂತ್ಸ್ ಜೊತೆ ಫ್ಯಾಮಿಲಿ ಆಡಿಯನ್ಸ್ ಹಾಗೂ ಸ್ಟೂಡೆಂಟ್ಸ್​ಗೆ ಮಸ್ತ್ ಮನರಂಜನೆ ಕೊಡೋದು ಕನ್ಫರ್ಮ್​.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES