Top

ಶಾಸಕ, ಸಂಸದರು ಕೋರ್ಟ್ ಕಲಾಪದಲ್ಲಿ ಭಾಗವಹಿಸಬಹುದು: ಸುಪ್ರೀಂ

ಶಾಸಕ, ಸಂಸದರು ಕೋರ್ಟ್ ಕಲಾಪದಲ್ಲಿ ಭಾಗವಹಿಸಬಹುದು: ಸುಪ್ರೀಂ
X

ಶಾಸಕರು ಮತ್ತು ಸಂಸದ ಹುದ್ದೆ ಪೂರ್ಣಕಾಲಿಕ ಅಲ್ಲ. ಅವರು ಕೋರ್ಟ್ ಕಲಾಪದಲ್ಲಿ ವಾದಿಸಬಹುದು ಎಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಮಂಗಳವಾರ, ಬಾರ್ ಕೌನ್ಸಿಲ್ ನಿಯಮ 49ರ ಪ್ರಕಾರ ಶಾಸಕರು ಮತ್ತು ಸಂಸದರು ಪೂರ್ಣ ಪ್ರಮಾಣದ ವೇತನ ಪಡೆಯುವ ನೌಕರರಲ್ಲ. ಆದ್ದರಿಂದ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಬಹುದು ಎಂದು ತಿಳಿಸಿದೆ.

ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಜನಪ್ರತಿನಿಧಿಗಳು, ಸಾರ್ವಜನಿಕ ಸೇವಕರು, ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವವರು ಕೋರ್ಟ್ ಕಲಾಪದಲ್ಲಿ ವಾದ ಮಂಡಿಸಲು ನಿರ್ಬಂಧ ವಿಧಿಸಬೇಕು ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿತು.

Next Story

RELATED STORIES