Top

ಇವನ್ಯಾರು ದೊಡ್ಡ ಲೀಡರ್..?- ರಾಜ್ಯ ಸರ್ಕಾರದಲ್ಲಿ ಸಚಿವರ ಕಿತ್ತಾಟ

ಇವನ್ಯಾರು ದೊಡ್ಡ ಲೀಡರ್..?- ರಾಜ್ಯ ಸರ್ಕಾರದಲ್ಲಿ ಸಚಿವರ ಕಿತ್ತಾಟ
X

ಶಿಕ್ಷಣ ಸಚಿವ ಎನ್.ಮಹೇಶ್ ಕಾಂಗ್ರೆಸ್ ವಿರುದ್ಧ ಹೇಳಿಕೆ ಕೊಟ್ಟಿದ್ದಕ್ಕೆ, ಸಚಿವ ಪುಟ್ಟರಂಗಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಪುಟ್ಟರಂಗಶೆಟ್ಟಿ, ಇವನ್ಯಾರು ದೊಡ್ಡ ಲೀಡರ್, ಮನಸ್ಸು ಮಾಡಿದ್ರೆ ನಾಳೆನೇ ಸಂಪುಟದಿಂದ ಕಿತ್ತು ಹಾಕಿಸ್ತೀನಿ ಎಂದು ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಏನೋ ಕನಸು ಕಾಣುತ್ತಿದ್ದಾನೆ. ಈಗ ತಾನೇ ತಾನು ಕಣ್ಣು ಬಿಟ್ಟಿದ್ದೇನೆಂದು ಅವನಿಗೆ ಗೊತ್ತಿಲ್ಲ. ಪುಣ್ಯಕ್ಕೆ ಒಂದು ಸಚಿವ ಸ್ಥಾನ ಸಿಕ್ಕಿದೆ. ಅವನೇನು ದೀರ್ಘಕಾಲ ಮಂತ್ರಿಯಾದವನಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ಸಿನದ್ದು ಬಹುಪಾಲು ಇದೆ. ನಾವು 80 ಜನರಿದ್ದೇವೆ. ದಳದವರು 37 ಜನರಿದ್ದಾರೆ. ಅದರಲ್ಲಿ ಇವನೂ ಒಬ್ಬನು ಅಷ್ಟೇ ಎಂದು ಮಹೇಶ್ ವಿರುದ್ಧ ಪುಟ್ಟರಂಗಶೆಟ್ಟಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಕಾರವಾರದಲ್ಲಿ ಮಾತನಾಡಿದ್ದ ಶಿಕ್ಷಣ ಸಚಿವ ಎನ್.ಮಹೇಶ್, ಛತ್ತಿಸ್‌ಗಡದಲ್ಲಿ ಬಿ.ಎಸ್.ಪಿ ಪಕ್ಷವು ಕಾಂಗ್ರೆಸ್ ನೊಂದಿಗೆ ಹೋಗುವುದಿಲ್ಲ. ಕಾಂಗ್ರೆಸ್‌ಗೆ ತಾನು ದೊಡ್ಡಣ್ಣ ಎನ್ನುವ ಅಹಂನಿಂದ ಕೆಳಗಿಳಿಯಬೇಕು. ಅವರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದು ಎಲ್ಲರಿಗೂ ಗೊತ್ತು. ಅವರು ಕೆಳಗಡೆ ಇಳಿದಾಗ ನಮ್ಮಂತವರು ಕೈ ಜೋಡಿಸುತ್ತೇವೆ ಎಂದು ಹೇಳಿದ್ದರು.

ಇನ್ನು ಈ ಬಗ್ಗೆ ಹೇಳಿಕೆ ಕೊಟ್ಟಿರುವ ಸಚಿವ ಎನ್.ಮಹೇಶ್, ಸಚಿವ ಪುಟ್ಟರಂಗಶೆಟ್ಟಿ ತನ್ನ ವಿರುದ್ದ ಏಕವಚನದಲ್ಲಿ ಟೀಕೆ ಮಾಡಿದ್ದಾರೆ. ಅವರಿಗೆ ಏಕವಚನ ಬಹುವಚನದ ಬಗ್ಗೆ ತಿಳಿದಿಲ್ಲ ಅನಿಸುತ್ತದೆ. ತಾನು ಸ್ನಾತಕೋತ್ತರ ಪದವಿ ಮುಗಿಸಿದವನು. ನನಗೆ ಬಹುವಚನ ಏಕವಚನದ ಬಗ್ಗೆ ತಿಳಿದಿದೆ ಎಂದಿದ್ದಾರೆ.

ಅಲ್ಲದೇ ಅವರ ಟೀಕೆಗೆ ತಾನು ಪ್ರತಿಕ್ರಿಯೆ ಕೊಡುವುದಿಲ್ಲ. ಅವರು ಗ್ರಾಮೀಣ ಪ್ರದೇಶದಿಂದ ಬಂದವರು. ಅದಕ್ಕಾಗಿ ಬಹುವಚನದ ಬಗ್ಗೆ ತಿಳಿದಿಲ್ಲ. ತಾನು ಕಾಂಗ್ರೆಸ್ ಕಿತ್ತಾಕುತ್ತೇನೆ ಎಂದು ಹೇಳಿಲ್ಲ. ನನ್ನನ್ನ ಸಚಿವ ಸ್ಥಾನದಿಂದ ಕಿತ್ತುಹಾಕಲು ಕಾಂಗ್ರೆಸ್‌ನವರಿಂದ ಸಾಧ್ಯವಿಲ್ಲ. ಸಚಿವ ಸ್ಥಾನದಿಂದ ತೆಗೆಯುವುದು ಸಿಎಂ ಕುಮಾರಸ್ಚಾಮಿ ಬಿಎಸ್ಪಿ ವರಿಷ್ಟರ ಮಾಯಾವತಿಯಿಂದ ಮಾತ್ರ ಸಾಧ್ಯ. ಪುಟ್ಟರಂಗಶೆಟ್ಟಿ ತನ್ನ ನಡುವೆ ಉತ್ತಮ ಸಂಭಂದ ಇದೆ. ಯಾಕೆ‌ ಅವರು ತನ್ನ ವಿರುದ್ಧ ಸಿಟ್ಟಾಗಿದ್ದಾರೆ ಅನ್ನುವುದು ತಿಳಿದಿಲ್ಲ ಎಂದರು.

Next Story

RELATED STORIES