Top

ಡಾ.ರಾಜ್‌ಕುಮಾರ್ ಅಪಹರಣ ಪ್ರಕರಣ: 9 ಆರೋಪಿಗಳು ಖುಲಾಸೆ

ಡಾ.ರಾಜ್‌ಕುಮಾರ್ ಅಪಹರಣ ಪ್ರಕರಣ: 9 ಆರೋಪಿಗಳು ಖುಲಾಸೆ
X

18 ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್ ಡಾ.ರಾಜ್‌ಕುಮಾರ್‌ರನ್ನ ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ತೀರ್ಪು ಪ್ರಕಟಗೊಂಡಿದ್ದು, 9 ಆರೋಪಿಗಳು ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.

ಡಾ.ರಾಜ್‌ ಕುಮಾರ್​ ಅವರನ್ನ ಅಪಹರಿಸಿದ್ದಕ್ಕೆ ಕಾಡುಗಳ್ಳ ವೀರಪ್ಪನ್ ಸೇರಿ ಒಟ್ಟು 14 ಮಂದಿಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.

ಆದರೆ ವೀರಪ್ಪನ್ ಮತ್ತು ಆತನ ಕೆಲವು ಸಹಚರರು ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದು, ಉಳಿದವರ ವಿರುದ್ಧ ಆರೋಪ ಕುರಿತು ಸಾಕ್ಷ್ಯದ ಕೊರತೆ ಹಿನ್ನೆಲೆಯಲ್ಲಿ ಆರೋಪಿಗಳನ್ನ ಖುಲಾಸೆಗೊಳಿಸಿದೆ.

2000 ಜುಲೈ30ರಂದು ಗಾಜನೂರಿನ ಮನೆಯಿಂದ ಡಾ.ರಾಜ್‌ಕುಮಾರ್‌ರನ್ನು ಅಪಹರಿಸಲಾಗಿತ್ತು. 108 ದಿನಗಳ ನಂತರ ವೀರಪ್ಪನ್ ಡಾ.ರಾಜ್‌ರನ್ನ ಬಿಡುಗಡೆ ಮಾಡಿದ್ದ.

ಮೃತರು- ವೀರಪ್ಪನ್, ಸೇತುಕುಳಿ ಗೋವಿಂದನ್, ಚಂದ್ರಗೌಡ ಮಲ್ಲು

ಖುಲಾಸೆಗೊಂಡವರು- ಆಂಡ್ರಿಲ್ ಎಳುಮಲೈ, ಡೊಡ್ಡ ಗಾಜನೂರು ಬಸವಣ್ಣ, ಪುಟ್ಟಸ್ವಾಮಿ, ಅಮೃತ ಲಿಂಗಮ್, ನಾಗರಾಜು, ಕಲ್ಮಂಡಿ ರಾಮನ್, ಅನೈಕರೈ ಮಾರನ್, ಕಡಲೂರು ಗೋವಿಂದ, ರಾಜನ್ ಜಯಂಕೊಂಡಮ್ ಸೆಲ್ವಂ

Next Story

RELATED STORIES