Top

ಸ್ಪಾಟ್​ ಫಿಕ್ಸಿಂಗ್​ಗಾಗಿ ಬುಕ್ಕಿಗಳಿಂದ 5 ನಾಯಕರ ಸಂಪರ್ಕ: ಐಸಿಸಿ

ಸ್ಪಾಟ್​ ಫಿಕ್ಸಿಂಗ್​ಗಾಗಿ ಬುಕ್ಕಿಗಳಿಂದ 5 ನಾಯಕರ ಸಂಪರ್ಕ: ಐಸಿಸಿ
X

ಬುಕ್ಕಿಗಳು ಸ್ಪಾಟ್ ಫಿಕ್ಸಿಂಗ್​​ಗಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ 5 ತಂಡಗಳ ನಾಯಕರನ್ನು ಸಂಪರ್ಕಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಹಿರಂಗಪಡಿಸಿದೆ.

ಬುಕ್ಕಿಗಳು ಸ್ಪಾಟ್ ಫಿಕ್ಸಿಂಗ್​ಗಾಗಿ ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲೂ ಆಟಗಾರರು ಹಾಗೂ ನಾಯಕರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ ಎಂದು ಐಸಿಸಿ ಸೋಮವಾರ ಹೇಳಿದೆ.

ಆಫ್ಘಾನಿಸ್ತಾನ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಮೊಹಮದ್ ಶಹಜಾದ್ ಅವರನ್ನು ಕೂಡ ಬುಕ್ಕಿಗಳು ಸಂಪರ್ಕಿಸಿದ್ದಾರೆ. ಶಾರ್ಜಾದಲ್ಲಿ ಮುಂದೆ ನಡೆಯಲಿರುವ ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುವಂತೆ ಅವರಿಗೆ ಆಮೀಷ ಒಡ್ಡಲಾಗಿತ್ತು

ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಪ್ರಧಾನ ವ್ಯವಸ್ಥಾಪಕ ಅಲೆಕ್ಸ್ ಮಾರ್ಷಲ್, ಈ ವಿಷಯ ತಿಳಿಸಿದ್ದು, ಅಂತಾರಾಷ್ಟ್ರೀಯ ತಂಡಗಳ ನಾಯಕರನ್ನು ಬುಕ್ಕಿಗಳು ಸಂಪರ್ಕಿಸಿದ್ದಾರೆ. ಆದರೆ ಆ ತಂಡ ಹಾಗೂ ನಾಯಕರ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸ್ಪಾಟ್ ಫಿಕ್ಸಿಂಗ್​ಗಾಗಿ ಆಟಗಾರರು ಹಾಗೂ ನಾಯಕರನ್ನು ಸಂಪರ್ಕಿಸಿದ ಬಹುತೇಕ ಬುಕ್ಕಿಗಳು ಭಾರತೀಯರಾಗಿದ್ದಾರೆ. ಜಗತ್ತಿನ ಎಲ್ಲಾ ಕಡೆ ಅವರು ಇದ್ದಾರೆ. ಟಿ-20 ಕ್ರಿಕೆಟ್​ನಲ್ಲಿ ಸ್ಪಾಟ್ ಫಿಕ್ಸಿಂಗ್ ಸುಲಭವಾಗಿ ಮಾಡಬಹುದು ಎಂಬುದು ಅವರ ಅನಿಸಿಕೆ ಎಂದು ಮಾರ್ಷಲ್ ವಿವರಿಸಿದ್ದಾರೆ.

Next Story

RELATED STORIES