Top

ಏಷ್ಯಾಕಪ್​: ಅಜೇಯ ಭಾರತಕ್ಕೆ ಅಚ್ಚರಿ ಅಫ್ಘಾನ್ ಸವಾಲು

ಏಷ್ಯಾಕಪ್​: ಅಜೇಯ ಭಾರತಕ್ಕೆ ಅಚ್ಚರಿ ಅಫ್ಘಾನ್ ಸವಾಲು
X

ಸೋಲರಿಯದ ತಂಡವಾಗಿ ಮುನ್ನುಗ್ಗುತ್ತಿರುವ ಭಾರತ ತಂಡ ಮಂಗಳವಾರ ನಡೆಯುವ ಏಷ್ಯಾಕಪ್​ನ ಸೂಪರ್-4 ಪಂದ್ಯದಲ್ಲಿ ಘಟಾನುಘಟಿ ತಂಡಗಳನ್ನು ಬಗ್ಗುಬಡಿದು ಅಚ್ಚರಿ ಮೂಡಿಸಿರುವ ಆಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.

ದುಬೈನಲ್ಲಿ ಮಂಗಳವಾರ ಸಂಜೆ ನಡೆಯುವ ಪಂದ್ಯದಲ್ಲಿ ಭಾರತ ಹಾಟ್ ಫೇವರಿಟ್ ಆಗಿದ್ದರೂ ಯಾವುದೇ ಅಚ್ಚರಿ ಫಲಿತಾಂಶಕ್ಕೆ ಅವಕಾಶ ನೀಡದಂತೆ ಗೆಲುವಿನ ಹಂಬಲದಲ್ಲಿದೆ.

ಭಾರತ ತಂಡ ಆರಂಭಿಕರಾದ ರೋಹಿತ್ ಶರ್ಮ ಮತ್ತು ಶಿಖರ್​ ಧವನ್ ಅವರ ಭರ್ಜರಿ ಪ್ರದರ್ಶನದ ನೆರವಿನಿಂದ ಸುಲಭ ಗೆಲುವು ದಾಖಲಿಸುತ್ತಿದೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ಸಾಮರ್ಥ್ಯ ಇನ್ನೂ ಪೂರ್ಣ ಪರಿಚಯ ಆಗಿಲ್ಲ.

ಅಂಬಟಿ ರಾಯುಡು, ದಿನೇಶ್ ಕಾರ್ತಿಕ್​, ಧೋನಿ, ರವೀಂದ್ರ ಜಡೇಜಾ.. ಹೀಗೆ ಮಾಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳಿಗೆ ಫೈನಲ್​ಗೂ ಮುನ್ನ ಇದು ಅತ್ಯಂತ ಮಹತ್ವದ ಪಂದ್ಯವಾಗಿದೆ. ಅಲ್ಲದೇ ಅದ್ಭುತ ಫಾರ್ಮ್​ನಲ್ಲಿರುವ ಶಿಖರ್ ಧವನ್ ಅವರಿಗೆ ವಿಶ್ರಾಂತಿ ನೀಡಿ ಕೆ.ಎಲ್​.ರಾಹುಲ್​ಗೆ ಅವಕಾಶ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ.

ಮತ್ತೊಂದೆಡೆ ಆಫ್ಘಾನಿಸ್ತಾನ ತಂಡ ಶ್ರೀಲಂಕಾ, ಬಾಂಗ್ಲಾದೇಶದಂತಹ ತಂಡಗಳನ್ನು ಬಗ್ಗುಬಡಿದಿದೆ. ತಂಡದ ಸ್ಪಿನ್ನರ್​ಗಳು ಸ್ಟಾರ್ ಬ್ಯಾಟ್ಸ್​ ಮನ್​ಗಳನ್ನು ಕಟ್ಟಿ ಹಾಕಬಲ್ಲ ಅದ್ಭುತ ಸ್ಪಿನ್ನರ್​ಗಳಾಗಿದ್ದಾರೆ. ಅಲ್ಲದೇ ತಕ್ಕಮಟ್ಟಿಗೆ ನಿಂತು ಆಡುವ ಬ್ಯಾಟ್ಸ್​ಮನ್​ಗಳಿದ್ದಾರೆ. ಹಾಗಾಗಿ ತಮ್ಮನ್ನು ಕಡೆಗಣಿಸಿದರೆ ಪಾಠ ಕಲಿಸಬಲ್ಲ ಸಾಮರ್ಥ್ಯ ಇದೆ ಎಂದು ಸಾಬೀತುಪಡಿಸಿದ್ದು ಅಂತಹ ಮತ್ತೊಂದು ಅವಕಾಶ ಪಡೆದಿದೆ.

Next Story

RELATED STORIES