Top

5000 ಕೋಟಿ ರೂ. ವಂಚಿಸಿದ ಗುಜರಾತ್ ಉದ್ಯಮಿ: ವಿದೇಶಕ್ಕೆ ಪರಾರಿ?

5000 ಕೋಟಿ ರೂ. ವಂಚಿಸಿದ ಗುಜರಾತ್ ಉದ್ಯಮಿ: ವಿದೇಶಕ್ಕೆ ಪರಾರಿ?
X

ಗುಜರಾತ್ ಮೂಲದ ಔಷಧ ಕಂಪನಿಯ ನಿರ್ದೇಶಕ ನಿತಿನ್ ಸಂದೇಸರ 5000 ರೂ. ಕೋಟಿ ರೂ. ವಂಚನೆ ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆ ನೈಜೀರಿಯಾಗೆ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ.

ಸ್ಟರ್ಲಿಂಗ್ ಬಯೋಟೆಕ್ ಉದ್ಯಮ ಸಮೂಹದ ನಿರ್ದೇಶಕರಲ್ಲಿ ಒಬ್ಬರಾಗಿರುವ ನಿತಿನ್ ಸಂದೇಸರ, ಸಹೋದರ ಚೇತನ್ ಸಂದೇಸರ , ಅತ್ತಿಗೆ ದೀಪ್ತಿಬೆನ್ ಸಂದೇಸರ ಮತ್ತಿತರ ಕುಟುಂಬ ಸದಸ್ಯರನ್ನು ದುಬೈನಲ್ಲಿ ಕಳೆದ ವಾರದ ಬಂಧಿಸಲಾಗಿತ್ತು ಎಂದು ಹೇಳಲಾಗಿತ್ತು.

ಸಂದೇಸರ ಕುಟುಂಬ ಪ್ರಸ್ತುತ ದುಬೈನಲ್ಲಿ ಇಲ್ಲ. ಅವರು ನೈಜೀರಿಯಾಕ್ಕೆ ಪಲಾಯನ ಮಾಡಿರಬೇಕು ಎಂದು ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.

ಭಾರತ ಮತ್ತು ನೈಜಿರಿಯಾ ನಡುವೆ ಹಸ್ತಾಂತರ ಒಪ್ಪಂದ ಅಥವಾ ದ್ವಿಪಕ್ಷೀಯ ಕಾನೂನು ಸಹಕಾರ ಒಪ್ಪಂದ ಇಲ್ಲ. ಹೀಗಾಗಿ ಆಫ್ರಿಕಾದ ದೇಶದಿಂದ ಸಂದೇಸರ ಕುಟುಂಬವನ್ನು ಮರಳಿ ಕರೆತರುವುದು ಕಷ್ಟಸಾಧ್ಯ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್ ಎರಡನೇ ವಾರದಲ್ಲಿ ಸಂದೇಸರ ಕುಟುಂಬ ಸದಸ್ಯರನ್ನು ದುಬೈನಲ್ಲಿ ಬಂಧಿಸಲಾಗಿತ್ತು ಎಂದು ಹೇಳಲಾಗಿತ್ತು. ಆದರೆ ಅವರನ್ನು ಎಂದೂ ಬಂಧಿಸಿರಲಿಲ್ಲ. ಆದರೆ ಬಂಧನ ಕಾರ್ಯಾಚರಣೆಗೂ ಮುನ್ನ ಅವರು ನೈಜೀರಿಯಾಗೆ ಪರಾರಿಯಾಗಿರಬಹುದು ಎಂದು ಹೇಳಲಾಗಿದೆ.

ಸಾಲ ವಂಚನೆ ಹಗರಣದ ಆರೋಪದ ಮೇಲೆ ವಡೋದರಾ ಮೂಲದ ಸ್ಟರ್ಲಿಂಗ್ ಬಯೋಟೆಕ್ ಉದ್ಯಮ ಸಮೂಹಕ್ಕೆ ಸೇರಿದ ಸುಮಾರು 4700 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಕಳೆದ ಜೂನ್ ತಿಂಗಳಲ್ಲಿ ಮುಟ್ಟುಗೋಲು ಹಾಕಿತ್ತು. ಸಂದೇಸರ ಕುಟುಂಬ ಭಾರತ ಮತ್ತು ವಿದೇಶಗಳಲ್ಲಿ 300ಕ್ಕೂ ಹೆಚ್ಚು ಬೇನಾಮಿ ಮತ್ತು ನಕಲಿ ಕಂಪನಿ ಹೊಂದಿದೆ ಎಂಬ ಆರೋಪವಿದೆ.

ಪ್ರಕರಣದ ಸಂಬಂಧ ಈಗಾಗಲೇ ದೆಹಲಿ ಮೂಲದ ಉದ್ಯಮಿ ಗಗನ್ ಧವನ್, ಮಾಜಿ ಆಂಧ್ರ ಬ್ಯಾಂಕ್ ನಿರ್ದೇಶಕ ಅನೂಪ್ ಗರಗ್​, ಸ್ಟೆರ್ಲಿಂಗ್ ಬಯೋಟೆಕ್ ಕಂಪನಿಯ ನಿರ್ದೇಶಕ ರಾಜಭೂಷಣ್ ದೀಕ್ಷಿತ್ ಅವರನ್ನು ಬಂಧಿಸಲಾಗಿದೆ.

Next Story

RELATED STORIES