Top

ಚಂಡಮಾರುತದಿಂದ ಕಳೆದುಹೋಗಿದ್ದ ನೌಕಾಪಡೆ ಅಧಿಕಾರಿ ರಕ್ಷಣೆ

ಚಂಡಮಾರುತದಿಂದ ಕಳೆದುಹೋಗಿದ್ದ ನೌಕಾಪಡೆ ಅಧಿಕಾರಿ ರಕ್ಷಣೆ
X

ಏಕಾಂಗಿಯಾಗಿ ಬೋಟ್​ನಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಅಧಿಕಾರಿ ಚಂಡಮಾರುತಕ್ಕೆ ಸಿಲುಕಿ ಆಸ್ಟ್ರೇಲಿಯಾದ ಸಮುದ್ರದ ಕಳೆದುಹೋಗಿದ್ದ ಭಾರತೀಯ ನೌಕಾಪಡೆಯ ಅಧಿಕಾರಿ ಅಭಿಲಾಷ್ ಟೋಮಿ ಅವರನ್ನು ಭಾರತೀಯ ನೌಕಾಪಡೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಕಮಾಂಡರ್ ಅಭಿಲಾಷ್ ಟೋಮಿ ಅವರನ್ನು ರಕ್ಷಿಸಲಾಗಿದ್ದು, ಸಣ್ಣಪುಟ್ಟ ನೋವುಗಳಿಂದ ನರಳುತ್ತಿರುವ ಅವರನ್ನು ಫ್ರಾನ್ಸ್​ನ ಮೀನುಗಾರಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಗೋಲ್ಡನ್ ಗ್ಲೋಬ್ ರೇಸ್​ನಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ದಕ್ಷಿಣ ಭಾರತದ ಸಮುದ್ರದಲ್ಲಿ ಒಬ್ಬ ವ್ಯಕ್ತಿ ಪ್ರಯಾಣಿಸಬಹುದಾದ ಸೇಲಿಂಗ್ ದೋಣಿಯಲ್ಲಿ ಅಭ್ಯಾಸ ನಡೆಸುತ್ತಿದ್ದರು. ಇದು ಜಗತ್ತಿನ ಅತ್ಯಂತ ಕಠಿಣ ಸ್ಪರ್ಧೆ ಎಂದೇ ಹೆಸರಾಗಿದೆ.

ಅಭ್ಯಾಸ ನಡೆಸುವ ವೇಳೆ ಅಪ್ಪಳಿಸಿದ ಚಂಡಮಾರುತದಿಂದ ಅಭಿಲಾಷ್ ಟೋಮಿ ಅವರ ದೋಣಿ ತೇಲಿ ಹೋಯಿತು. ಚಂಡಮಾರುತದ ವೇಳೆ 10 ಮೀಟರ್ ಎತ್ತರದ ಅಲೆಗಳು 130 ಕಿ.ಮೀ. ವೇಗವಾಗಿ ಅಪ್ಪಳಿಸಿತ್ತು. 39 ವರ್ಷದ ಕೀರ್ತಿ ಚಕ್ರ ಪ್ರಶಸ್ತಿ ವಿಜೇತ ಟೋಮಿ ಬೆನ್ನು ನೋವಿಗೆ ಒಳಗಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಾನು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಸಂದೇಶ ರವಾನಿಸಿದ್ದರು.

Next Story

RELATED STORIES