Top

ರೈತರಿಗೆ ಸರ್ಕಾರದಿಂದ ಮತ್ತೊಂದು ಯಡವಟ್ಟು!

ರೈತರಿಗೆ ಸರ್ಕಾರದಿಂದ ಮತ್ತೊಂದು ಯಡವಟ್ಟು!
X

ಹುಬ್ಬಳ್ಳಿ : ಉತ್ತರ ಕರ್ನಾಟಕದಲ್ಲಿ ಹೆಸರು ಕಾಳನ್ನ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗಿದೆ. ರೈತ ಬೆಳೆದ ಕಾಳುಗಳನ್ನ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಆದೇಶ ಮಾಡಿತ್ತು.

ಈಗ ಅದೇ ಸರ್ಕಾರ ಮರು ಆದೇಶ ಮಾಡಿದ್ದು, ಆ ಮರು ಆದೇಶದಿಂದಾಗಿ ಬೆಂಬಲ ಬೆಲೆಯಲ್ಲಿ ಖರೀದಿ ಪ್ರಕ್ರಿಯೆ ಗೊಂದಲದ ಗೂಡಾಗಿದೆ.‌ ಇದರಿಂದ ಉತ್ತರ ಕರ್ನಾಟಕದ ರೈತ, ನಮ್ಗೆ ಸರ್ಕಾರಗಳು ಅನ್ಯಾಯ ಮಾಡಿವೆ, ಈ ಅನ್ಯಾಯವನ್ನ ಸರಿಪಡಿಸಬೇಕೆಂದು ಹೋರಾಟದ ಹಾದಿ ಹಿಡಿಯುತ್ತಿದ್ದಾರೆ..

ಸತತ ನಾಲ್ಕು ವರ್ಷಗಳಿಂದ ಭೀಕರ ಬರಗಾಲ. ಈ ಬರಗಾಲದಿಂದ ರೈತ ಬಿತ್ತಿದ ಬೀಜಗಳು ಮೊಳಕೆ‌ ಮುಡದೆ ಭೂಮಿಯಲ್ಲಿ ಕಮರಿ ಹೋಗಿವೆ. ಈ ಬಾರಿ ಮುಂಗಾರು ಅಲ್ಪ ಸ್ವಲ್ಪ ಆಗಿದೆ.

ಈ ಮಳೆಯಿಂದ ಅಲ್ಪ ಸ್ವಲ್ಪ ಉತ್ತರ ಕರ್ನಾಟಕ ಭಾಗದಲ್ಲಿ ಅಂದ್ರೆ ಧಾರವಾಡ, ಗದಗ, ಕಲಬುರಗಿ, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಜಿಲ್ಲೆಯ ರೈತ ಸಾಲ ಶೂಲ ಮಾಡಿ ಹೆಸರು ಬೆಳೆದಿದ್ದರು.

ಕೇಂದ್ರ ಸರ್ಕಾರ ಈ ಹೆಸರನ್ನ ಬೆಂಬಲ ಬೆಲೆ ಯೋಜನೆಯಲ್ಲಿ ಪ್ರತಿ ರೈತರಿಂದ 10 ಕ್ವಿಂಟಾಲ್ ಖರೀದಿಸುವದಾಗಿ ಘೋಷಣೆ ಮಾಡಿತ್ತು. ಸರ್ಕಾರ ಈಗ ದಿಡೀರನೆ 4 ಕ್ವಿಂಟಾಲ್‌ಗೆ ಮಿತಿಗೊಳಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ರೈತ ಸಮೂಹದ ಆಕ್ರೋಶ ಭುಗಿಲೇಳತೊಡಗಿದೆ.

ಹೆಚ್ಚು ರೈತರು ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದರು. ಆದ್ರೆ, ಪ್ರತಿಯೊಬ್ಬ ಬೆಳೆಗಾರರಿಂದ ಖರೀದಿಸುವ ಪ್ರಮಾಣವನ್ನ ಕಡಿಮೆ ಮಾಡಿರುವದಾಗಿ ಇದೇ ತಿಂಗಳು 19‌ ರಂದು ಸರ್ಕಾರ ಆದೇಶ ಹೊರಡಿಸಿದೆ.

10 ಕ್ವಿಂಟಾಲ್‌ಗಾದರೂ ಬೆಂಬಲ ಬೆಲೆ ಸಿಗುತ್ತದೆ ಎಂದು ಹೆಸರು ಕಾಳು ಒಕ್ಕಲು ಮಾಡಿ ಸಿದ್ದಗೊಳಿಸಿಕೊಂಡಿರುವ ಉತ್ತರ ಕರ್ನಾಟಕದ ರೈತರು ಈಗ ತೀವ್ರ ಸಮಸ್ಯೆಗೆ ಸಿಲುಕುತ್ತಿದ್ದಾರೆ..

ಪ್ರತಿ ಕ್ವಿಂಟಾಲ್‌ಗೆ 6975 ರೂ ಬೆಂಬಲ ಬೆಲೆಯಲ್ಲಿ 23,250 ಮೆಟ್ರಿಕ್ ಟನ್ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿತ್ತು. ಇದಕ್ಕೆ 90 ದಿನಗಳ ಕಾಲ ಗಡುವು ಸಹಿತ ನೀಡಿತ್ತು.

ಅದರನ್ವಯ ಪ್ರತಿಯೊಬ್ಬ ರೈತರಿಂದ ತಲಾ 10 ಕ್ವಿಂಟಾಲ್ ಖರೀದಿಗೆ ಸರ್ಕಾರ ಆದೇಶಿಸಿತ್ತು. ಇದೇ 16 ಕ್ಕೆ ರೈತರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಒಟ್ಟು 1,14, 149 ರೈತರು ನೊಂದಣಿ ಮಾಡಿಕೊಂಡಿದ್ದಾರೆ.

ಕೇಂದ್ರದ ಮಾರ್ಗಸೂಚಿ ಪ್ರಕಾರ 23,250 ರೈತರಿಂದ ಮಾತ್ರ ಖರೀದಿಸಲು ಸಾಧ್ಯವಿದೆ. ಆಗ ಉಳಿದ ರೈತರಿಗೆ ಅನ್ಯಾಯವಾಗುತ್ತದೆ ಎಂದು ಕಾರಣ ನೀಡಿ 10 ಕ್ವಿಂಟಾಲ್ ಬದಲಾಗಿ ತಲಾ 4 ಕ್ವಿಂಟಾಲ್ ಖರೀದಿಗೆ ಆದೇಶ ಮಾಡಿದೆ.

ಈಗ ಕೇಂದ್ರ ಸರ್ಕಾರ ಮಾಡಿದ ಆದೇಶದಿಂದ ಪ್ರತಿ ರೈತರಿಂದ ನಾಲ್ಕೇ ಕ್ವಿಂಟಾಲ್ ಖರೀದಿಸಿದ್ರೂ 58,125 ರೈತರಿಗೆ ಮಾತ್ರ ಯೋಜನೆಯ ಅಲ್ಪ ಲಾಭ ದೊರೆಯುತ್ತದೆ. ಅಂದ್ರೆ, ನೊಂದಣಿ ಮಾಡಿಕೊಂಡ ರೈತರಲ್ಲಿ 56,424 ರೈತರಿಗೆ ಕೊಂಚ ನ್ಯಾಯವೂ ಸಿಗುವುದಿಲ್ಲ.

ಯಾವ ಸರ್ಕಾರಗಳು ಬಂದ್ರು ರೈತರ ಬೆನ್ನಿಗೆ ನಿಲ್ಲುವುದಿಲ್ಲ. ನಮ್ಮ ಜೊತೆ ಚಲ್ಲಾಟವಾಡಿ ತಮ್ಮ ಬೇಳೆಯನ್ನ ಬೇಯಿಸಿಕೊಳ್ಳುತ್ತವೆ.

ಸರ್ಕಾರ ಕಚ್ಚಾಡುವದನ್ನ ಬಿಟ್ಟು ಬೆಂಬಲ ಬೆಲೆಯಲ್ಲಿ ಮೊದಲು ಘೋಷಿಸಿದ ಪ್ರಮಾಣದಲ್ಲಿಯೇ ಹೆಸರು ಖರೀದಿ ಮಾಡಿ ರೈತರ ಬೆನ್ನಿಗೆ ಸರ್ಕಾಗಳು ನಿಲ್ಲಬೇಕು ಎಂದು ರೈತರ ಆಗ್ರಹವಾಗಿದೆ. ಇನ್ನಾದರೂ ಸರ್ಕಾರಗಳು ರೈತ ಬೆಳೆದ ಬೆಳೆಗಳನ್ನ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿ ಅನ್ನದಾತನಿಗೆ ಅನುಕೂಲ ಮಾಡಿಕೊಡಬೇಕಿದೆ...

ವರದಿ : ಯಲ್ಲಪ್ಪ‌ ಸೋಲಾರಗೊಪ್ಪ, TV5 ಹುಬ್ಬಳ್ಳಿ

Next Story

RELATED STORIES