Top

ಕೀರ್ತಿಗೌಡ ಬಗ್ಗೆ ದುನಿಯಾ ವಿಜಿ ಪತ್ನಿ ಹೇಳಿದ್ದೇನು..?

ಕೀರ್ತಿಗೌಡ ಬಗ್ಗೆ ದುನಿಯಾ ವಿಜಿ ಪತ್ನಿ ಹೇಳಿದ್ದೇನು..?
X

ಬೆಂಗಳೂರು: ಪಾನಿಪುರಿ ಕಿಟ್ಟಿ ಸಹೋದರನ ಮೇಲೆ ದುನಿಯಾ ವಿಜಯ್ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಜಯ್ ಪತ್ನಿ ನಾಗರತ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಪಾನಿಪುರಿ ಕಿಟ್ಟಿ ಒಳ್ಳೆ ಮನುಷ್ಯ ಎಂದು ನಾಗರತ್ನ ಹೇಳಿದ್ದು, ವಿಜಯ್ ಜೊತೆ ತುಂಬಾ ಚೆನ್ನಾಗೇ ಇದ್ರು. ಪಾನಿಪುರಿ ಕಿಟ್ಟಿ ಅವರ ಮನೆಯಿಂದ ಊಟ ತಂದು ವಿಜಯ್‌ಗೆ ಕೊಡ್ತಿದ್ರು. ನನ್ನ ಗಂಡನ ಜೊತೆ ತುಂಬಾ ಚೆನ್ನಾಗಿದ್ರು. ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಯಾಕೆ ಗಲಾಟೆ ಆಯಿತು ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.

ನಿನ್ನೆ ಪೊಲೀಸ್ ಠಾಣೆಯಲ್ಲಿ ವಿಜಯ್ ಎರಡನೇ ಪತ್ನಿ ಕೀರ್ತಿ ವಿರುದ್ಧ ನಾಗರತ್ನ ದೂರು ನೀಡಿದ್ದು, ನಿನ್ನೆ ದುನಿಯಾ ವಿಜಯ್ ಗಲಾಟೆ ವಿಚಾರ ಟಿವಿಯಲ್ಲಿ ನೋಡ್ದೆ. ಮಗಾ ಸಾಮ್ರಾಟ್ ಕೂಡಾ ವಿಜಯ್ ಜೊತೆ ಇದ್ದದ್ದನ್ನ ಟಿವಿಯಲ್ಲಿ ನೋಡಿ, ಗಾಬರಿಯಾಗಿ ಕೀರ್ತಿ ಗೌಡ ಮನೆಗೆ ಹೋದೆ. ಅಲ್ಲಿ ಗಲಾಟೆ, ಹೊಡೆದಾಟ ನಡೆಯಿತು. ನಂತರ ಪೊಲೀಸ್ ಠಾಣೆಗೆ ಕಂಪ್ಲೆಂಟ್ ಕೊಟ್ಟೆ ಎಂದಿದ್ದಾರೆ.

ಕೀರ್ತಿ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಾಗರತ್ನ, ದುನಿಯಾ ವಿಜಯ್ ಗೆ ಬುದ್ಧಿ ಹೇಳೋರು ಯಾರು ಇಲ್ಲ. ಕೀರ್ತಿ ಗೌಡದು ದಾರಿದ್ರ ಕಾಲು. ಅವಳು ಕಾಲು ಇಟ್ಟಿದೆ ತಡ ವಿಜಯ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಜೈಲು,ಪೊಲೀಸ್ ಠಾಣೆಗೆ ಹೋಗ್ತಾನೆ ಇದ್ದಾರೆ. ನಾನ್ ಬುದ್ಧಿ ಹೇಳೋಕೆ ಹೋದೆ ನನ್ನನ್ನ ದೂರ ಮಾಡಿದ್ರು. ಈಗ ಅವರು ದುಡ್ಡಿಗಾಗಿ ಬಂದವಳ ಜೊತೆ ಇದ್ದಾರೆ. ಅವ್ಳು ಸ್ವಲ್ಪ ದಿನ ಇರ್ತಾಳೆ ಆಮೇಲೆ ಹೋಗ್ತಾಳೆ. ಅವ್ರೆಲ್ಲ ದುಡ್ಡಿಗೆ ಬರೋರು. ಈಗ ಇವ್ರು ಜೈಲಿಗೆ ಹೋಗಿದ್ದಾರೆ, ನನ್ನ ಮಕ್ಕಳ ಗತಿ ಏನು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Next Story

RELATED STORIES