Top

ದುನಿಯಾ ವಿಜಿ ಮೇಲೆ ನಿಷೇಧದ ತೂಗುಗತ್ತಿ

ದುನಿಯಾ ವಿಜಿ ಮೇಲೆ ನಿಷೇಧದ ತೂಗುಗತ್ತಿ
X

ಮಾಸ್ತಿಗುಡಿ ದುರಂತದ ವಿಚಾರವಾಗಿ ಚಿತ್ರರಂಗದಿಂದ ತಾತ್ಕಾಲಿಕವಾಗಿ ಬ್ಯಾನ್ ಆಗಿದ್ದ ನಟ ದುನಿಯಾ ವಿಜಿ, ಇದೀಗ ಮತ್ತೊಮ್ಮೆ ನಿಷೇಧಕ್ಕೆ ಗುರಿಯಾಗುವ ಸಾಧ್ಯತೆಯಿದೆ. ಈ ಕುರಿತ ಸಮಗ್ರ ವರದಿ ಇಲ್ಲಿದೆ.

ಸ್ಯಾಂಡಲ್​ವುಡ್ ಅಂಗಳದಲ್ಲಿ ಚಂಡನ ಪುಂಡಾಟ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಒಂದರ ಮೇಲೊಂದರಂತೆ ದುನಿಯಾ ವಿಜಿ ಕಿರಿಕ್ ಮಾಡಿಕೊಳ್ಳುತ್ತಾ ಹೋಗುತ್ತಿದ್ದಾರೆ. ಸಿನಿಮಾ ಲೈಫ್​ಗೂ ರಿಯಲ್ ಲೈಫ್​ಗೂ ವ್ಯತ್ಯಾಸ ಗೊತ್ತಾಗದಂತಹ ಸ್ಥಿತಿಯಲ್ಲಿರುವ ವಿಜಿ, ರೀಲ್​ನಂತೆ ರಿಯಲ್ ಲೈಫ್​ನಲ್ಲೂ ತಾಕತ್ತು ಪ್ರದರ್ಶನಕ್ಕೆ ಇಳಿದಿದ್ದಾರೆ.

ಸ್ಟಂಟ್ ಬಾಯ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ದುನಿಯಾ ವಿಜಿ ಸ್ಟಾರ್​ಗಳಿಂದ ಒದೆ ತಿನ್ನೋದ್ರಿಂದ ತಪ್ಪಿಸಿಕೊಂಡು ತಾವೇ ನಾಯಕನಟನಾಗಿ ಬೆಳದದ್ದೇನೋ ಸರಿ. ಆದ್ರೆ ಝೀರೋ ಲೆವೆಲ್​ನಿಂದ ಹೀರೋ ಆಗಿದ್ದನ್ನ ಮರೆತು ಮನಸ್ಸಿಗೆ ಬಂದಂತೆ ಮಾಡೋ ಮೂರ್ಖನಾಗಿ ವರ್ತಿಸತೊಡಗಿದ್ದಾರೆ.

ಅಲ್ಪನಿಗೆ ಐಶ್ವರ್ಯಾ ಬಂದ್ರೆ ಅರ್ಧ ರಾತ್ರಿಯಲ್ಲೇ ಕೊಡೆ ಹಿಡಿದನಂತೆ ಅನ್ನೋ ಗಾದೆ ಮಾತು ದುನಿಯಾ ವಿಜಿ ಲೈಫ್​ಗೆ ಹೇಳಿ ಮಾಡಿಸಿದಂತಿದೆ. ಹಣ, ಸ್ಟಾರ್ಡಮ್, ಮನ್ನಣೆ ಹೀಗೆ ಎಲ್ಲವೂ ಒಟ್ಟೊಟ್ಟಿಗೆ ವಿಜಿಗೆ ಲಾಟರಿಯಂತೆ ಹೊಡೆದದ್ದು ಮಾತ್ರ ಸುಳ್ಳಲ್ಲ. ಅದಕ್ಕೆ ಅವ್ರ ಪ್ರತಿಭೆಯೂ ಕಾರಣವಾಗಿರಬಹುದು.

ಆದರೆ ಯಾವಾಗ ಸುಖದ ಸುಪ್ಪೊತ್ತಿಗೆ ಕಂಡರೋ ಅಂದೇ ವಿಜಿ ಕರಿಯರ್ ಪತನದ ಹಾದಿ ಹಿಡಿಯತೊಡಗಿತು. ವೈಯಕ್ತಿಕ ಜೀವನದ ಜೊತೆಯಲ್ಲೇ ಸಿನಿಮಾ ಕರಿಯರ್​ಗೂ ತಾನು ತನ್ನ ವರ್ತನೆಯೇ ಮುಳ್ಳಾಗಿಬಿಡ್ತಿದೆ.

ಸಾಮಾನ್ಯ ಸ್ಟಂಟ್ ಬಾಯ್ ಒಬ್ಬ ಈ ರೀತಿ ಅಪಾರ ಅಭಿಮಾನಿ ವೃಂದ ಸಂಪಾದಿಸೋದು ಅಸಾಮಾನ್ಯ ಮಾತು. ಆದ್ರೆ ಅದನ್ನ ದುನಿಯಾ ವಿಜಿ ಉಳಿಸಿಕೊಳ್ಳುವಲ್ಲಿ ಹಂತ ಹಂತವಾಗಿ ಎಡವಿದ್ರು. ಯಾರು ಸ್ಟಾರ್ ಅಂತ ಮೆರೆಸಿದ್ರೋ, ಅವರೇ ಏಕ್ಧಮ್ ಉಗಿದು ಉಪ್ಪಿನಕಾಯಿ ಹಾಕೋಕೆ ಮುಂದಾದ್ರು. ಅದಕ್ಕೆ ಕಾರಣಗಳನ್ನ ಹೇಳ್ತಾ ಹೋದ್ರೆ ಒಂದಾ ಎರಡಾ..?

ಚಿತ್ರರಂಗ ದುನಿಯಾ ವಿಜಿಯನ್ನ ಒಮ್ಮೆ ಬ್ಯಾನ್ ಮಾಡಲು ನಿರ್ಧರಿಸಿತ್ತು. ಯೆಸ್... ನಿರ್ಧರಿಸಿದ್ದಷ್ಟೇ ಅಲ್ಲ, ಒಂದಷ್ಟು ದಿನ ಚಿತ್ರರಂಗದ ಕಾರ್ಯ ಕಲಾಪಗಳಲ್ಲಿ ಭಾಗವಹಿಸುವಂತಿಲ್ಲ ಅಂತ ಬ್ಯಾನ್ ಮಾಡಿಬಿಟ್ಟಿತ್ತು. ಮಾಸ್ತಿಗುಡಿ ದುರಂತದಲ್ಲಿ ಕಡೆದ ಬಾಹುಬಲಿಗಳಂತಿದ್ದ ಅನಿಲ್- ಉದಯ್ ಸಾವಿಗೆ ದುನಿಯಾ ವಿಜಿ ಕೂಡ ಕಾರಣಕರ್ತರು ಅಂತ, ಆ ಚಿತ್ರದ ನಿರ್ಮಾಪಕ, ಸ್ಟಂಟ್ ಮಾಸ್ಟರ್ ಜೊತೆಗೆ ವಿಜಿಗೂ ಚಿತ್ರರಂಗದ ನಿರ್ಬಂಧ ಹೇರಿತ್ತು.

ನವೆಂಬರ್ 9, 2016ರಲ್ಲಿ ಅಂದಿನ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿದ್ದ ಸಾರಾ ಗೋವಿಂದು, ದುನಿಯಾ ವಿಜಿ ಮೇಲೆ ಈ ರೀತಿ ಆದಂತಹ ಕಠಿಣ ಕ್ರಮ ಕೈಗೊಂಡಿದ್ದರು. ಆದ್ರೆ ಯಾವಾಗ ದುನಿಯಾ ವಿಜಿ ಅಂಡ್ ಟೀಂ ಮಾಸ್ತಿಗುಡಿ, ರೆಬೆಲ್ ಸ್ಟಾರ್ ಅಂಬರೀಶ್ ಮನೆಗೋಗಿ ಕಣ್ಣೀರು ಹಾಕಿದ್ರೋ, ಅಂದೇ ಮತ್ತೊಮ್ಮೆ ಫಿಲ್ಮ್ ಚೇಂಬರ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ನಿಷೇಧ ಹಿಂಪಡೆಯಲಾಯ್ತು.

ಬ್ಯಾನ್ ಹಿಂಪಡೆಯುತ್ತಿದ್ದಂತೆ ಮಾಸ್ತಿಗುಡಿ ಸಿನಿಮಾ ಕೂಡ ರಿಲೀಸ್ ಆಯ್ತು. ಆದ್ರೆ ಅನಿಲ್- ಉದಯ್ ಶಾಪವೋ ಏನೋ ಅದು ಅಟ್ಟರ್ ಫ್ಲಾಪ್ ಆಗಿದ್ದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದ್ರೀಗ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿ ಗೌಡ ಹಲ್ಲೆ ಪ್ರಕರಣದಿಂದ ವಿಜಿ ಮತ್ತೊಮ್ಮೆ ಬ್ಯಾನ್ ಆಗೋ ಸೂಚನೆ ಇದೆ.

ವಿಜಿ ಚಿತ್ರರಂಗ ಬ್ಯಾನ್ ಕುರಿತು ನಿನ್ನೆಯಿಂದಲೇ ಫಿಲ್ಮ್ ಚೇಂಬರ್​ನಲ್ಲಿ ಮಾತುಕತೆ ನಡೆಯುತ್ತಿದ್ದು, ಅದಕ್ಕೆ ಪುಷ್ಠಿ ನೀಡುವಂತೆ ಕನ್ನಡಪರ ಸಂಘಟನೆಗಳು ಕೂಡ ದುನಿಯಾ ವಿಜಿಯನ್ನ ಬ್ಯಾನ್ ಮಾಡಲು ಚೇಂಬರ್​ ಮೆಟ್ಟಿಲೇರಿವೆ. ಅದ್ರಂತೆ ಕನ್ನಡ ಚಳುವಳಿ ಒಕ್ಕೂಟದ ಅಧ್ಯಕ್ಷ ನಾಗೇಶ್ ಚೇಂಬರ್​ನಲ್ಲಿ ದೂರು ದಾಖಲಿಸಿದ್ದಾರೆ.

ಇನ್ನು ಈ ಕುರಿತು ಫಿಲ್ಮ್ ಚೇಂಬರ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರನ್ನೂ ಬ್ಯಾನ್ ಮಾಡಲು ಸಾಧ್ಯವಿಲ್ಲ, ಬೇರೆ ಏನು ಕ್ರಮ ಕೈಗೊಳ್ಳಬಹುದು ಅನ್ನೋದನ್ನ ಚರ್ಚಿಸುತ್ತೇವೆ ಅಂದಿದ್ದಾರೆ.

ಜಯಮ್ಮನ ಮಗ ಸಿನಿಮಾದಿಂದ ದುನಿಯಾ ಟಾಕೀಸ್ ಅನ್ನೋ ಹೋಮ್ ಬ್ಯಾನರ್​ನಡಿ ಸಿನಿಮಾಗಳ ನಿರ್ಮಾಣಕ್ಕೂ ಮುಂದಾಗಿದ್ದ ದುನಿಯಾ ವಿಜಿ, ಇತ್ತೀಚೆಗೆ ತೆರೆಕಂಡ ಜಾನಿ ಜಾನಿ ಎಸ್ ಪಪ್ಪಾ ಚಿತ್ರದ ಸೋಲಿನಿಂದ ಕೈಸುಟ್ಟಿಕೊಂಡಿದ್ರು. ಆದ್ರೀಗ ಮತ್ತೊಮ್ಮೆ ಮಗ ಸಾಮ್ರಾಟ್​ನ ಇಂಡಸ್ಟ್ರಿಗೆ ಇಂಟ್ರಡ್ಯೂಸ್ ಮಾಡೋ ಮೂಲಕ ಕುಸ್ತಿ ಅನ್ನೋ ದೇಸಿ ಕ್ರೀಡೆ ಕುರಿತ ಸಿನಿಮಾಗೆ ಮುಂದಾಗಿದ್ರು ವಿಜಿ. ಅದರ ಪ್ರೀ ಪ್ರೊಡಕ್ಷನ್ ಕೆಲಸಗಳು ಆಲ್ಮೋಸ್ಟ್ ಆಲ್ ಮುಗಿಯೋ ಅಷ್ಟರಲ್ಲಿ ವಿಜಿ ಹಲ್ಲೆ ಮಾಡಿ ದೊಡ್ಡ ರಾದ್ದಾಂತ ಮಾಡಿಕೊಂಡು ಪರಪ್ಪನ ಅಗ್ರಹಾರ ಸೇರಿಕೊಂಡುಬಿಟ್ಟಿದ್ದಾರೆ.

ಇನ್ನು ಚಿತ್ರರಂಗ ಕೂಡ ಗಲಾಟೆ, ತಂಟೆ-ತಕರಾರಿನಿಂದ ದೂರವಿರುವಂತೆ ಹೇಳಲಿದೆಯೇ ಹೊರತು ಬ್ಯಾನ್ ಮಾಡೋ ಅಂತಹ ಕ್ಲಿಷ್ಟ ನಿರ್ಧಾರ ತೆಗೆದುಕೊಳ್ಳೋದಿಲ್ಲ. ಅದೇನೇ ಇರಲಿ, ಕಷ್ಟದಿಂದ ಮೇಲೆ ಬಂದಂತಹ ವಿಜಿ ಬೇಲ್ ಸಿಕ್ಕಿ ಹೊರಕ್ಕೆ ಬಂದ ಮೇಲಾದ್ರೂ, ತಾನಾಯ್ತು ತನ್ನ ಕೆಲಸ ಆಯ್ತು ಅಂತ ಸಿನಿಮಾಗೆ ಸೀಮಿತವಾಗ್ತಾರಾ ಅನ್ನೋದು ಕಾದುನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

Next Story

RELATED STORIES