Top

ದರ್ಶನ್ ಕಾರು ಅಪಘಾತ: ದಚ್ಚು ಕೈಗೆ ಶಸ್ತ್ರಚಿಕಿತ್ಸೆ

ದರ್ಶನ್ ಕಾರು ಅಪಘಾತ: ದಚ್ಚು ಕೈಗೆ ಶಸ್ತ್ರಚಿಕಿತ್ಸೆ
X

ಮೈಸೂರು: ಮೈಸೂರಿನಿಂದ ವಾಪಸ್‌ ಆಗುತ್ತಿದ್ದ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಹಿನಕಲ್ ಬಳಿ ಬೆಳಗಿನ ಜಾವ 3ಗಂಟೆ ಸುಮಾರಿಗೆ ಅಪಘಾತವಾಗಿದ್ದು, ಒಂದೇ ಕಾರಿನಲ್ಲಿ ನಟ ದೇವರಾಜ್, ಪ್ರಜ್ವಲ್ ದೇವರಾಜ್, ದರ್ಶನ್ ಪ್ರಯಾಣಿಸುತ್ತಿದ್ದು, ಅಪಘಾತದಲ್ಲಿ ದರ್ಶನ ಕೈಗೆ ಹಾಕಿದ್ದ ಕಡಗ ಒಡೆದು ದರ್ಶನ್ ಕೈಗೆ ಗಾಯವಾಗಿದೆ. ಅಲ್ಲದೇ ದೇವರಾಜ್ ಮತ್ತು ಪ್ರಜ್ವಲ್‌ಗೂ ಗಾಯವಾಗಿದೆ.

ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದರ್ಶನ್‌ರನ್ನು ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ದರ್ಶನ್ ಕೈಗೆ ಹಾಕಿದ್ದ ಕಡಗ ತುಂಡಾಗಿ ಕೈಗೆ ಚುಚ್ಚಿ ಬಲಗೈ ಮೊಣಕೈಗೆ ಚುಚ್ಚಿ ತೀವ್ರ ರಕ್ತಸ್ರಾವವಾದ ಕಾರಣ ದರ್ಶನ್ ಕೈಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಚಿಕಿತ್ಸೆ ನಂತರ ದರ್ಶನ್‌ರನ್ನ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದ್ದು, ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಆಸ್ಪತ್ರೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನೆಚ್ಚಿನ ನಟನ ಆರೋಗ್ಯ ವಿಚಾರಿಸಲು ದರ್ಶನ್ ಅಭಿಮಾನಿಗಳು ಆಸ್ಪತ್ರೆಗೆ ಆಗಮಿಸಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಸಿಆರ್‌ಪಿಎಫ್ ತುಕಡಿಯನ್ನು ನಿಯೋಜಿಸಲಾಗಿದೆ.

ಪೊಲೀಸರು ದರ್ಶನ್ ಸ್ನೇಹತರನ್ನು ಈ ಬಗ್ಗೆ ವಿಚಾರಿಸಿದ್ದು, ಇದು ಸೆಲ್ಫ್ ಆಕ್ಸಿಡೆಂಟ್, ಯಾರಿಗೂ ಏನೂ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ದರ್ಶನ್ ಸ್ನೇಹಿತರು ಯಾವುದೇ ಮಾಹಿತಿ ಬಹಿರಂಗಪಡಿಸುತ್ತಿಲ್ಲ. ಇನ್ನು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರರಾವ್, ಅಪಘಾತದ ಬಗ್ಗೆ ಯಾರೂ ಪ್ರಕರಣವನ್ನು ದಾಖಲಿಸಿಲ್ಲ. ಕೊಲಂಬಿಯಾ ಆಸ್ಪತ್ರೆಯಿಂದ ಎಂಎನ್‌ಸಿ ಬಂದರೆ ದೂರು ದಾಖಲು ಮಾಡುತ್ತೇವೆ. ಆದ್ದರಿಂದ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ನವರಸ ನಾಯಕ ಜಗ್ಗೇಶ್, ಅಭಿಮಾನಿಗಳ ಹಾರೈಕೆ, ಆಶೀರ್ವಾದದಿಂದ ಕ್ಷೇಮವಾಗಿದ್ದೀರಿ. ಸುಖವಾಗಿ ಬಾಳಿ ಎಂದು ಶುಭಹಾರೈಸಿದ್ದಾರೆ.

Next Story

RELATED STORIES