Top

ಏಷ್ಯಾಕಪ್: ಧವನ್-ರೋಹಿತ್ ಅಬ್ಬರಕ್ಕೆ ಮಣಿದ ಪಾಕಿಸ್ತಾನ

ಏಷ್ಯಾಕಪ್: ಧವನ್-ರೋಹಿತ್ ಅಬ್ಬರಕ್ಕೆ ಮಣಿದ ಪಾಕಿಸ್ತಾನ
X

ದುಬೈ: ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರ ಶತಕಗಳ ನೆರವಿನಿಂದ ಭಾರತ ತಂಡ ಏಷ್ಯಾಕಪ್​ನಲ್ಲಿ ಪಾಕಿಸ್ತಾನ ವಿರುದ್ಧ 9 ವಿಕೆಟ್​ಗಳ ಭಾರೀ ಗೆಲುವು ದಾಖಲಿಸಿದೆ.

ಭಾನುವಾರ ನಡೆದ ಸೂಪರ್​-4 ಹಂತದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವನ್ನು 7 ವಿಕೆಟ್​ಗೆ 238 ರನ್‍ಗಳಿಗೆ ನಿಯಂತ್ರಿಸಿದ ಭಾರತ ತಂಡ 39.3 ಓವರ್​ ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಸ್ಪರ್ಧಾತ್ಮಕ ಮೊತ್ತ ಗುರಿ ಬೆಂಬತ್ತಿದ ಭಾರತ ತಂಡಕ್ಕೆ ರೋಹಿತ್ ಮತ್ತು ಶಿಖರ್ ಧವನ್ ಮೊದಲ ವಿಕೆಟ್​ಗೆ 210 ರನ್​ ಜೊತೆಯಾಟದ ಮೂಲಕ ಭರ್ಜರಿ ಆರಂಭ ಒದಗಿಸಿದರು. ನಂತರ ಬಂದ ಅಂಬಟಿ ರಾಯುಡು ಮತ್ತು ರೋಹಿತ್ ಗೆಲುವಿನ ದಡ ಸೇರಿಸಿದರು.

ನಾಯಕ ರೋಹಿತ್119 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 111 ರನ್ ಬಾರಿಸಿ ಔಟಾಗದೇ ಉಳಿದರು. ಇದು ರೋಹಿತ್​ಗೆ 19ನೇ ಏಕದಿನ ಶತಕವಾಗಿದೆ. ಮತ್ತೊಬ್ಬ ಬ್ಯಾಟ್ಸ್ ಮನ್ ಶಿಖರ್ ಧವನ್ 100 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ 114 ರನ್ ಸಿಡಿಸಿ ಔಟಾದರು. ಇದು ಧವನ್​ಗೆ 15ನೇ ಶತಕವಾಗಿದೆ.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ಸರ್ಫಾರಾಜ್ ಅಹ್ಮದ್ (44) ಮತ್ತು ಶೋಯೆಬ್ ಮಲಿಕ್ (78) 4ನೇ ವಿಕೆಟ್​ಗೆ 107 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು.

ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ಜಸ್ ಪ್ರೀತ್ ಬುಮ್ರಾ, ಯಜುರ್ವೆಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು.

  • ಸಂಕ್ಷಿಪ್ತ ಸ್ಕೋರ್
  • ಪಾಕಿಸ್ತಾನ 50 ಓವರ್ 7 ವಿಕೆಟ್​ಗೆ 237 (ಮಲಿಕ್ 78, ಸರ್ಫರಾಜ್ 44, ಜಮಾನ್ 31, ಆಸೀಫ್ 30, ಬುಮ್ರಾ 29/2, ಚಾಹಲ್ 46/2, ಕುಲದೀಪ್ 41/2).
  • ಭಾರತ 39.3 ಓವರ್ 1 ವಿಕೆಟ್ 237 (ರೋಹಿತ್ ಅಜೇಯ 111, ಧವನ್ 114, ರಾಯುಡು ಅಜೇಯ 12).
  • ಪಂದ್ಯಶ್ರೇಷ್ಠ: ಶಿಖರ್ ಧವನ್

Next Story

RELATED STORIES