ಪ್ರವಾಹದಲ್ಲಿ ಕೊಚ್ಚಿ ಹೋದ ಬಸ್: ವೀಡಿಯೋ ವೈರಲ್

X
TV5 Kannada24 Sep 2018 8:54 AM GMT
ಪ್ರಸಿದ್ಧ ಪ್ರವಾಸಿತಾಣ ಮನಾಲಿಯ ಬಿಯಾಸ್ ನದಿ ಪ್ರವಾಹದಲ್ಲಿ ಬಸ್ ಒಂದು ನೋಡನೋಡುತ್ತಿದ್ದಂತೆ ಕೊಚ್ಚಿಹೋಗಿದೆ.
ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು. ಅದೃಷ್ಟವಶಾತ್ ಕೊಚ್ಚಿಹೋದ ಬಸ್ನಲ್ಲಿ ಪ್ರಯಾಣಿಕರು ಇರಲಿಲ್ಲ.
ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 127.4 ಮಿಲಿ ಮೀಟರ್ ಮಳೆಯಾಗಿದ್ದು. ನದಿಗಳು ತುಂಬಿ ಹರಿಯುತ್ತಿವೆ.
ನೈರುತ್ಯ ಮುಂಗಾರು ಈ ಭಾರೀ ಮಳೆಗೆ ಕಾರಣವಾಗಿದ್ದು, ಅಲ್ಲಲ್ಲಿ ಭೂಕುಸಿತಗಳು ಸಂಭವಿಸಿವೆ. ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿದ್ದು ಬಿಯಾಸ್ ನದಿ ಅಪಾಯದ ಮಟ್ಟ ಮೀರಿದೆ.
Next Story