ಯಡಿಯೂರಪ್ಪ ವಾಟ್ಸಾಪ್ ಕರೆ ಮಾಡಿ ಶಾಸಕರಿಗೆ ಆಫರ್ : ಕೆ ಸಿ ವೇಣುಗೋಪಾಲ್

X
TV5 Kannada23 Sep 2018 11:39 AM GMT
ಬೆಂಗಳೂರು : ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕಾಂಗ್ರೆಸ್ ಸಭೆಯ ಬಳಿಕ, ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡರು ಹರಿಹಾಯ್ದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ಹೊತ್ತಿರುವ ಕೆ ಸಿ ವೇಣುಗೋಪಾಲ್ ಮಾತನಾಡಿ, ಬಿಜೆಪಿಯ ಯಡಿಯೂರಪ್ಪ, ವಾಟ್ಸಾಪ್ನಲ್ಲಿ ಕಾಂಗ್ರೆಸ್ ಶಾಸಕರಿಗೆ ಆಫರ್ಗಳನ್ನು ನೀಡಿದ್ದಾರೆ.
ಅದು ನಮ್ಮ ಗಮನಕ್ಕೆ ಬಂದಿದೆ. ಆದರೇ ನಮ್ಮ ಯಾವುದೇ ಶಾಸಕರು ಬಿಜೆಪಿಯವರ ಆಫರ್ ಒಪ್ಪಿಕೊಂಡಿಲ್ಲ. ಆವರು ಏನೇ ಹಣಬಲ, ಬಗೆ ಬಗೆಯ ಆಫರ್ ಮಾಡಿದರು ನಮ್ಮ ಶಾಸಕರು ಆಪರೇಶನ್ ಕಮಲಕ್ಕೆ ಒಳಗಾಗೋಲ್ಲ.
ರಾಜ್ಯದಲ್ಲಿ ನಮ್ಮ ಪಕ್ಷ ತುಂಬಾನೇ ಶಕ್ತಿಶಾಲಿಯಾಗಿದೆ. ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಸುಭದ್ರವಾಗಿ ಆಡಳಿತ ನಡೆಸಲಿದೆ.
ನಮ್ಮ ಶಾಸಕರು ಯಾವುದೋ ಬ್ಲಾಕ್ಮೇಲ್ಗೆ ಒಳಗಾಗುವುದಿಲ್ಲ. ಬಿಜೆಪಿಯವರ ಯಾವುದೇ ಬ್ಲಾಕ್ ಮೇಲ್ ಕೂಡ ಕಾಂಗ್ರೆಸ್ನಲ್ಲಿ ನಡೆಯುವುದಿಲ್ಲ ಎಂದು ಕೆ ಸಿ ವೇಣುಗೋಪಾಲ್ ಹೇಳಿದರು.
Next Story