Top

ಒಂದೇ ವೇದಿಕೆಯಲ್ಲಿ ಸುದೀಪ್, ಯಶ್, ಶಿವಣ್ಣ, ಗಣೇಶ್ ಬಿಂದಾಸ್ ಸ್ಟೆಪ್ಸ್.!

ಒಂದೇ ವೇದಿಕೆಯಲ್ಲಿ ಸುದೀಪ್, ಯಶ್, ಶಿವಣ್ಣ, ಗಣೇಶ್ ಬಿಂದಾಸ್ ಸ್ಟೆಪ್ಸ್.!
X

ಬೆಂಗಳೂರು : ಕಳೆದ ಸೆ.11ರಂದು ಕೆಸಿಸಿ ಎರಡನೇ ಆವೃತ್ತಿಯ ಟೂರ್ನಮೆಂಟ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಟೀಮ್ ವಿಜಯಬೇರಿ ಭಾರಿಸಿತು.

ಈ ಪಂದ್ಯಾವಳಿಯಲ್ಲಿ ಗೆದ್ದ ಖುಷಿಗಾಗಿ, ಪಂದ್ಯವಾಳಿಯಲ್ಲಿ ಕಳೆದ ಕ್ಷಣಗಳಿಗಾಗಿ, ನಾಗವಾರದ ಡಾ.ಶಿವರಾಜ್‌ ಕುಮಾರ್‌ ನಿವಾಸದಲ್ಲಿ ಪಾರ್ಟಿ ಆಯೋಜಿಸಲಾಗಿತ್ತು.

ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ಸ್ಯಾಂಡಲ್‌ವುಡ್‌ ನಟರು, ಸಖತ್‌ ಖುಷಿಯಾಗಿ ಹಾಡುಗಳಿಗೆ ಸ್ಟೆಪ್‌ ಹಾಕಿದರು.

ಒಂದೇ ವೇದಿಕೆಯಲ್ಲಿ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್‌ ಯಶ್‌, ಶಿವರಾಜ್‌ ಕುಮಾರ್‌ ಮತ್ತು ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಖತ್‌ ಸ್ಟೆಪ್‌ ಹಾಕಿದರು.

ರಾಜಾಧಿರಾಜ, ರಾಜಮಾರ್ಥಂಡ ಹಾಡಿಗೆ ವೇದಿಕೆ ಏರಿದ ನಾಲ್ವರು ಸ್ಟಾರ್ ನಟರು, ಜೊತೆ ಜೊತೆಯಾಗಿ ಕೈಹಿಡಿದು ನೃತ್ಯ ಮಾಡಿದ್ದು ಗಮನ ಸೆಳೆಯಿತು.

https://www.facebook.com/tv5kannadatv/videos/460963974414016/

ಸ್ಯಾಂಡಲ್‌ವುಡ್‌ ನಟರ ನೃತ್ಯ ಕಂಡ ನೆರೆದಿದ್ದ ಅನೇಕರು ಕೇಕೆ ಹಾಕುತ್ತಾ ನೃತ್ಯ ನೋಡಿ ಸಂಭ್ರಮಿಸಿದರು.

ಅದರಲ್ಲೂ ಪುನಿತ್‌ ರಾಜ್‌ ಕುಮಾರ್‌ ನಟನೆಯ ಅಂಜನೀಪುತ್ರ ಚಿತ್ರದ ಬಾರಿ ಖುಷಿ ಮರ್ರೆ ನನ್ನ ಹೆಂಡ್ತಿ ಕಂಡ್ರೇ, ಒಂದು ಚೂರು ಬೈಯೋದಿಲ್ಲ ರಾತ್ರಿ ಕುಡಿದುಕೊಂಡು ಬಂದ್ರೇ ಎಂಬ ಮೂಸಿಕಲ್‌ ಬೀಡ್‌ಗೆ ಹುಚ್ಚೆದ್ದು ಕುಣಿದು ಸಂಭ್ರಮಿಸಿದರು.

ರಾಕ್‌ ಲೈನ್‌ ವೆಂಕಟೇಂಶ್‌ ಕೂಡ ಹಿಂದಿ ಚಿತ್ರದ ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆ, ನೃತ್ಯದ ವೇದಿಕೆಗೆ ತೆರಳಿದ ರಾಕಿಂಗ್‌ ಸ್ಟಾರ್‌ ಯಶ್‌, ಹಣ ತೂರುವ ಮೂಲಕ ಡ್ಯಾನ್ಸ್‌ಗೆ ಹುರುಪು ತುಂಬಿದರು.

ಇದೇ ಅಲ್ಲದೇ ಪಾರ್ಟಿಯಲ್ಲಿ ವಿವಿಧ ಹಾಡುಗಳಿಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಹೆಜ್ಜೆ ಹಾಕಿದರು.

ಒಟ್ಟಾರೆಯಾಗಿ, ಕೆಸಿಸಿ ಎರಡನೇ ಆವೃತ್ತಿಯ ಟೂರ್ನಮೆಂಟ್ ನಲ್ಲಿ ಧಣಿದಿದ್ದ ಧಣಿವನ್ನು, ಕ್ಷಣಕಾಲ ಮರೆತು, ಖುಷಿಯೊಂದಿಗೆ ಸಂಭ್ರಮಿಸಿತು.

Next Story

RELATED STORIES