ಆಂಧ್ರಪ್ರದೇಶದಲ್ಲಿ ನಕ್ಸಲರ ಅಟ್ಟಹಾಸ : ಟಿಡಿಪಿ ಹಾಲಿ, ಮಾಜಿ ಶಾಸಕರ ಹತ್ಯೆ.!

ಆಂಧ್ರಪ್ರದೇಶದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಕೆಂಪು ಉಗ್ರರ ರಕ್ತದಾಹಕ್ಕೆ ಆಡಳಿತರೂಢ ಟಿಡಿಪಿ ಶಾಸಕ ಮತ್ತು ಮಾಜಿ ಶಾಸಕ ಬಲಿಯಾಗಿದ್ದಾರೆ. ಈ ಕೃತ್ಯದಿಂದ ಇಡೀ ಆಂಧ್ರವೇ ಬೆಚ್ಚಿಬಿದ್ದಿದೆ.
ಹೌದು...ಕೆಂಪು ಉಗ್ರರ ಅಟ್ಟಹಾಸಕ್ಕೆ ಟಿಡಿಪಿಯ ಅರಕು ಕ್ಷೇತ್ರದ ಶಾಸಕ ಕಿದಾರಿ ಸರ್ವೇಶ್ವರರಾವ್ ಮತ್ತು ಮಾಜಿ ಶಾಸಕ ಎಸ್.ಸೋಮ ಬಲಿಯಾಗಿದ್ದಾರೆ.
ಇಂದು ಮಧ್ಯಾಹ್ನ ದುಂಬರಿಗುಂಡ ಮಂಡಲದ ಬಳಿ ಗುಂಡಿಕ್ಕಿದ್ದಾರೆ. ಮಾವೋವಾದಿಗಳು ಸಿಪಿಐ ಮಾವೋಯಿಸ್ಟ್ ಫಾರ್ಮೇಷನ್ ದಿನ ಆಚರಿಸುತ್ತಿದ್ದು, ಇದರ ಅಂಗವಾಗಿ ಸೆಪ್ಟೆಂಬರ್ 27ರವರೆಗೆ ಒಂದು ವಾರ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಮುಖ ರಾಜಕೀಯ ನಾಯಕರ ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಜನತೆಯಲ್ಲಿ ಭೀತಿ ಹುಟ್ಟಿಸಿದ್ದಾರೆ.
ಮಹಿಳೆಯರೂ ಇದ್ದ ಸುಮಾರು 60 ನಕ್ಸಲರ ಗುಂಪು ದಾಳಿಯಲ್ಲಿ ಪಾಲ್ಗೊಂಡಿದೆ ಎಂದು ತಿಳಿದುಬಂದಿದೆ. ಶಾಸಕ ಸರ್ವೇಶ್ವರ ರಾವ್ ಮತ್ತು ಮಾಜಿ ಶಾಸಕ ಸೋಮ ಅವರು ದುಂಬರಿಗುಂಡದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ನಕ್ಸಲರು ಗುಂಡಿಕ್ಕಿದ್ದಾರೆ.
ಆದ್ರೆ, ಇವರು ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಕಿದಾರಿ ಸರ್ವೇಶ್ವರ ರಾವ್ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪವೂ ಇತ್ತು. ಬಾಕ್ಸೈಟ್ ಗಣಿಗಾರಿಕೆ ನಡೆಸದಂತೆ ಈ ಹಿಂದೆ ಹಲವು ಬಾರಿ ನಕ್ಸಲರು ಎಚ್ಚರಿಕೆ ನೀಡಿದ್ದರು ಎಂದ ತಿಳಿದುಬಂದಿದೆ.
ದುಂಬರಿಗಂಡದಿಂದ ಪಕ್ಷದ ಕಾರ್ಯಕ್ರಮ ಮುಗಿಸಿಕೊಂಡು ಮರಳುತ್ತಿದ್ದಾಗ ತುತಂಗಿ ಎಂಬಲ್ಲಿ ಮುಖಂಡರ ಕಾರು ತಡೆದಿರುವ ನಕ್ಸಲರ ತಂಡ, ತೀರ ಹತ್ತಿರದಿಂದಲೇ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದೆ. ಇದಕ್ಕೂ ಮೊದಲು ಮಹಿಳಾ ಮಾವೋವಾದಿಗಳು ಹಾಗೂ ಟಿಡಿಪಿ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗುತ್ತಿದೆ.
ತಕ್ಷಣವೇ ಗಣಿಗಾರಿಕೆ ನಿಲ್ಲಿಸುವಂತೆ ಮಾವೋವಾದಿ ನಾಯಕರು ಶಾಸಕ ಸರ್ವೇಶ್ವರ್ ರಾವ್ಗೆ ಎಚ್ಚರಿಸಿದರು. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಹತ್ತಿರದಿಂದಲೇ ಬಂದೂಕಿನಿಂದ ಗುಂಡು ಹಾರಿಸಿರುವುದರಿಂದ ಇಬ್ಬರ ದೇಹಗಳು ಜರ್ಜರಿತಗೊಂಡಿದ್ದವು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಹಿಳಾ ಮಾವೋವಾದಿಗಳು ಶಾಸಕ, ಮಾಜಿ ಶಾಸಕನ ಮೇಲೆ ಗುಂಡು ಹಾರಿಸಿದ್ದು, ಆಂಧ್ರ- ಒಡಿಶಾ ಗಡಿ ಭಾಗದಲ್ಲಿದ್ದ ತಂಡ ಇದಾಗಿದೆ ಎಂದು ಹೇಳಲಾಗುತ್ತಿದೆ.
ಬುಡಕಟ್ಟು ಸಮುದಾಯಕ್ಕೆ ಮೀಸಲಾಗಿದ್ದ ಅರಕು ಕಣಿವೆ ವಿಧಾನಸಭೆ ಕ್ಷೇತ್ರದಿಂದ 2014ರಲ್ಲಿ ಶಿವಾರಿ ಸೋಮಾ ಎಂಬುವವರ ವಿರುದ್ಧ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದ ಸರ್ವೇಶ್ವರ ರಾವ್, 2016ರಲ್ಲಿ ಪಕ್ಷ ನಿಷ್ಠೆ ಬದಲಿಸಿ ಟಿಡಿಪಿ ಸೇರಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದರು.
ಸರ್ವೇಶ್ವರ ರಾವ್ ನಕ್ಸಲರ ಹಿಟ್ ಲಿಸ್ಟ್ನಲ್ಲಿದ್ದರು. ಇದಕ್ಕೂ ಹಿಂದೆ, ಅರಕು ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಬಾಕ್ಸೈಟ್ ಗಣಿಗಾರಿಕೆ ವಿರುದ್ಧ ಸಿಡಿದಿದ್ದ ನಕ್ಸಲರು ಟಿಡಿಪಿ ಮುಖಂಡ ಎಂ.ಬಾಲಯ್ಯ, ಎಂ.ಮಹೇಶ್ ಮತ್ತು ವಿ.ಬಾಲಯ್ಯ ಅವರನ್ನು ಅಪಹರಿಸಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು.
- ak-47 Andhra Pradesh Andhra-Odisha Border Committee Araku sitting MLA Kidari Sarveswara Rao breaking news CPI (Maoists) Dambriguda mandal former MLA Siveri Soma grama darsini kannada news kannada news today karnataka news today latest karnataka news Member of Legislative Assembly (MLA) MLA Kidari Sarveswara Rao TDP Telugu Desam Party Telugu Desam Party (TDP) topnews tv5 kannada tv5 kannada live tv5 live tv5kannada news Visakhapatnam Visakhapatnam district