Top

ಮಾರುತಿಗೌಡ ಮೇಲಿನ ಹಲ್ಲೆ : ದುನಿಯಾ ವಿಜಿ ಅಂಡ್‌ ಟೀಂಗೆ 14 ದಿನ ನ್ಯಾಯಂಗ ಬಂಧನ

ಮಾರುತಿಗೌಡ ಮೇಲಿನ ಹಲ್ಲೆ : ದುನಿಯಾ ವಿಜಿ ಅಂಡ್‌ ಟೀಂಗೆ 14 ದಿನ ನ್ಯಾಯಂಗ ಬಂಧನ
X

ಬೆಂಗಳೂರು : ಸಣ್ಣ ಕಿರಿಕ್‌ಗೆ ತಲೆಕೆಡಿಸಿಕೊಂಡು ಹಲ್ಲೆ ನಡೆಸಿ ಕಿಡ್ನ್ಯಾಪ್ ಮಾಡಿರುವ ದುನಿಯಾ ವಿಜಿ ಈಗ ಪೊಲೀಸರ ಅತಿಥಿದ್ದರು. ಈ ಸಂಬಂಧ ದುನಿಯಾ ವಿಜಿ ವಿರುದ್ಧ 365 ಕಿಡ್ನ್ಯಾಪ್, 325 ಹಲ್ಲೆ ಮತ್ತು ಬೆದರಿಕೆ ಪ್ರಕರಣವನ್ನು ಹೈಗ್ರೌಂಡ್ ಪೊಲೀಸರು ದಾಖಲಿಸಿದ್ದರು.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ್‌ ಬಾಬು ಎದುರು ಪೊಲೀಸರು ಹಾಜರು ಪಡಿಸಿದರು.

ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದರಾದ ಮಹೇಶ್‌ ಬಾಬು ನಟ ದುನಿಯಾ ವಿಜಯ್ ಮತ್ತು ಟೀಂಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಆದೇಶಿಸಿ ತೀರ್ಪು ನೀಡಿದರು.

ಹೀಗಾಗಿ ನಟ ದುನಿಯಾ ವಿಜಯ್ ಅಂಡ್‌ ಟೀಂ ಅವರನ್ನು ನ್ಯಾಯಾಧೀಶರ ಮನೆಯಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲೂಟ ಮುರಿಯುವಂತಾಗಿದೆ.

ಅಂದಹಾಗೇ, ಈ ಪ್ರಕರಣ ಸಂಬಂಧ ನಾಳೆ, ದುನಿಯಾ ವಿಜಯ್ ಪರ ವಕೀರಲರಿಂದ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಆದರೇ ಪ್ರಕರಣ ಸಂಬಂಧ ಜಾಮೀನು ವಿಳಂಬ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅಲ್ಲದೇ ಸದ್ಯಕ್ಕೆ ಜಾಮೀನು ದೊರೆಯುವುದು ಅನುಮಾನವಿದೆ ಎನ್ನಲಾಗಿದೆ. ಆದರೇ ಮಧ್ಯಂತರ ಜಾಮೀನಿಗೆ ಮನವಿ ಮಾಡುವ ಸಂಭವ ಇದೆ ಎನ್ನಲಾಗಿದೆ.

ಜೊತೆಗೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶವನ್ನು ಸರ್ಕಾರಿ ಅಭಿಯೋಜಕರು ಮನವಿ ಮಾಡುವ ಸಂಭವ ಇದೆ ಎನ್ನಲಾಗಿದೆ.

ಒಟ್ಟಾರೆ ಮಾರುತಿಗೌಡ ಮೇಲಿನ ಹಲ್ಲೆಯ ಸಂಬಂಧ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟನ ಜಾಮೀನೋ, ಜೈಲೋ ಎಂಬುದು ನಾಳೆ ಗೊತ್ತಾಗಲಿದೆ.

Next Story

RELATED STORIES