Top

ಯಜಮಾನ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್

ಯಜಮಾನ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್
X

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಯಜಮಾನ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.

ಯಜಮಾನ ಸಿನಿಮಾ ಸೆಟ್ಟೇರಿದ ದಿನದಿಂದ ಯಾವುದೇ ಪೋಸ್ಟರ್ ಅಥವಾ ವೀಡಿಯೋ ಟೀಸರ್ ಅಫೀಷಿಯಲ್ಲಾಗಿ ರಿಲೀಸ್ ಆಗಿರಲಿಲ್ಲ. ಹಾಗಾಗಿ ಈ ಮೋಷನ್ ಪೋಸ್ಟರ್ ಮೇಲೆ ಭಾರೀ ನಿರೀಕ್ಷೆ ಇತ್ತು. ಭರ್ಜರಿ ಬಿಜಿಎಂ ಹಿನ್ನೆಲೆಯಲ್ಲಿ ಪಕ್ಕಾ ಮಾಸ್​ ಲುಕ್​ನಲ್ಲಿ ಯಜಮಾನನ ಖದರ್​ ನೋಡಿ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಮೋಷನ್ ಪೋಸ್ಟರ್ ಸಾವಿರಾರು ವೀವ್ಸ್ ಸಾಧಿಸಿ ಸೌಂಡ್ ಮಾಡ್ತಿದೆ. ಭೂಮಿ ತೂಕದ ಆನೆ, ಬೆಳೆದ ತನ್ನಿಂದ ತಾನೆ, ಕೂಗಿ ಹೇಳಿತು ಜಮಾನ, ಅಭಿಮಾನಿಗಳ ಸುಲ್ತಾನ ಅನ್ನೋ ಸಾಲುಗಳ ಜೊತೆಗೆ ಚಾಲೆಂಜಿಂಗ್ ಸ್ಟಾರ್ ಯಜಮಾನ ಲುಕ್​ ರಿವೀಲ್ ಮಾಡಿದೆ ಚಿತ್ರತಂಡ.

ರಾಮ, ಭೀಮ, ದಾಸ, ಕರಿಯ ಬಂದೋ ನೋಡೋ ಯಜಮಾನ ಅಂತ ಅಭಿಮಾನಿಗಳು ಮೋಷನ್ ಪೋಸ್ಟರ್ ನೋಡಿ ಎಂಜಾಯ್ ಮಾಡ್ತಿದ್ದಾರೆ. ಯಜಮಾನ ದಚ್ಚು 50ನೇ ಸಿನಿಮಾ ಆಗುತ್ತೋ 52ನೇ ಸಿನಿಮಾ ಅನ್ನಿಸಿಕೊಳ್ಳುತ್ತೋ ಕಾದು ನೋಡ್ಬೇಕು.

https://youtu.be/G5CZdB3Oc1w

ಪಿ. ಕುಮಾರ್ ನಿರ್ದೇಶನದ ಯಜಮಾನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಯಜಮಾನನ ದರ್ಬಾರ್​ಗೆ ದಿನಗಣನೆ ಶುರುವಾಗಿದೆ.

ಮೀಡಿಯಾ ಹೌಸ್ ಸ್ಟುಡಿಯೋ ಬ್ಯಾನರ್​ನಲ್ಲಿ ಶೈಲಜಾ ನಾಗ್ ಮತ್ತು ಬಿ. ಸುರೇಶ ನಿರ್ಮಾಣದ ಯಜಮಾನ ಚಿತ್ರಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ.

ಸದ್ಯ ಮೋಷನ್​ ಪೋಸ್ಟರ್ ರಿಲೀಸ್ ಮಾಡಿರೋ ಯಜಮಾನ ಟೀಮ್ ಶೀಘ್ರದಲ್ಲೇ ಟೀಸರ್ ಮತ್ತು ಆಡಿಯೋ ಲಾಂಚ್​ಗೆ ಪ್ಲಾನ್ ಮಾಡ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಡಿಸೆಂಬರ್​ನಲ್ಲಿ ತೆರೆಮೇಲೆ ಯಜಮಾನನ ಕಾರುಬಾರು ಶುರುವಾಗಲಿದೆ.

Next Story

RELATED STORIES