Top

ಹೈಕಮಾಂಡ್‌ನಿಂದ ಕಾಂಗ್ರೆಸ್ ಅತೃಪ್ತ ಶಾಸಕರ ಮನವೊಲಿಕೆ.!

ಹೈಕಮಾಂಡ್‌ನಿಂದ ಕಾಂಗ್ರೆಸ್ ಅತೃಪ್ತ ಶಾಸಕರ ಮನವೊಲಿಕೆ.!
X

ಬಿಜೆಪಿಯ ಆಪರೇಶನ್ ಕಮಲದ ಸುಳಿಯಲ್ಲಿ ಸಿಲುಕಿರುವ ದೋಸ್ತಿ ಸರ್ಕಾರವನ್ನು ಬಚಾವ್ ಮಾಡುವ ಕಸರತ್ತು ಮುಂದುವರೆದಿದೆ. ರಾಜಕೀಯ ಕಣ್ಣಾಮುಚ್ಚಾಲೆ ಆಟ ನಡೆಸಿರುವ ಬಿಜೆಪಿಯಿಂದ ತಮ್ಮ ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಅಖಾಡಕ್ಕಿಳಿದಿದ್ದಾರೆ.

ನಿನ್ನೆ ಕಾಂಗ್ರೆಸ್ ನ ಶಾಸಕರು ಮುಂಬೈ ರೆಸಾರ್ಟ್ ಗೆ ಶಿಫ್ಟ್ ಆಗ್ತಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ನಿನ್ನೆ ಚೆನ್ನೈ ಮೂಲಕ ಮುಂಬೈ ಗೆ ಪ್ರಯಾಣ ಬೆಳೆಸಿದ್ದ ಶಾಸಕರಾದ ಎಂ.ಟಿ.ಬಿ ನಾಗರಾಜ್, ಸುಧಾಕರ್ ಹಾಗೂ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಶಾಸಕ ನಾಗೇಶ್ ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಾಸಾಗಿದ್ದಾರೆ.

ಚೆನ್ನೈ ನತ್ತ ಪ್ರಯಾಣ ಬೆಳೆಸಿದ್ದಾರೆಂಬ ಸುದ್ದಿ ತಿಳಿದ ಮಾಜಿ ಸಿಎಂ ಸಿದ್ದರಾಮಯ್ಯ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಇಂದು ಸ್ವತಃ ಅತೃಪ್ತ ಶಾಸಕರನ್ನು ಸಂಪರ್ಕಿಸಿ ಮನವೊಲಿಸುವಲ್ಲಿ ಸಿದ್ದರಾಮಯ್ಯ ತಾತ್ಕಾಲಿಕ ಯಶಸ್ಸು ಕಂಡಿದ್ದಾರೆ.

ಶಾಸಕ ಸುಧಾಕರ್ ರನ್ನು ಮನೆಗೆ ಕರೆಸಿಕೊಂಡು ಮಾತನಾಡಿದ ಸಿದ್ದರಾಮಯ್ಯ ಸುಧಾಕರ್ ರಿಗೆ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ನಿಮ್ಮ ಬಗ್ಗೆಯೇ ನಿನ್ನೆ ಎಲ್ಲಾ ಚಾನಲ್ ಗಳಲ್ಲಿ ಸುದ್ದಿ ಪ್ರಕಟ ಆಗಿದೆ. ಮಾದ್ಯಮಗಳಲ್ಲಿ ನೆಗೆಟಿವ್ ಆಗಿ ಸುದ್ದಿ ಆದರೆ ನಿನಗೆ ಏನು ಲಾಭ. ನಿಮಗೇನೇ ಸಮಸ್ಯೆ ಆದರೂ ನನ್ನ ಬಳಿ ಹೇಳಿ ಎಂದು ಸಿದ್ದರಾಮಯ್ಯ ಶಾಸಕ ಸುಧಾಕರ್ ರಿಗೆ ಸಮಾದಾನ ಹೇಳಿದರು ಎನ್ನಲಾಗದೆ.

ಸರ್ಕಾರ ಉಳಿಸುವ ಜವಾಬ್ದಾರಿ ನನ್ನಮೇಲೂ ಇದೆ. ನೀವು ಹೀಗೆ ಮಾಡಿದರೆ ಹೈಕಮಾಂಡ್ ನನ್ನ ಬಗ್ಗೆ ಏನು ತಿಳಿದುಕೊಳ್ಳಬೇಕು? ಎಂದು ಸಿದ್ದರಾಮಯ್ಯ ಸುಧಾಕರ್ ರಿಗೆ ತರಾಟೆ ತೆಗೆದುಕೊಂಡರೆಂದು ತಿಳಿದುಬಂದಿದೆ.

ಅಲ್ಲದೇ ಬೆಳಿಗ್ಗೆ ಸುಧಾಕರ್ ಮನೆಗೆ ಭೇಟಿ ನೀಡಿದ ಸಚಿವ ಜಮೀರ್ ಅಹ್ಮದ್ ಕೂಡಾ ಸುಧಾಕರ್ ಜೊತೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದರು. ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸುಧಾಕರ್, ನಾನು ಮೊದಲಿನಿಂದಲೂ ಕಾಂಗ್ರೆಸ್ ನಲ್ಲೇ ಇದ್ದೇನೆ.

ಅಧಿಕಾರಕ್ಕೋಸ್ಕರ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ನಾನು ಬ್ಲಾಕ್ ಮೇಲ್ ಮಾಡ್ತಿಲ್ಲ. ನನಗೆ ಇದೆಲ್ಲಾ ಗೊತ್ತಿಲ್ಲ. ನನಗೆಗೊತ್ತಿರೋದು ಈ-ಮೇಲ್ ಮಾತ್ರ ಎಂದ್ರು. ಸಚಿವ ಜಮೀರ್ ಕೂಡಾ ಸುಧಾಕರ್ ದೇವಸ್ಥಾನಕ್ಕೆ ಹೋಗಿದ್ರು. ಅವರು ಪಕ್ಷ ಬಿಡಲ್ಲ ಅಂತ ಹೇಳಿದ್ರು

ಇನ್ನು ಇತ್ತ ಸಚಿವ ಡಿ.ಕೆ ಶಿವಕುಮಾರ್, ಕೃಷ್ಣಭೈರೇಗೌಡ ಇನ್ನೊಬ್ಬ ಅತೃಪ್ತ ಶಾಸಕ ಎಂ.ಟಿ.ಬಿ ನಾಗರಾಜ್ ಬೇಟಿಯಾಗಿ ಮನವೊಲಿಸು ಪ್ರಯತ್ನ ಮಾಡಿದರು. ದುಡುಕಬೇಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ಸಚಿವ ಡಿಕೆಶಿ ಎಂ.ಟಿ.ಬಿ ನಾಗರಾಜ್ ರಿಗೆ ಭರವಸೆ ನೀಡಿದರು ಎನ್ನಲಾಗಿದೆ.

ಅದರೆ ನಾಗರಾಜ್ ಡಿಕೆಶಿ ಮನವೊಲಿಕೆಗೆ ಬಗ್ಗಲಿಲ್ಲ. ಹೀಗಾಗಿ ಎಂ.ಟಿ.ಬಿ ನಾಗರಾಜ್ ರನ್ನು ವೇಣುಗೋಪಾಲ್ ಬಳಿಯೇ ಕರೆದುಕೊಂಡು ಬಂದ ಡಿಕೆಶಿ ಮಹತ್ವದ ಚರ್ಚೆ ನಡೆಸಿದರು. ವೇಣುಗೋಪಾಲ್ ಕೂಡಾ ಎಂ.ಟಿ.ಬಿ ಮನವೊಲಿಸುವಲ್ಲಿ ತಾತ್ಕಾಲಿಕ ಯಶ ಕಂಡಿದ್ದಾರೆ ಎನ್ನಲಾಗಿದೆ

ಇನ್ನು ಲೋಕಸಭೆ ಚುನಾವಣೆ ತಯಾರಿ ಕುರಿತು ಇಂದು ಕರೆದಿದ್ದ ಕಾಂಗ್ರೆಸ್ ಮುಖಂಡರ ಸಭೆಯಲ್ಲೂ ಆಪರೇಶನ್ ಕಮಲ, ಕಾಂಗ್ರೆಸ್ ಶಾಸಕರ ರೆಸಾರ್ಟ್ ಯಾತ್ರೆ ವಿಚಾರ ಚರ್ಚೆ ಆಯ್ತು ಎನ್ನಲಾಗಿದೆ.

ಅತೃಪ್ತ ಶಾಸಕರ ನಡವಳಿಕೆಗೆ ಕಿಡಿಕಾರಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಬಿಜೆಪಿ ಮೈತ್ರಿ ಸರ್ಕಾರ ಬೀಳಿಸುವ ಕೆಟ್ಟ ಕೆಲಸ ಮಾಡ್ತಿದೆ. ಇದನ್ನು ಅರಿತು ಶಾಸಕರು ಸಮಯೋಚಿತ ವರ್ತನೆ ತೋರಬೇಕು. ಇಲ್ಲದಿದ್ದರೆ ಪಕ್ಷ ಸಹಿಸೋದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಒಟ್ಟಾರೆ ಕಾಂಗ್ರೆಸ್ ರಕ್ಷಣಾತ್ಮಕ ತಂತ್ರದಿಂದ ಬಿಜೆಪಿಗೆ ಕೊಂಚ ಹಿನ್ನಡೆಯಾದಂತಾಗಿದೆ. ಇನ್ನು ಮತ್ಯಾವ ಹೈಡ್ರಾಮಾಗಳಿಗೆ ರಾಜ್ಯ ರಾಜಕೀಯ ವೇದಿಕೆ ಆಗುತ್ತೋ ನೋಡಬೇಕು.

Next Story

RELATED STORIES