Top

TV5 ಕನ್ನಡ ಪ್ರೆಸೆಂಟ್ಸ್​ನಲ್ಲಿ ಕನ್ನಡದ ‘RX100’

TV5 ಕನ್ನಡ ಪ್ರೆಸೆಂಟ್ಸ್​ನಲ್ಲಿ ಕನ್ನಡದ ‘RX100’
X

ಅರ್ಜುನ್ ರೆಡ್ಡಿ ನಂತ್ರ ಟಾಲಿವುಡ್ ಅಂಗಳದಲ್ಲಿ ಸೆನ್ಸೇಷನ್ ಹುಟ್ಟಿಸಿದಂತ ಆರ್​ಎಕ್ಸ್​100, ಇದೀಗ ಸ್ಯಾಂಡಲ್​ವುಡ್​ಗೆ ಲಗ್ಗೆ ಇಡ್ತಿದೆ. ಲೋ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಇಷ್ಟಕ್ಕೂ ಈ ಸಿನಿಮಾನ ಕನ್ನಡಕ್ಕೆ ತರ್ತಿರೋದು ಯಾರು..? ನಾಯಕನಟ ಯಾರು ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿ ಮುಂದೆ ಓದಿ..

ಗಾಂಧಿನಗರದತ್ತ ಬರ್ತಿದೆ ಟಾಲಿವುಡ್​ RX100

ಕನ್ನಡ ರಿಮೇಕ್ ರೈಟ್ಸ್ ಖರೀದಿಸಿದ್ಯಾರು ಗೊತ್ತಾ..?

ತೆಲುಗು ಚಿತ್ರರಂಗದಲ್ಲಿ ವಿಜಯ್ ದೇವರಕೊಂಡ ನಟನೆಯ ಅರ್ಜುನ್ ರೆಡ್ಡಿ ಸಿನಿಮಾದ ನಂತ್ರ, ಆ ರೇಂಜ್​ಗೆ ಸಂಚಲನ ಸೃಷ್ಟಿಸಿದ ಮತ್ತೊಂದು ಅಂತಹದ್ದೇ ಟ್ರೆಂಡ್ ಸೆಟ್ ಸಿನಿಮಾ ಅಂದ್ರೆ ಅದು ಆರ್​ಎಕ್ಸ್​100. ಹೊಸ ಪ್ರತಿಭೆಗಳೇ ಕೂಡಿ ಮಾಡಿದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲೂ ಸಹ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡಿತ್ತು.

ಕಾರ್ತಿಕೇಯ ಗುಮ್ಮಕೊಂಡ ಮತ್ತು ಪಾಯಲ್ ರಜಪೂತ್ ಜೋಡಿ ಅಕ್ಷರಶಃ ಸಿನಿಪ್ರಿಯರನ್ನ ಮೋಡಿ ಮಾಡಿತ್ತು. ಅಜಯ್ ಭೂಪತಿ ಸಿನಿಮಾನ ಪ್ರೆಸೆಂಟ್ ಮಾಡಿದ ಪರಿಗೆ ಯೂತ್ಸ್​ ಹುಚ್ಚೆದ್ದು ಕುಣಿದಿದ್ದರು. ಅಷ್ಟರ ಮಟ್ಟಿಗೆ ಚಿತ್ರದ ಸ್ಟೋರಿಲೈನ್ ಹಾಗೂ ನಾಯಕ-ನಾಯಕಿ ನಡುವಿನ ಪ್ರೀತಿ-ಪ್ರೇಮ-ಪ್ರಣಯದ ಕಥೆ ಎಲ್ಲರ ದಿಲ್ ಗೆದ್ದಿತ್ತು. ಇಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಇದೀಗ ಕನ್ನಡದಲ್ಲೂ ತಯಾರಾಗಲಿದೆ.

ಟಿವಿ5 ಸಾರಥ್ಯದಲ್ಲಿ ಕನ್ನಡದ ‘RX100’

ಹೈಝೆನ್ ಪ್ರೊಡಕ್ಷನ್ಸ್ ತೆಕ್ಕೆಯಲ್ಲಿ ರಿಮೇಕ್ ರೈಟ್ಸ್

ಯೆಸ್... ತೆಲುಗು ಚಿತ್ರರಂಗದಲ್ಲಿ 40ಕ್ಕೂ ಅಧಿಕ ಸಿನಿಮಾಗಳನ್ನ ನಿರ್ಮಾಣ ಮಾಡಿರೋ ಡಿಎಸ್ ರಾವ್, ಆರ್​ಎಕ್ಸ್​100 ಸಿನಿಮಾದ ಕನ್ನಡ ರಿಮೇಕ್ ರೈಟ್ಸ್ ಖರೀದಿಸಿದ್ದಾರೆ. ಈಗಾಗ್ಲೇ ದೊಡ್ಡ ನಿರ್ಮಾಣ ಸಂಸ್ಥೆ ಮೂಲಕ ನಿತಿನ್ ಜೊತೆ ದ್ರೋಣ, ನಾನಿ ಜೊತೆ ಪಿಲ್ಲಾ ಜಮೀನ್ದಾರ್ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿರೋ ಡಿಎಸ್ ರಾವ್, ಹೈಝೆನ್ ಪ್ರೊಡಕ್ಷನ್ಸ್ ಬ್ಯಾನರ್​ನಡಿ ಈ ಸಿನಿಮಾ ಹಕ್ಕುಗಳನ್ನ ಬೃಹತ್ ಮೊತ್ತಕ್ಕೆ ಖರೀದಿಸಿದ್ದಾರೆ. ಅಂದಹಾಗೆ ಈ ಸಿನಿಮಾನ ನಮ್ಮ TV5 ಕನ್ನಡ ಪ್ರೆಸೆಂಟ್ ಮಾಡ್ತಿದ್ದು, ಈ ಸಿನಿಮಾ ಮೂಲಕ TV5 ಕನ್ನಡ ಕೂಡ TV5 ನ್ಯೂಸ್ ರೀತಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಿದೆ.

ಒಂದೂವರೆ ಕೋಟಿ ಲೋ ಬಜೆಟ್​ನಲ್ಲಿ ತಯಾರಾದ ಆರ್​ಎಕ್ಸ್​100 ಮೂಲ ಸಿನಿಮಾ ಟಾಲಿವುಡ್ ಬಾಕ್ಸಾಫೀಸ್​ನಲ್ಲಿ ಬರೋಬ್ಬರಿ 31ಕೋಟಿ ಪೈಸಾ ವಸೂಲ್ ಮಾಡಿತ್ತು. ನೈಜ ಘಟನೆ ಆಧಾರಿತ ಈ ಸಿನಿಮಾ ನೋಡಿ, ಟಾಲಿವುಡ್ ಅಷ್ಟೇ ಅಲ್ಲ, ಸೌತ್ ಸಿನಿದುನಿಯಾ ಕೂಡ ಥ್ರಿಲ್ ಆಗಿತ್ತು. ಸಿನಿಮಾ ಹಿಟ್ ಆಗ್ತಿದ್ದಂತೆ ಅದ್ರ ರಿಮೇಕ್ ರೈಟ್ಸ್​ಗೆ ನಾಮುಂದು ತಾಮುಂದು ಅಂತ ಪ್ರತಿಷ್ಠಿತ ಸಂಸ್ಥೆಗಳು ಮುಗಿಬಿದ್ದಿದ್ದವು. ಆದ್ರೀಗ ಅದು ಹೈಝೆನ್ ಪ್ರೊಡಕ್ಷನ್ಸ್ ಪಾಲಾಗಿದೆ.

ಡಿಎಸ್ ರಾವ್ ನಿರ್ಮಾಣ ಸಾರಥ್ಯದಲ್ಲಿ ತಯಾರಾಗಲಿರೋ ಆರ್​ಎಕ್ಸ್100 ಸಿನಿಮಾಗೆ ಕನ್ನಡದಲ್ಲಿ ಯಾರು ಌಕ್ಷನ್ ಕಟ್ ಹೇಳ್ತಾರೆ..? ನಾಯಕನಟ ಯಾರು..? ಟೆಕ್ನಿಷಿಯನ್ಸ್ ಯಾರು ಅನ್ನೋದನ್ನ ಖುದ್ದು ಅವರೇ ಸದ್ಯದಲ್ಲೇ ಅಫಿಶಿಯಲ್ ಆಗಿ ಅನೌನ್ಸ್ ಮಾಡಲಿದ್ದಾರೆ. ಇನ್ನು ಸಿಕ್ಸ್ ಪ್ಯಾಕ್ ಹೀರೋ ಪಾತ್ರಕ್ಕೆ ಯಾವ ಸ್ಟಾರ್ ಫೈನಲ್ ಆಗ್ತಾರೆ ಅನ್ನೋದು ಗಾಂಧಿನಗರದಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್‌, ಟಿವಿ5

Next Story

RELATED STORIES