Top

ರಿಲೀಸ್​​​ಗೂ ಮೊದಲೇ ಲೀಕ್ ಆಯ್ತು ಕೆಜಿಎಫ್ ಕಥೆ.!

ರಿಲೀಸ್​​​ಗೂ ಮೊದಲೇ ಲೀಕ್ ಆಯ್ತು ಕೆಜಿಎಫ್ ಕಥೆ.!
X

ಬೆಂಗಳೂರು : ಬಹು ನಿರೀಕ್ಷಿತ ರಾಕಿಂಗ್ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಚಿತ್ರದ ಟ್ರೈಲರ್ ಅಕ್ಟೋಬರ್ 14ಕ್ಕೆ ರಿಲೀಸ್ ಆದರೇ, ನವೆಂಬರ್ 16ಕ್ಕೆ ಸಿನಿಮಾ ಪ್ರೇಕ್ಷರನ್ನು ರಂಜಿಸಲು ತೆರೆಗೆ ಬರಲಿದೆ.

ಈ ನಡುವೆ ಕೆಜಿಎಫ್‌ ಚಿತ್ರದ ಕತೆ ರಿಲೀಸ್‌ಗೂ ಮೊದ್ಲೆ ಇದೀಗ ಲೀಕ್‌ ಆಗಿದೆ. ಕೆಜಿಎಫ್​ ಸಿನಿಮಾ ಕಥೆ ಏನು..? ರಾಕಿಂಗ್ ಸ್ಟಾರ್ ಪಾತ್ರ ಏನು..? ಅನ್ನೋದ್ರ ಬಗ್ಗೆ ಇಲ್ಲಿವರೆಗೂ ತಲೆಗೊಂದು ಮಾತಾಡ್ತಿದ್ರು..

ಕೆಲವರು ಇದು ಕೆಜಿಎಫ್​ ರೌಡಿ ಒಬ್ಬನ ಲೈಫ್​​ ಸ್ಟೋರಿ ಅಂತಿದ್ರು.. ಮತ್ತೆ ಕೆಲವರು ಚಿನ್ನದ ಗಣಿ ಕಾರ್ಮಿಕರ ನಾಯಕನ ಕಥೆ ಅಂತಿದ್ರು.

ಆದರೇ, ಫೈನಲಿ ಕೆಜಿಎಫ್​​ ಸ್ಟೋರಿಲೈನ್​ ಏನು ಅನ್ನೋದನ್ನ ಡೈರೆಕ್ಟರ್ ಪ್ರಶಾಂತ್ ನೀಲ್ ರಿವೀಲ್ ಮಾಡಿದ್ದಾರೆ.. ಇದು ಕಾರ್ಮಿಕ ನಾಯಕನ ಕಥೆಯಲ್ಲ.. ಕೆಜಿಎಫ್​ ರೌಡಿ ಕಥೆಯೂ ಅಲ್ಲ ಎಂದಿದ್ದಾರೆ.

1978ರಲ್ಲಿ ಜಾಗತಿಕವಾಗಿ ಅಮೇರಿಕಾ ಮತ್ತು ಸೋವಿಯತ್ ರಷ್ಯಾ ನಡುವೆ ಕೋಲ್ಡ್​ ವಾರ್ ನಡೀತಿತ್ತು.. ಆ ಯುದ್ಧ ಶುರುವಾಗಿದ್ದೇ ಬಂಗಾರಕ್ಕಾಗಿ.. ಆಗ ಬಂಗಾರದ ಬೆಲೆ ಗಗನಕ್ಕೇರಿತ್ತು.

ಈ ಸಂದರ್ಭದಲ್ಲಿ, ಕೋಲಾರದಲ್ಲಿ ಕೊಲೆಗಳು, ಕಾದಾಟಗಳು ನಡೆಯಿತು, ಆ ಘಟನೆಯಲ್ಲಿ ಎಲ್ಲರ ಕಣ್ಣಿಗೆ ಕಂಡ ರಾಕಿ ಯಾರು..? ಅನ್ನೋದ್ರ ಹಿನ್ನೆಲೆಯಲ್ಲಿ ಈ ಕಾಲ್ಪನಿಕ ಕಥೆ ಹೆಣೆದಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.. ರಾಕಿಂಗ್ ಸ್ಟಾರ್ ಯಶ್​​ ಅಂಡರ್​ವರ್ಲ್ಡ್ ಡಾನ್​ ಅವತಾರದಲ್ಲಿ ಕೆಜಿಎಫ್‌ ಚಿತ್ರದಲ್ಲಿ ದರ್ಬಾರ್ ಮಾಡಲಿದ್ದಾರೆ.

ಒಟ್ಟಾರೆಯಾಗಿ, ಕೆಜಿಎಫ್ ಚಿತ್ರದ ಕಥೆ ಏನು ಎಂಬುದನ್ನು, ಸ್ವತಹ ಚಿತ್ರ ನಿರ್ದೇಶ ಪ್ರಶಾಂತ್ ನೀಲ್ ರಿವೀಲ್‌ ಮಾಡಿದ್ದು, ಈ ಮೂಲಕ ರಿಲೀಸ್‌ಗೂ ಮೊದ್ಲೆ ಕೆಜಿಎಫ್ ಚಿತ್ರದ ಕಥೆ ಏನು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

Next Story

RELATED STORIES