Top

ಶಾಸಕರಿಂದ ಅಕ್ರಮ ಮರಳು ದಂಧೆ, ಕಂಗಾಲಾದ ಜನತೆ.!

ಶಾಸಕರಿಂದ ಅಕ್ರಮ ಮರಳು ದಂಧೆ, ಕಂಗಾಲಾದ ಜನತೆ.!
X

ಬಳ್ಳಾರಿ : ಅಕ್ರಮ ಗಣಿಗಾರಿಕೆಗೆ ತನ್ನದೇ ಆದ ಹೆಸರನ್ನು ಮಾಡಿರುವ ಬಿಸಿಲ ನಗರಿ ಬಳ್ಳಾರಿಯ ಮತ್ತೊಂದು ಅಕ್ರಮ ಅದುವೇ ಮರಳು ಗಣಿಗಾರಿಕೆ ಈಗ ಬಳ್ಳಾರಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ಮರಳನ್ನು ತೆಗೆಯಲಾಗುತ್ತೀದೆ.

ಕಂಪ್ಲೀ ತಾಲ್ಲೂಕಿನ ಕಂಪ್ಲೀ ಕುರುಗೋಡು ಸೇರಿದಂತೆ ತುಂಗಭದ್ರಾ ದಡದಲ್ಲಿರುವ ಬಹುತೇಕ ಗ್ರಾಮಗಳಲ್ಲಿ ತುಂಗಭದ್ರೇ ಒಡಲನ್ನು ಬಗೆಯಲಾಗುತ್ತದೆ. ಇದಕ್ಕೆ ಸ್ವತ ಕಂಪ್ಲೀ ಶಾಸಕ ಜೆ.ಎನ್.ಗಣೇಶ ಸಾತ್ ನೀಡಿದ್ದು ಪ್ರತಿ ತಿಂಗಳು ನಾಲ್ಕರಿಂದ ಐದು ಲಕ್ಷ ರೂಪಾಯಿಯಂತೆ ಹಣವನ್ನು ವಸೂಲಿ ಮಾಡಲಾಗುತ್ತದೆ.ಅಂಥಾ ಅನ್ನೋ ಆಡಿಯೋ ಇದೀಗ ವೈರಲ್ ಆಗಿದೆ.

ಮೋದಲಿನಿಂದಲ್ಲೂ ಬಳ್ಳಾರಿ ಅಕ್ರಮ ಗಣಿಗಾರಿಕೆಗೆ ಹೆಸರು ಮಾಡಿದೆ. ಹಲವಾರು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೋಡಗಿರುವವರು ಈ ಹಿಂದೆ ಮೈನಿಂಗ್ ವ್ಯವಹಾರದಲ್ಲಿ ತೋಡಗಿಸಿಕೊಂಡಿದ್ದವರು. ಈ ಹಿಂದೆ ಮೈನಿಂಗ್‍ನಲ್ಲಿ ಮಾಡುತ್ತೀದ್ದ ಗಿಮಿಕ್‍ಗಳನ್ನು ಈಗ ಮರಳು ದಂಧೆಯಲ್ಲಿ ಮಾಡಲಾಗುತ್ತೀದ್ದು ಇಂಥವರ ಬೆನ್ನಿಗೆ ಸ್ವತ ಶಾಸಕರು ನಿಂತಿದ್ದಾರೆ. ಇನ್ನೂ ನದಿಯ ದಡದಲ್ಲಿ ಆಗಾಗ ಗಲಾಟೆಗಳು ಆಗುತ್ತೀದ್ದು ಅಲ್ಲಿ ರೌಡಿಗಳ ಕರಿನೆರಳು ಕಾಣುತ್ತೀದೆ.

ರಾಜ್ಯದಲ್ಲಿ ಮರಳು ಗಣಿಗಾರಿಕೆಯನ್ನು ನಡೆಸಲು ಹಲವಾರು ನಿಯಮಗಳನ್ನು ಸರ್ಕಾರ ರೂಪಿಸಿದೆ. ಆ ನಿಯಮಗಳು ಬಳ್ಳಾರಿಯಲ್ಲಿ ಗಾಳಿಗೆ ತೂರಲಾಗಿದೆ. ಇನ್ನೂ ಶಾಸಕ ಗಣೇಶ ನಡೆಸಿರುವ ಆಡಿಯೋ ತುಣುಕಿನಲ್ಲಿ ದಾವಣಗೇರಿ ಎಸ್ಪಿ ಚೇತನ ಅವರ ಹೆಸರು ತಳಕು ಹಾಕಿಕೊಂಡಿದ್ದು ಈ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲಾಗಿರುವದು ಸ್ಪಷ್ಟವಾಗಿದೆ.

ಹೀಗಾಗಿ ಸರ್ಕಾರ ಕೂಡಲೇ ಈ ಪ್ರಕರಣದ ಬಗ್ಗೆ ಗಮನಹರಿಸಿ ಎಲ್ಲರಿಗೂ ಮರಳು ಸಿಗುವಂತಾಗಿ ಜನಸಾಮಾನ್ಯರ ಹಿತ ಕಾಪಾಡಲಿ ಅನ್ನೋದು ಕಂಪ್ಲೀ ಕ್ಷೇತ್ರದ ಜನತೆಯ ಓಕ್ಕೋರಲವಾದ ಆಗ್ರಹವಾಗಿದೆ.

ವರದಿ : ವೆಂಕಟೇಶ ಕುಲಕರ್ಣಿ, ಟಿವಿ5 ಬಳ್ಳಾರಿ

Next Story

RELATED STORIES