Top

ಹೈಕೋರ್ಟ್‌ ಖಡಕ್‌ ವಾರ್ನಿಂಗ್‌ ಹಿನ್ನಲೆ : ಗುಂಡಿ ಮುಚ್ಚುವ ಕಾರ್ಯ ಜೋರು

ಹೈಕೋರ್ಟ್‌ ಖಡಕ್‌ ವಾರ್ನಿಂಗ್‌ ಹಿನ್ನಲೆ : ಗುಂಡಿ ಮುಚ್ಚುವ ಕಾರ್ಯ ಜೋರು
X

ಬೆಂಗಳೂರು : ಹೈಕೋರ್ಟ್​ ಖಡಕ್​ ವಾರ್ನಿಂಗ್​ನಿಂದ ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸ ಜೋರಾಗಿ ನಡಿತಿದೆ.

ಗುಂಡಿ ಮುಚ್ಚುವ ಕೆಲಸ ನಡೆಯುವ ಪ್ರತಿ ಪ್ರದೇಶಗಳಿಗೆ ಮೇಯರ್ ಸಂಪತ್​ ರಾಜ್ ಭೇಟಿ ನೀಡಿ, ಕಾಮಗಾರಿ ತ್ವರಿತಗೋಳಿಸುವಂತೆ ಸೂಚನೆ ನೀಡುತ್ತಿದ್ದಾರೆ.

ಗಾಂಧಿನಗರದಲ್ಲಿ ನಡೆಯುತ್ತಿರುವ ವೈಟ್​ ಟಾಪಿಂಗ್ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಮೇಯರ್ ಸಾಹೇಬ್ರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು, ವೈಟ್​ ಟಾಪಿಂಗ್ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.

ವೈಟ್​ ಟಾಪಿಂಗ್ ಕಾಮಗಾರಿಯಿಂದ ನಮ್ಮ ಸಂಪ್​ಗಳಿಗೆ ಸ್ಯಾನಿಟರಿ ನೀರು ಸೇರುತ್ತಿದೆ ಎಂದು ಮೆಯರ್​ ಬಳಿ ತಮ್ಮ ನೋವು ತಿಳಿಸಿದ್ರು.

ಕೂಡಲೇ ಪಾಲಿಕೆ ಹಣದಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

ಗಾಂಧಿನಗರ ವಿಧಾನಸಭಾ ಕ್ಷೇತ್ರದ 17 ರಸ್ತೆಗಳಲ್ಲಿ ಸುಮಾರು 129 ಕೋಟಿ ಮೊತ್ತದ ಕಾಮಗಾರಿ ನಡೆಯುತ್ತಿದೆ, ಈಗಾಗಲೇ ಅರವತ್ತು ಪ್ರತಿಶತ ಕಾಮಗಾರಿ ಮುಗಿದಿದೆ. ಸಾರ್ವಜನಿಕರಿಗೆ ತೊಂದ್ರೆ ಆಗದಂತೆ ಕಾಮಗಾರಿ ಮುಗಿಸುವುದಾಗಿ ಮೇಯರ್ ಪ್ರತಿಕ್ರಿಯೆ ನೀಡಿದರು..

ಇದೆ ವೇಳೆ ಹೈಕೋರ್ಟ್​ ನೀಡಿದ ಗಡುವಿನೊಳಗೆ ರಸ್ತೆಗುಂಡಿಗಳನ್ನು ಮುಚ್ಚುತ್ತೇವೆ, ಅಲ್ಲದೆ ಅದಕ್ಕಾಗಿ ಬೇರೆ ವಿಭಾಗದ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

Next Story

RELATED STORIES